ಅಂಬಾಭವಾನಿ ದರ್ಶನಕ್ಕೆ ಕಂಗಟಿಯಿಂದ ಪಾದಯಾತ್ರೆ

Contributed by: shivumoktedar@gmail.com|Vijaya Karnataka•
foot pilgrimage to ambabhavani from kangi village
ಚಿತ್ರ : 22ಎಡಿ1

ಔರಾದ್ ತಾಲೂಕಿನ ತೇಗಂಪುರ ಗ್ರಾಮದಲ್ಲಿತುಳಜಾಪುರ ಅಂಬಾಭವಾನಿ ದೇವಸ್ಥಾನಕ್ಕೆ ಪಾದಯಾತ್ರೆ ಕೈಗೊಂಡಿರುವ ಭಕ್ತಾದಿಗಳಿಗೆ ಗುರುವಾರ ಅಲ್ಪೋಪಹಾರ ಸೇವೆ ಮಾಡಿರುವದು.
ಪಾದಯಾತ್ರಿಗಳಿಗೆ ತೇಗಂಪುರದಲ್ಲಿಅಲ್ಪೋಪಹಾರ ಸೇವೆ

ಅಂಬಾಭವಾನಿ ದರ್ಶನಕ್ಕೆ ಕಂಗಟಿಯಿಂದ ಪಾದಯಾತ್ರೆ

ವಿಕ ಸುದ್ದಿಲೋಕ ಔರಾದ್

ತೆಲಂಗಾಣದ ಕಂಗಟಿ ಗ್ರಾಮದಿಂದ ಮಹಾರಾಷ್ಟ್ರದ ತುಳಜಾಪುರದಲ್ಲಿರುವ ಪ್ರಸಿದ್ಧ ಅಂಬಾಭವಾನಿ ದೇವಸ್ಥಾನಕ್ಕೆ ಭಕ್ತರು ಗುರುವಾರ ನಾಲ್ಕು ದಿನಗಳ ಪಾದಯಾತ್ರೆ ಆರಂಭಿಸಿದ್ದಾರೆ. ದಸರಾ ಹಬ್ಬದ ಮರುದಿನ ಸಸಿಗಳು ವಿಸರ್ಜನೆ ಮಾಡುವ ಮೂಲಕ ದೇವಿಯ ದರ್ಶನ ಪಡೆಯುವ ಸಂಕಲ್ಪದೊಂದಿಗೆ ಕಾಲ್ನಡಿಗೆಯಲ್ಲಿಸಾಗುತ್ತಿರುವ ಭಕ್ತರಿಗೆ ಮಾರ್ಗಮಧ್ಯೆ ವಿವಿಧ ಗ್ರಾಮಗಳ ಜನರು ದಾಸೋಹ, ಅಲ್ಪೋಪಹಾರ ಹಾಗೂ ಟೀ ವ್ಯವಸ್ಥೆ ಕಲ್ಪಿಸುವ ಮೂಲಕ ಭಕ್ತಿ ಮತ್ತು ಸೇವಾಭಾವ ಮೆರೆಯುತ್ತಿದ್ದಾರೆ.

ಕಂಗಟಿ ಗ್ರಾಮದಿಂದ ಆರಂಭಗೊಂಡ ಪಾದಯಾತ್ರೆ ನಾಲ್ಕು ದಿನಗಳ ಕಾಲ ನಡೆಯಲಿದೆ. ಮೊದಲ ದಿನ ಕಮಲನಗರದಲ್ಲಿವಾಸ್ತವ್ಯ ಹೂಡಲಿರುವ ಭಕ್ತರು, ಎರಡನೇ ದಿನ ಮಹಾರಾಷ್ಟ್ರದ ನಿಲಂಗಾ ತಲುಪಿ ತಂಗಲಿದ್ದಾರೆ. ಮೂರನೇ ದಿನ ಕೌಸಿಯಲ್ಲಿವಾಸ್ತವ್ಯ ಮಾಡಲಿದ್ದು, ನಾಲ್ಕನೇ ದಿನ ತುಳಜಾಪುರದ ಅಂಬಾಭವಾನಿ ದೇವಿಯ ಸನ್ನಿಧಿ ತಲುಪಿ ದರ್ಶನ ಪಡೆಯಲಿದ್ದಾರೆ ಎಂದು ಪಾದಯಾತ್ರಿಗಳಾದ ಸಂಜುರಡ್ಡಿ, ಮಹಿಪತಿ ನಾಯ್ ್ಕ, ವಿದ್ಯಪ್ಪ ಶೆಟಕಾರ, ಚನ್ನಬಸಪ್ಪ, ಸತೀಶ ರಡ್ಡಿ, ಸತ್ಯನಾರಾಯಣ ಹಾಗೂ ಕಾಶಿನಾಥ ಸ್ವಾಮಿ ತಿಳಿಸಿದ್ದಾರೆ.

ಪಾದಯಾತ್ರೆಯ ಮಾರ್ಗದಲ್ಲಿಭಕ್ತರಿಗೆ ಅನುಕೂಲ ಕಲ್ಪಿಸಲು ವಿವಿಧ ಗ್ರಾಮಗಳ ಜನರು ಸ್ವಯಂಪ್ರೇರಿತವಾಗಿ ಮುಂದೆ ಬರುತ್ತಿದ್ದಾರೆ. ಕೆಲವೆಡೆ ದಾಸೋಹದ ವ್ಯವಸ್ಥೆ ಮಾಡಲಾಗಿದ್ದರೆ, ಇನ್ನೂ ಕೆಲವು ಕಡೆ ಅಲ್ಪೋಪಹಾರ ಹಾಗೂ ಟೀ ವಿತರಿಸುವ ಮೂಲಕ ಪಾದಯಾತ್ರಿಗಳಿಗೆ ನೆರವಾಗುತ್ತಿದ್ದಾರೆ. ದೇವಿಯ ದರ್ಶನಕ್ಕಾಗಿ ದೂರದ ಊರಿನಿಂದ ಕಾಲ್ನಡಿಗೆಯಲ್ಲಿಸಾಗುತ್ತಿರುವ ಭಕ್ತರಿಗೆ ಗ್ರಾಮಸ್ಥರ ಆತಿಥ್ಯ ಹೊಸ ಉತ್ಸಾಹ ತುಂಬುತ್ತಿದೆ. ಪಾದಯಾತ್ರೆಯ ಮಾರ್ಗದಲ್ಲಿರುವ ತೇಗಂಪೂರ ಗ್ರಾಮದಲ್ಲಿಮಹೇಶ ಪಾಟೀಲ್ ಅವರು ಭಕ್ತರಿಗೆ ಅಲ್ಪೋಪಹಾರದ ವ್ಯವಸ್ಥೆ ಕಲ್ಪಿಸಿ ಗಮನ ಸೆಳೆದರು. ಕಾಲ್ನಡಿಗೆಯಲ್ಲಿಸಾಗುತ್ತಿದ್ದ ಭಕ್ತರಿಗೆ ಉಪಾಹಾರ ಒದಗಿಸುವ ಮೂಲಕ ಸೇವಾ ಮನೋಭಾವ ಪ್ರದರ್ಶಿಸಿದರು. ಧಾರ್ಮಿಕ ಕಾರ್ಯಗಳಲ್ಲಿಪಾಲ್ಗೊಳ್ಳುವ ಭಕ್ತರಿಗೆ ನೆರವಾಗುವ ಮೂಲಕ ಗ್ರಾಮಸ್ಥರು ಮಾನವೀಯತೆ ಹಾಗೂ ಭಕ್ತಿಭಾವ ಮೆರೆದರು. ಪ್ರಮುಖರಾದ ರೇವಣಪ್ಪ ಮಜಿಗೆ, ಚನ್ನಪ್ಪ ಮಜಿಗೆ, ಮಾಜಿ ಗ್ರಾಪಂ ಸದಸ್ಯ ಸತೀಶ ಚಿಟಮೇ, ಸಿದ್ದು ಚಿಟಮೇ, ಓಂಕಾರ ಚಿಟಮೆ ಸೇರಿ ಅನೇಕರಿದ್ದರು.