ರಿಕ್ಟರ್ ಮಾಪಕದಲ್ಲಿಭೂಕಂಪನ 3.0 ತೀವ್ರತೆ ದಾಖಲು

Contributed by: adarshkodi15@gmail.com|Vijaya Karnataka•
earthquake magnitude 30 where did it strike
ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿಯ ಸುತ್ತಮುತ್ತಲ್ಲಿನ ಗ್ರಾಮದಲ್ಲಿಶುಕ್ರವಾರ ಬೆಳಗ್ಗೆ 9 ಗಂಟೆ 1 ನಿಮಿಷ 59 ಸೆಕೆಂಡ್ ಗೆ ಭೂಕಂಪನ ಕಲ್ಪಿಸಿದ್ದು, ರಿಕ್ಟರ್ ಮಾಪಕದಲ್ಲಿ3.0 ತೀವ್ರತೆ ದಾಖಲಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಅಧಿಕೃತ ಮಾಹಿತಿ ನೀಡಲಾಗಿದ್ದು, ತಾಲೂಕಿನ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮೋಜನಹಳ್ಳಿ ಬಳಿ ಭೂಕಂಪನವಾಗಿದ್ದು, ಗ್ರಾಮದಿಂದ 500 ಮೀಟರ್ ಉತ್ತರಕ್ಕೆ ಭೂಕಂಪನದ ಬಿಂದು ಪತ್ತೆಯಾಗಿದೆ. ಭೂಮಿಯ 10 ಕಿ.ಮೀ. ಆಳದಲ್ಲಿಭೂಕಂಪನ ಸಂಭವಿಸಿದೆ ಎನ್ನಲಾಗಿದೆ. ಈ ಭಾಗದ ನರಗನಹಳ್ಳಿ, ತೂಬಗೆರೆ ಹಾಗೂ ಕಾರನಾಳ ಗ್ರಾಮಗಳ ಸಮೀಪ ಭೂಕಂಪನವಾಗಿದ್ದು, ಭೂಕಂಪನದ ಕೇಂದ್ರಬಿಂದುವಿನಿಂದ 20ರಿಂದ 30 ಕಿ.ಮೀ. ವ್ಯಾಪ್ತಿಯಲ್ಲಿಕಂಪನದ ಅನುಭವವಾಗಿದೆ. ಭೂಕಂಪನದ ತೀವ್ರತೆ ಕಡಿಮೆ, ಯಾವುದೇ ಹಾನಿ ಇಲ್ಲಎಂದು ಭೂಕಂಪನದ ಕುರಿತು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಅಧಿಕೃತ ಪ್ರಕಟಣೆ ಹೊರಡಿಸಿ ದೃಢಪಡಿಸಿದೆ.