ಮೇಲುಕೋಟೆ

Contributed by: vkmelkote@gmail.com|Vijaya Karnataka•
melukote the ashwavanotsava of vijayadashami is a testimony to the devotees grandeur
ವಿಕ ಸುದ್ದಿಲೋಕ ಮೇಲುಕೋಟೆ

ಚೆಲುವನಾರಾಯಣ ಸ್ವಾಮಿಯ ಅಶ್ವವಾಹನೋತ್ಸವ ದ ಜಂಬೂಸವಾರಿ ಮತ್ತು ವಿಜಯೋತ್ಸವ ಮೆರವಣಿಗೆ ವಿಜಯದಶಮಿಯ ದಿನವಾದ ಬುಧವಾರ ಸಂಜೆ ಸಾವಿರಾರು ಭಕ್ತರ ಹರ್ಷೋಧ್ಘಾರದ ನಡುವೆ ವಿಜೃಂಭಣೆಯಿಂದ ನೆರವೇರಿತು. ವಾಹನೋತ್ಸವ ಮಂಟಪದಿಂದ ಸಂಜೆ 4-30ಕ್ಕೆ ಪೊಲೀಸ್ ಗೌರವವಂದನೆಯೊಂದಿಗೆ ಆರಂಭಗೊಂಡ ಅಶ್ವವಾಹನೋತ್ಸವ ರಾಜಬೀದಿ ಬಸ್ ನಿಲ್ದಾಣದ ರಸ್ತೆಯಮೂಲಕ ಬನ್ನಿಮಂಟಪ ತಲುಪಿತು. ಅಲ್ಲಿರುವ ಶಮೀವೃಕ್ಷಕ್ಕೆ ಸಾಂಪ್ರದಾಯಿಕವಾಗಿ ಪೂಜೆನೆರವೇರಿಸಿದ ನಂತರ ದಶದಿಕ್ಕುಗಳಿಗೂ ಬಾಣಪ್ರಯೋಗ ಮಾಡಿ ನಮ್ಮಲ್ಲಿರುವ ರಾಕ್ಷಸಗುಣಗಳು ಸಂಹಾರವಾಗಿ ಸಾತ್ವಿಕ ಗುಣಗಳು ನೆಲೆಸಲಿ, ನಾಡು ಮಳೆಬೆಳೆಯಿಂದ ಕೂಡಿ ಸಮೃದ್ಧಿಯಾಗಿಲಿ ಎಂದು ಲೋಕಕಲ್ಯಾಣಾರ್ಥವಾಗಿ ಪ್ರಾರ್ಥಿಸಲಾಯಿತು. ಶ್ರೀರಾಮಚಂದ್ರ ರಾವಣನ ಸಂಹಾರ ಮಾಡಿದ ನಿಮಿತ್ತ ನಡೆಯುವ ವಿಜದಶಮಿಯ ಆಚರಣೆಗೆ ಮಹತ್ವನೀಡಲು ಸೂಚಿಸಿದ್ದ ಪರಿಣಾಮ ಈ ವರ್ಷ ಉತ್ಸವ ವಿಶೇಷಮಹತ್ವಪಡೆದುಕೊಂಡಿತ್ತು. ಬನ್ನೀಪೂಜೆಯಲ್ಲಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಹೋದರ ರಾಘು ದೇವಾಲಯದ ಕಾರ್ಯನಿರ್ವಾಹಕ ಅಧಿ ಕಾರಿ ಶೀಲಾ, ಪಾರುಪತ್ತೇಗಾರ್ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕನಗೋನಹಳ್ಳಿ ಪರಮೇಶಗೌಡ ಸೇರಿದಂತೆ ಎಲ್ಲಾಸದಸ್ಯರು, ಕೈಂಕರ್ಯಪರರು ಭಾಗಿಯಾಗಿದ್ದರು. ಬನ್ನಿಪೂಜೆಯ ನಂತರ ಚೆಲುವನಾರಾಯಣಸ್ವಾಮಿಯವರ ವಿಜಯೋತ್ಸವ ಭವ್ಯಮೆರವಣಿಗೆಯೊಂದಿಗೆ ದೇವಾಲಯದತ್ತ ಸಾಗಿ ಅಂಗಡೀಬೀದಿವೃತ್ತದಲ್ಲಿಬಂದಾಗ ಕಲ್ಯಾಣನಾಯಕಿ ಅಮ್ಮನವರು ಶೇಷವಾಹನೋತ್ಸವದಲ್ಲಿಬಂದು ಸ್ವಾಗತಿಸಿದ ವೇಳೆ ಭಕ್ತರ ಹರ್ಷೋದ್ಘಾರ ಮುಗಿಸಲು ಮುಟ್ಟಿತ್ತು. ಈ ವೇಳೆ ಗಡಚಿಕ್ಕುವ ಪಟಾಕಿಗಳನ್ನು ಸಿಡಿಸುವ ಮೂಲಕ ಸಂಬ್ರಮಕ್ಕೆ ಮತ್ತಷ್ಟು ಮೆರಗು ನೀಡಲಾಗಿತ್ತು. ಉತ್ಸವಕ್ಕೆ ಬ್ರಾಸ್ ಬ್ಯಾಂಡ್ , ಮಂಗಳವಾದ್ಯ, ಪಾಂಡವಪುರ ವಿಜಯಕಾಲೇಜಿನ ಬ್ಯಾಂಡ್ , ಡೊಳ್ಳುಕುಣಿತ ಯಕ್ಷಗಾನಗೊಂಬೆಗಳು, ಪಟಾಕುಣಿತ ಜಾನಪದ ತಂಡಗಳೂ ಭಾಗಿಯಾಗಿ ಸಂಭ್ರಮಹೆಚ್ಚಸಿತು. ದೇವಾಲಯದ ಆವರಣವನ್ನು ತಳಿರುತೋರಣ ಹಾಗೂ ವಿದ್ಯುತ್ ದೀಪಗಳಿಂದ ಸಿಂಗಾರಮಾಡಲಾಗಿತ್ತು. ಮೇಲುಕೋಟೆ ಇನ್ಸ್ ಪೆಕ್ಟರ್ ಆನಂದಗೌಡ ಖುದ್ದು ಸಿಬ್ಬಂದಿಗಳೊಂದಿಗೆ ಹಾಜರಿದ್ದು ಭದ್ರತೆ ಒದಗಿಸಿದ್ದರು
ಒಇಐಏಔಖಿಇ ಓಇ ಖಿ -ಚಿಟ ಡಿಟಿಚಿಣಜ ಜಿಡಿ ಣಜ ಜಿ ಖಿ ಔಜಿ ಟಿಜಚಿ. ಇಡಿಛಿ ಛಿಚಿಣಟಿ ಜಿಡಿ ಥಿ ಛಿಟಛಿಞ ಟಿ ಚಿಟಿಥಿ ಟಟಿಞ ಡಿ ಠಿಟಿ ಚಿಣಣಚಿಛಿಟಿಣ. 21ಎಂ.ಎಲ್ .ಕೆ4 ಮೇಲುಕೋಟೆ ಚೆಲುವನಾರಾಯಣಸ್ವಾಮಿಗೆ ಅಶ್ವವಾಹನೋತ್ಸವ ವೈಭವಯುತವಾಗಿ ನೆರವೇರಿತು. 2 ವಿಜಯದಶಮಿಯಲ್ಲಿಭಾಗವಹಿಸಿದ್ದ ಬ್ರಾಸ್ ಬ್ಯಾಂಡ್ ತಂಡ ಮತ್ತು ಜಾನಪದ ಕಲೆಗಳ ತಂಡಗಳು ಗಮನಸೆಳೆದವು. 3 ಚೆಲುವನಾರಾಯಣಸ್ವಾಮಿಯ ದಿವ್ಯಾಯುಧಗಳಿಗೆ ಪೂಜೆ ನೆರವೇರಿಸಲಾಗಿತ್ತು. ------------------------------------------------------------------------------------------------------------ ಪ್ರಮುಖ ಸುದ್ದಿ