ಭದ್ರತೆ ನಡುವೆ ಮತದಾನ

Contributed by: ayyanagowdara@gmail.com|Vijaya Karnataka•
voting conducted with security and peace
ಭದ್ರತೆ ನಡುವೆ ಮತದಾನ

ವಿಕ ಸುದ್ದಿಲೋಕ ಹಗರಿಬೊಮ್ಮನಹಳ್ಳಿ
ರಾಜ್ಯ ವಿಧಾನಪರಿಷತ್ ನ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಶಾಂತಿಯುತವಾಗಿ ಶುಕ್ರವಾರ ನಡೆಯಿತು.

ತಾಲೂಕಿನ ಹಂಪಸಾಗರ,ತಂಬ್ರಹಳ್ಳಿ ಮತ್ತು ಪಟ್ಟಣ ಸೇರಿ ಒಟ್ಟು 3 ಕಡೆಗಳಲ್ಲಿಮತದಾನ ನಡೆಯಿತು. 476 ಮತದಾರರ ಪೈಕಿ 421 ಮತದಾರ ಶಿಕ್ಷಕರು ಮತ ಚಲಾಯಿಸಿದರು. ಮತದಾನ ಶಾಂತಿಯುತವಾಗಿತ್ತು. ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಪಟ್ಟಣದ ಮತಗಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು. ಮುಂಜಾನೆ ಮಂದಗತಿಯಲ್ಲಿದ್ದ ಮತದಾನ ಮಧ್ಯಾಹ್ನದ ವೇಳೆಗೆ ಪೂರ್ಣಗೊಂಡಿತ್ತು. ಸಿಪಿಐ ವಿಕಾಸ್ ಪಿ.ಲಮಾಣಿ, ಪಿಎಸ್ ಐ ಸುಜಾತ ಬಿಗಿ ಭದ್ರತೆ ಒದಗಿಸಿದ್ದರು.

ಚಿತ್ರ : 23ಎಚ್ ಬಿಎಚ್ 4

ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿವಿಧಾನಪರಿಷತ್ ನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಮತಗಟ್ಟೆಗೆ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಭೇಟಿ ನೀಡಿದರು.