ಪ್ರೀಮಿಯಂ ನಿವೇಶನಗಳ ಆಗರ ನೆಲಮಂಗಲ

Contributed by: babitha.salian@timesofindia.com|Vijaya Karnataka•
nelamangala a new haven for premium properties
ಪ್ರೀಮಿಯಂ ನಿವೇಶನಗಳ ಆಗರ ನೆಲಮಂಗಲ

-ಉತ್ತರ ಬೆಂಗಳೂರಿನ ಹೊಸ ರಿಯಾಲ್ಟಿ ಹಬ್ | ವಿಸ್ತರಿತ ಮೆಟ್ರೊ ಸಂಪರ್ಕದ ಅನುಕೂಲ
ಇಂಟ್ರೊ

ಬೆಂಗಳೂರು ನಗರ ವಿಸ್ತಾರವಾಗಿರುವ ಕಾರಣ ಆಸ್ತಿ ಹೂಡಿಕೆದಾರರು ಮತ್ತು ಮನೆ ಖರೀದಿದಾರರು ನೆಲಮಂಗಲದತ್ತ ಗಮನ ಹರಿಸುತ್ತಿದ್ದಾರೆ. ಆದ್ದರಿಂದ ಈ ಪ್ರದೇಶವೀಗ ಕೇವಲ ಹೊರವಲಯವಲ್ಲ, ಬದಲಿಗೆ ಇದುವೇ ಬೆಂಗಳೂರಿನ ಮುಂದಿನ ಅಭಿವೃದ್ಧಿ ಕೇಂದ್ರವಾಗಲಿದೆ. ಇಲ್ಲಿನ ಸೊಂಡೆಕೊಪ್ಪ ರಸ್ತೆ, ತಾವರೆಕೆರೆ ಸುತ್ತಮುತ್ತಲಿನ ಸೈಟ್ ಗಳ ಮೇಲಿನ ಹೂಡಿಕೆಯು ಭವಿಷ್ಯದಲ್ಲಿಅತ್ಯಂತ ಲಾಭದಾಯಕವಾಗಲಿದೆ.

ಬಬಿತಾ ಎಸ್ .

ಬೆಂಗಳೂರು ನಗರಕ್ಕೆ ಸರಿಸಮಾನವಾಗಿ ಬೆಳೆಯುತ್ತಿರುವ ನೆಲಮಂಗಲ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿಯೂ ಲಾಭದಾಯಕವಾಗಿ ಪರಿಣಮಿಸಿದೆ. ಇಲ್ಲಿನ ಸೊಂಡೆಕೊಪ್ಪ ರಸ್ತೆಗೆ ಸಮೀಪವಿರುವ ಪ್ರೀಮಿಯಂ ಸೈಟ್ ಗಳ ಮೇಲಿನ ಹೂಡಿಕೆಯು ಭವಿಷ್ಯದಲ್ಲಿಗಮನಾರ್ಹ ಆದಾಯ ತರಲಿದೆ.

ಅತ್ಯುತ್ತಮ ಕನೆಕ್ಟಿವಿಟಿ

ನೆಲಮಂಗಲದಲ್ಲಿಅನೇಕ ವಸತಿ ಯೋಜನೆಗಳು ಅಭಿವೃದ್ಧಿಗೊಳ್ಳುತ್ತಿವೆ. ಇಲ್ಲಿಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 48, ನೈಸ್ ರೋಡ್ , ದೊಡ್ಡಬಳ್ಳಾಪುರ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಮತ್ತು ಪ್ರಸ್ತಾವಿತ ನೆಲಮಂಗಲ ಮತ್ತು ತಾವರೆಕೆರೆ ಮೆಟ್ರೊ ಸ್ಟೇಷನ್ ಸಂಪರ್ಕದಿಂದಾಗಿ ಅತ್ಯುತ್ತಮ ಸಂಪರ್ಕ ಸೌಲಭ್ಯಗಳಿವೆ. ಪೀಣ್ಯ ಕೈಗಾರಿಕಾ ಪ್ರದೇಶ, ದಾಬಸ್ ಪೇಟೆ ಕೈಗಾರಿಕೆ ಪ್ರದೇಶ, ಕ್ವಿನ್ ಸಿಟಿ ಹಾಗೂ ಪ್ರಮುಖ ಕೈಗಾರಿಕಾ ಮತ್ತು ಕೇಂದ್ರಗಳಿಗೆ ಇದು ಸಮೀಪದಲ್ಲಿದೆ. ಇಲ್ಲಿಎಲ್ಲಾರೀತಿಯ ಆಧುನಿಕ ಸೌಲಭ್ಯಗಳಿರುವ, ಬಿಎಂಆರ್ ಡಿಎ, ರೇರಾ ಅನುಮೋದನೆ ಪಡೆದಿರುವ ಪ್ರೀಮಿಯಂ ವಸತಿ ನಿವೇಶನಗಳಿವೆ. ಗೇಟೆಡ್ ಕಮ್ಯೂನಿಟಿ, ವಿಲ್ಲಾನಿರ್ಮಾಣಕ್ಕೆ ವಿಶಾಲ ಸೈಟ್ ಗಳ ಹುಡುಕಾಟದಲ್ಲಿರುವವರಿಗೆ ಇಲ್ಲಿನ ಸೈಟ್ ಗಳು ಹೇಳಿಮಾಡಿಸಿದಂತಿವೆ.

ವಸತಿ ಯೋಗ್ಯ ತಾಣ

ಸೊಂಡೆಕೊಪ್ಪ ರಸ್ತೆ, ತಾವರೆಕೆರೆ, ದಾಸನಪುರ, ಅರಸಿನಕುಂಟೆ, ಆದರ್ಶ ನಗರ, ತುಮಕೂರು ರಸ್ತೆ, ಚಿಕ್ಕ ಮಧುರೆ ರಸ್ತೆ ಇತ್ಯಾದಿಗಳಿಂದ ಸುತ್ತುವರಿದಿರುವ ನೆಲಮಂಗಲ ಅನೇಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನೂ ಹೊಂದಿ ಜನರಿಗೆ ಉದ್ಯೋಗವಕಾಶ ನೀಡುತ್ತಿದೆ. ನೆಲಮಂಗಲದಿಂದ 11 ಕಿ.ಮೀ ದೂರದಲ್ಲಿಲಾಜಿಸ್ಟಿಕ್ ಪಾರ್ಕ್ವೊಂದಿದ್ದು, ಇದು ಕೂಡ ಈ ಪ್ರದೇಶದ ರಿಯಾಲ್ಟಿ ಬೂಮ್ ಗೆ ತನ್ನದೇ ಕೊಡುಗೆ ನೀಡಿದೆ. ನೆಲಮಂಗಲದ ಸುತ್ತಮುತ್ತ ಜಿಂದಾಲ್ ಸಿಟಿ, ಬಿಜಿಎಸ್ ಮೆಡಿಕಲ್ ಕಾಲೇಜ್ , ಬಿಜಿಎಸ್ ವರ್ಲ್ಡ್ ಸ್ಕೂಲ್ , ಆರ್ಕಿಡ್ ಇಂಟರ್ ನ್ಯಾಷನಲ್ , ಕ್ಲೂನಿ ಕಾನ್ವೆಂಟ್ , ರತನ್ ಮೆಮೋರಿಯಲ್ , ಎಂಎಸ್ ರಾಮಯ್ಯ ಹರ್ಷ ಹಾಸ್ಪಿಟಲ್ , ಪೀಪಲ್ ಟ್ರೀ ಮುಂತಾದ ಶೈಕ್ಷಣಿಕ ಸಂಸ್ಥೆಗಳಿದ್ದು, ಇಲ್ಲಿನೆಲೆಸಿದವರಿಗೆ ಅತ್ಯುತ್ತಮ ಶಿಕ್ಷಣ ಸೌಲಭ್ಯ ಕಲ್ಪಿಸುತ್ತಿವೆ. ಇವೆಲ್ಲವೂ ನೆಲಮಂಗಲದಲ್ಲಿರಿಯಾಲ್ಟಿ ಚಟುವಟಿಕೆಗಳು ತ್ವರಿತಗತಿಯಲ್ಲಿಗರಿಗೆದರಲು ಕಾರಣವಾಗಿವೆ.

ಕೋಟ್

ಉತ್ತಮ ಆಸ್ತಿ ಹೂಡಿಕೆಗೆ ನೆಲಮಂಗಲ ಪ್ರಶಸ್ತವಾಗಿದೆ. ಇಲ್ಲಿನ ಸೊಂಡೆಕೊಪ್ಪ ರಸ್ತೆ, ತಾವರೆಕೆರೆ ನಗರ ಪ್ರದೇಶವಾಗಿದ್ದು, ದೀರ್ಘಾವಧಿಯಲ್ಲಿಇಲ್ಲಿನ ಆಸ್ತಿಯ ಮೌಲ್ಯ ವೃದ್ಧಿಯಾಗಲಿದೆ. ಇಲ್ಲಿನ ಪ್ರೀಮಿಯಂ ಸೈಟ್ ಗಳಿಗೆ ಪ್ರಮುಖ ರಸ್ತೆ, ಸಾರಿಗೆ ವ್ಯವಸ್ಥೆ ಹಾಗೂ ಪ್ರಮುಖ ಸ್ಥಳಗಳಿಗೆ ಸುಲಭ ಸಂಪರ್ಕವಿದೆ. ವಿಸ್ತರಿತ ಮೆಟ್ರೊ ಸಂಪರ್ಕದ ಸಾಧ್ಯತೆ ಹಾಗೂ ಭವಿಷ್ಯದ ಮೂಲಸೌಕರ್ಯ ಅಭಿವೃದ್ಧಿಯಿಂದ ಹೆಚ್ಚುವರಿ ಪ್ರಯೋಜನ ಪಡೆಯಲಿರುವ ಈ ಪ್ರದೇಶದಲ್ಲಿಮನೆ ಖರೀದಿದಾರರ ಬಜೆಟ್ ಗೆ ಹೊಂದುವ ವಿವಿಧ ಆಸ್ತಿ ಆಯ್ಕೆಗಳಿವೆ. ಸ್ಪಷ್ಟ ಆಸ್ತಿ ದಾಖಲೆಗಳು ಮತ್ತು ಅನುಮೋದನೆಗಳಿರುವ ಇಲ್ಲಿನ ಸೈಟ್ ಗಳು ಸ್ಮಾರ್ಟ್ ಹೂಡಿಕೆದಾರರಿಗೆ ಹೇಳಿಮಾಡಿಸಿದಂತಿವೆ.

ಸಿ.ಎನ್ . ಹರೀಶ್ ಕುಮಾರ್ | ಮ್ಯಾನೇಜಿಂಗ್ ಪಾಟ್ರ್ನರ್ , ಅರ್ಥ ಸಿದ್ಧಿ ವೆಂಚರ್ಸ್

ಬಾಕ್ಸ್

ನೆಲಮಂಗಲ ಮತ್ತು ತಾವರೆಕೆರೆ ಮೆಟ್ರೊ ಸಂಪರ್ಕ

ನೆಲಮಂಗಲ ಮೆಟ್ರೊದಿಂದ ಕೇವಲ 3 ನಿಮಿಷ ಹಾಗೂ ತಾವರೆಕೆರೆ ಮೆಟ್ರೊದಿಂದ 10 ನಿಮಿಷಗಳ ದೂರದಲ್ಲಿರುವ ಸೊಂಡೆಕೊಪ್ಪ ರಸ್ತೆ ಸುತ್ತಮುತ್ತಲಿನ ಪ್ರದೇಶದಲ್ಲಿನ ವಸತಿಯು ಜನರ ದೈನಂದಿನ ಪ್ರಯಾಣವನ್ನು ಇನ್ನಷ್ಟು ಸುಲಭಗೊಳಿಸಲಿದೆ. ಇದೇ ರೀತಿ ಪ್ರಸ್ತಾವಿತ ಬೆಂಗಳೂರು ತುಮಕೂರು ಮೆಟ್ರೊ ಕಾರಿಡಾರ್ ನ ಭಾಗವಾಗಿ ನೆಲಮಂಗಲಕ್ಕೆ ಭವಿಷ್ಯದಲ್ಲಿನಮ್ಮ ಮೆಟ್ರೊ ಸಂಪರ್ಕ ಕಲ್ಪಿಸುವ ಯೋಜನೆ ಕೂಡ ಪರಿಗಣನೆಯಲ್ಲಿದೆ. ಮಾದಾವರದಿಂದ ನೆಲಮಂಗಲದವರೆಗೆ ಮೆಟ್ರೊ ಮಾರ್ಗವನ್ನು ವಿಸ್ತರಿಸುವ ಪ್ರಸ್ತಾವನೆಯು ಬೆಂಗಳೂರಿನೊಂದಿಗೆ ಸಂಪರ್ಕ ಸುಧಾರಿಸುವುದರ ಜತೆಗೆ ಈ ಭಾಗದಲ್ಲಿಬೆಳೆಯುತ್ತಿರುವ ವಸತಿ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡುವ ನಿರೀಕ್ಷೆಯಿದೆ. ತಾವರೆಕೆರೆ ಕೂಡ ಭವಿಷ್ಯದ ಅಭಿವೃದ್ಧಿಗೆ ಉತ್ತಮ ಅವಕಾಶಗಳಿರುವ ಪ್ರದೇಶವಾಗಿ ಹೊರಹೊಮ್ಮುತ್ತಿದೆ. ಬೆಂಗಳೂರಿನಲ್ಲಿವಿಸ್ತರಿಸುತ್ತಿರುವ ಸಾರಿಗೆ ಜಾಲದೊಂದಿಗೆ ಉತ್ತಮ ಸಂಪರ್ಕ ಸಾಧಿಸುವ ಸಾಧ್ಯತೆ ಈ ಪ್ರದೇಶದ ಬೆಳವಣಿಗೆಗೆ ಪೂರಕವಾಗಿದೆ.

ಬಾಕ್ಸ್

ಸ್ಯಾಟಲೈಟ್ ಟೌನ್ ವರದಾನ

ಬೆಂಗಳೂರಿನ ಪ್ರಸ್ತಾವಿತ ನಾಲ್ಕು ಸ್ಯಾಟಲೈಟ್ ಟೌನ್ ಗಳಲ್ಲಿನೆಲಮಂಗಲ ಕೂಡ ಒಳಗೊಂಡಿದ್ದು, ಇದರಿಂದ ಈ ಭಾಗದಲ್ಲಿಅಭಿವೃದ್ಧಿ ಕಾರ್ಯಗಳು ಚುರುಕು ಪಡೆದಿವೆ. ಇಲ್ಲಿಮೆಟ್ರೊ, ರೈಲು ಸೇರಿದಂತೆ ವಿವಿಧ ಸಾರಿಗೆ ಸಂಪರ್ಕಗಳು ಸಾಕಷ್ಟು ಅಭಿವೃದ್ಧಿಗೊಳ್ಳಲಿದ್ದು, ಹೈಟೆಕ್ ಟ್ರಾವೆಲ್ ವ್ಯವಸ್ಥೆಯಿಂದಾಗಿ ಸಂಚಾರ ವ್ಯವಸ್ಥೆಯೂ ಸುಗಮಗೊಳ್ಳಲಿದೆ. ಆದ್ದರಿಂದ ಬೆಂಗಳೂರು ನಗರದ ಹೊರವಲಯದಲ್ಲಿಸೈಟ್ ಹೊಂದಲು ಬಯಸುವವರಿಗೆ ನೆಲಮಂಗಲ ಉಧಿತ್ತಧಿಮಧಿವಾಧಿಗಿದೆ.