ಎಲ್ಲರೂ ಧರ್ಮ ಜಾಗೃತಿಯೊಂದಿಗೆ ಸಂಸ್ಕಾರ ಮೈಗೂಡಿಸಿಕೊಳ್ಳುವ ಮೂಲಕ ಜೀವನ ನಡೆಸಿದರೆ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷ ಮರ್ದಿನೀ ದೇವಸ್ಥಾನದಲ್ಲಿನವರಾತ್ರಿ ಉತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್ . ಜಿ. ಲೋಕನಾಥ ರೈ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯೆ ಪ್ರವೀಣಾ ರೈ ಮರುವಂಜ, ಪೂದೆ ಶ್ರೀ ಗಣಪತಿ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಗದೀಶ್ ಹುದೇರಿ, ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ವರ ಪೂದೆ, ಉದ್ಯಮಿ ಸಂತೋಷ್ ಕುಮಾರ್ ಅಲೆಕ್ಕಾಡಿ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಲೋಕೇಶ್ ಕೇರ್ಪಡ, ವಾಚಣ್ಣ ಹುದೇರಿ, ಗುಣವತಿ ನಾವೂರು, ವೇಣುಗೋಪಾಲ ರೈ ಕಲ್ಲೇರಿ, ಪ್ರಮೋದ್ ರೈ ಕಟ್ಟ ಹೊಸಜಾಲು, ಬಿಜಿಲ ಅಲೆಕ್ಕಾಡಿ, ಕಸ್ತೂರಿ ಚಂದ್ರಶೇಖರ್ ಉಪಸ್ಥಿತರಿದ್ದರು.
ಎನ್ .ಜಿ.ಲೋಕನಾಥ ರೈ ಸ್ವಾಗತಿಸಿದರು. ಲೋಕೇಶ್ ಕೇರ್ಪಡ ವಂದಿಸಿದರು. ಪ್ರದೀಪ್ ರೈ ಎಣ್ಮೂರು ಕಾರ್ಯಕ್ರಮ ನಿರೂಪಿಸಿದರು.
ಫೋಟೋ..21ಎಸ್ ಯುಎಲ್ -ಕೇರ್ಪಡ ಮಹಿಷ ಮರ್ದಿನೀ ದೇವಳದಲ್ಲಿನವರಾತ್ರಿ ಉತ್ಸವದ ಅಂಗವಾಗಿ ಧಾರ್ಮಿಕ ಸಭೆ ನಡೆಯಿತು.