- ಯಾವ ಶಿಷ್ಟಾಚಾರದಂತೆ ವೇದಿಕೆಗೆ ಬಂದರು? ಶ್ರೀವತ್ಸ ಪ್ರಶ್ನೆವಿಕ ಸುದ್ದಿಲೋಕ ಮೈಸೂರು
ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡುವ ವೇದಿಕೆಯ ಮೇಲೆ ನಿಂತು ಚಿನ್ನದ ಅಂಬಾರಿಯಲ್ಲಿತಾಯಿ ಚಾಮುಂಡೇಶ್ವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪತ್ನಿಯೂ ಪುಷ್ಪಾರ್ಚನೆ ಮಾಡಿರುವುದಕ್ಕೆ ಬಿಜೆಪಿ ಶಾಸಕ ಶ್ರೀವತ್ಸ ಕಿಡಿಕಾರಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ‘‘ದಸರಾ ಇತಿಹಾಸದಲ್ಲಿಇದೇ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರ ಪತ್ನಿ ಪುಷ್ಪಾರ್ಚನೆ ಮಾಡಿದ್ದಾರೆ. ಇತಿಹಾಸದಲ್ಲೇ ಮಹಾರಾಣಿಯರು ಕೂಡ ಅಂಬಾರಿಯಲ್ಲಿರುವ ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡಲು ವೇದಿಕೆ ಹತ್ತುತ್ತಿರಲಿಲ್ಲ. ಮುಖ್ಯಮಂತ್ರಿ ಪತ್ನಿಗೆ ಶಿಷ್ಟಾಚಾರವಿದೆಯೆ? ಯಾಕೆ ಅವರು ಪುಷ್ಪಾರ್ಚನೆ ಮಾಡಿದರು? ಅವರನ್ನು ತಡೆಯುವ ಶಕ್ತಿ ಜಿಲ್ಲಾಧಿಕಾರಿಗೆ ಇರಲಿಲ್ಲವೆ?,’’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾಡಳಿತದ ನಡೆಗೆ ಶಾಸಕ ಶ್ರೀವತ್ಸ ವಾಗ್ದಾಳಿ ನಡೆಸಿದರು.
‘‘ಮೈಸೂರು ದಸರಾ ಮಹೋತ್ಸವದಲ್ಲಿಇಡೀ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಒಂದು ಕಡೆ ಸಚಿವರನ್ನು ತಡೆಯುವುದು. ಮತ್ತೊಂದು ಕಡೆ ಪುಷ್ಪಾರ್ಚನೆಗೆ ಬೇರೆಯವರನ್ನು ಬಿಟ್ಟುಕೊಳ್ಳುವುದು. ದಸರಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರೂ ನಮ್ಮನ್ನು ನಂದಿ ಪೂಜೆಗೆ ಬಿಡದಿರುವುದು, ಆಹ್ವಾನ ಪತ್ರಿಕೆಯಲ್ಲಿಹೆಸರಿಲ್ಲದ ವ್ಯಕ್ತಿ ಕಾಣಿಸಿಕೊಂಡಿರುವುದು. ಈ ಎಲ್ಲದರ ಬಗ್ಗೆ ಸ್ವೀಕರ್ ಗೆ ದೂರು ನೀಡಲಾಗುವುದು,’’ ಎಂದು ಹೇಳಿದರು.
‘‘ರಾಜ್ಯ ಪೊಲೀಸ್ ಮಹಾನಿರ್ದೇಶಕ ಸಲೀಂ ಕೆಳಗಡೆ ನಿಂತಿದ್ದಾರೆ. ಮೈಸೂರು ಪೊಲೀಸ್ ಆಯುಕ್ತರು ವೇದಿಕೆಯ ಮೇಲೆ ಪುಷ್ಪಾರ್ಚನೆ ಮಾಡಿದ್ದಾರೆ. ಮುಸ್ಲಿಂ ಎಂದು ಅವರನ್ನು ವೇದಿಕೆಗೆ ಬಿಡಲಿಲ್ಲವೆ? ದಸರಾದಲ್ಲಿಅವರಿಗೆ ಹೇಗೆ ಬೇಕು ಹಾಗೆ ಶಿಷ್ಟಾಚಾರ ಮಾಡಿಕೊಂಡಿದ್ದಾರೆ. ಇದನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ,’’ ಎಂದು ಆಕ್ರೋಶ ವ್ಯಕ್ತಪಡಿಸಿದರು.