ತಡರಾತ್ರಿವರೆಗೆ ಪಟಾಕಿ ಸಿಡಿತ: ಫನ್ ವಲ್ಡ…ರ್ ವಿರುದ್ಧ ನಟಿ ರಮ್ಯಾ ಕಿಡಿ

Contributed by: girish.jr@timesofindia.com|Vijaya Karnataka•
fireworks late at night at fun world actress ramyas angry outburst
ವಿಕ ಸುದ್ದಿಲೋಕ ಬೆಂಗಳೂರು

‘ಫನ್ ವರ್ಲ್ಡ್’ ಆವರಣದಲ್ಲಿಮೋಜು ಮಸ್ತಿ ಹೆಸರಿನಲ್ಲಿತಡರಾತ್ರಿ ಪಟಾಕಿ ಸಿಡಿಸಿ, ಭಾರಿ ಶಬ್ದದೊಂದಿಗೆ ಹಾಡುಗಳನ್ನು ಹಾಕಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ ಘಟನೆಗೆ ಸಂಬಂಧಿಸಿದಂತೆ ಚಿತ್ರ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಫನ್ ವರ್ಲ್ಡ್’ ಆವರಣದಲ್ಲಿತಡರಾತ್ರಿ ಸುಮಾರು 3 ಗಂಟೆ ವೇಳೆಗೆ ನಡೆದಿರುವ ಈ ಆಚರಣೆಯನ್ನು ಖಂಡಿಸಿರುವ ರಮ್ಯಾ, ನಿಯಮ ಉಲ್ಲಂಘಿಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರು ನಗರ ಪೊಲೀಸರಿಗೆ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ.

ಘಟನೆ ಸಂಬಂಧ ಎಕ್ಸ್ ಖಾತೆಯಲ್ಲಿಅಸಮಾಧಾನ ವ್ಯಕ್ತಪಡಿಸಿರುವ ರಮ್ಯಾ, ‘‘ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯವರೆಗೆ ಸಾರ್ವಜನಿಕ ಸ್ಥಳಗಳಲ್ಲಿಭಾರಿ ಶಬ್ದದ ಪಟಾಕಿ ಸಿಡಿಸುವುದನ್ನು ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ನಿರ್ಬಂಧಿಸಿದೆ. ವಿಶೇಷ ಕಾರ್ಯಕ್ರಮಗಳಿಗೆ ಅನುಮತಿ ಇದ್ದರೂ ಮಧ್ಯರಾತ್ರಿಯ ನಂತರ ಲೌಡ್ ಸ್ಪೀಕರ್ ಗಳನ್ನು ಬಳಸಲು ಕಾನೂನಿನಲ್ಲಿಅವಕಾಶವಿಲ್ಲ. ಹೀಗಿದ್ದರೂ ನಿಯಮಗಳನ್ನು ಗಾಳಿಗೆ ತೂರಿ ಸಾರ್ವಜನಿಕರ ಶಾಂತಿಗೆ ಭಂಗ ತರುವುದು ಎಷ್ಟು ಸರಿ?’’ ಎಂದು ಪ್ರಶ್ನಿಸಿದ್ದಾರೆ.

‘‘ವಿಶೇಷ ಸಂದರ್ಭಗಳಲ್ಲಿಅಥವಾ ಹಬ್ಬ ಹರಿದಿನಗಳಲ್ಲಿಸಾರ್ವಜನಿಕರು ಸ್ವಲ್ಪ ಮಟ್ಟಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಸಹಜ ಎಂಬುದು ನನಗೆ ಅರ್ಥವಾಗುತ್ತದೆ. ಆದರೆ, ಪ್ರತಿಬಾರಿ ಕಾರ್ಯಕ್ರಮದ ಹೆಸರಿನಲ್ಲೂಸಾರ್ವಜನಿಕರು ಪ್ರತಿನಿತ್ಯ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ನಿರೀಕ್ಷಿಸುವುದು ಖಂಡಿತ ಸರಿಯಲ್ಲ. ಫನ್ ವರ್ಲ್ಡ್ ಸುತ್ತಮುತ್ತ ಪ್ರಮುಖ ಆಸ್ಪತ್ರೆಗಳಿವೆ, ನೂರಾರು ಹಿರಿಯ ನಾಗರಿಕರು ಹಾಗೂ ಪುಟ್ಟ ಮಕ್ಕಳು ವಾಸಿಸುತ್ತಿದ್ದಾರೆ. ತಡರಾತ್ರಿ 3 ಗಂಟೆಗೆ ಈ ರೀತಿ ಅತಿಯಾದ ಶಬ್ದ ಮಾಡುವುದರಿಂದ ಅನಾರೋಗ್ಯಪೀಡಿತರು ಮತ್ತು ಕಿರಿಯರು-ಹಿರಿಯರಿಗೆ ತೊಂದರೆಯಾಗಿದೆ,’’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘‘ಘಟನೆ ಸಂಬಂಧ ರಾತ್ರಿ 2.30ಕ್ಕೆ ಪೊಲೀಸ್ ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿದ್ದೆ. ಅಲ್ಲದೆ, ನಗರ ಪೊಲೀಸ್ ಆಯುಕ್ತರು ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ದೂರು ನೀಡಿದ್ದೇನೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಭಾವಿಸುತ್ತೇನೆ. ಇಂತಹ ಜವಾಬ್ದಾರಿರಹಿತ ಕೃತ್ಯಗಳು ನಗರದಲ್ಲಿಮರುಕಳಿಸದಂತೆ ತಡೆಯಲು ಜಾಗೃತಿ ಮೂಡಿಸುವುದರ ಜತೆಗೆ, ಮಧ್ಯರಾತ್ರಿ ನಿಯಮ ಮೀರಿ ಕಾರ್ಯಕ್ರಮ ನಡೆಸಿದ ಆಯೋಜಕರು ಹಾಗೂ ಫನ್ ವರ್ಲ್ಡ್ ಆಡಳಿತ ಮಂಡಳಿಯ ವಿರುದ್ಧ ಬೆಂಗಳೂರು ಪೊಲೀಸರು ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು,’’ ಎಂದು ರಮ್ಯಾ ಒತ್ತಾಯಿಸಿದ್ದಾರೆ.

ಆರೋಪ ನಿರಾಕರಣೆ:

ರಮ್ಯಾರ ಆರೋಪವನ್ನು ಸಂಪೂರ್ಣವಾಗಿ ನಿರಾಕರಿಸಿರುವ ಫನ್ ವರ್ಲ್ಡ್ ವ್ಯವಸ್ಥಾಪಕ ಸೂರ್ಯ, ‘‘ನಟಿ ರಮ್ಯಾ ಹೇಳಿದ ಸಮಯದಲ್ಲಿನಮ್ಮ ಫನ್ ವರ್ಲ್ಡ್ ತೆರೆದಿರುವುದಿಲ್ಲ. ಬೆಳಗ್ಗೆ 10ರಿಂದ ಸಂಜೆ 7ರೊಳಗೆ ಎಲ್ಲಾ ಚಟುವಟಿಕೆಗಳು ಮುಗಿಯುತ್ತವೆ. ನಮ್ಮಲ್ಲಿಯಾವುದೇ ರೀತಿಯ ಪಟಾಕಿಗಳಿಗೆ ಅನುಮತಿಯಿಲ್ಲ. ಒಳಗೆ ಬರುವವರ ಬ್ಯಾಗ್ ಸಂಪೂರ್ಣ ಪರಿಶೀಲಿಸಿ ಕಳುಹಿಸಲಾಗುತ್ತದೆ. ಪಕ್ಕದಲ್ಲೇ ಪೊಲೀಸ್ ಠಾಣೆ ಇದೆ. ಏನೇ ಆದರೂ ಪೊಲೀಸರು ನಮ್ಮನ್ನು ಗಮನಿಸ್ತಾರೆ. ಬೇಕಾದರೆ ನಮ್ಮ ಸಿ.ಸಿ ಕ್ಯಾಮೆರಾಗಳನ್ನು ಪರಿಶೀಲಿಸಬಹುದು,’’ ಎಂದು ತಿಳಿಸಿದ್ದಾರೆ.

‘‘ರಮ್ಯಾ ಅವರು ತಪ್ಪು ಮಾಹಿತಿಯಿಂದ ಸಾಮಾಜಿಕ ಜಾಲತಾಣದಲ್ಲಿಹೀಗೆ ಪೋಸ್ಟ್ ಹಾಕಿರಬಹುದು. ನಮ್ಮ ಎದುರು ಭಾಗದಲ್ಲಿಪ್ರತಿವರ್ಷ ದಸರಾ ಹಬ್ಬ ಆಚರಣೆ ಮಾಡುತ್ತಾರೆ. ಬಹುಶಃ ಅವರು ಏನಾದರೂ ಪಟಾಕಿ ಸಿಡಿಸಿರಬಹುದು. ಅದನ್ನು ರಮ್ಯಾ ಅವರು ತಪ್ಪಾಗಿ ತಿಳಿದುಕೊಂಡು ನಮ್ಮ ಮೇಲೆ ಆರೋಪ ಮಾಡಿರಬಹುದು. ನಾವು ಒಳ್ಳೆಯ ರೀತಿಯಿಂದ ಮನವಿ ಮಾಡುತ್ತಿದ್ದೇವೆ. ನಿಮಗೆ ತಪ್ಪು ಮಾಹಿತಿ ಬಂದಿದೆ. ಒಳ್ಳೆಯ ರೀತಿಯಿಂದ ಟ್ವೀಟ್ ತೆಗೆಯಿರಿ,’’ ಎಂದು ಸೂರ್ಯ ಹೇಳಿದ್ದಾರೆ.