ಉದ್ಯೋಗ ಲೋಕದಲ್ಲಿಬಿಮ್ಸ್ ವಿದ್ಯಾರ್ಥಿಗಳ ಸಾಧನೆ

Contributed byravideshpande77@gmail.com|Vijaya Karnataka

ಬಾಗಲಕೋಟೆಯ ಬಿಮ್ಸ್‌ ಎಂಬಿಎ ವಿದ್ಯಾರ್ಥಿಗಳು ಕ್ಯಾಂಪಸ್‌ ಪ್ಲೇಸ್‌ಮೆಂಟ್‌ನಲ್ಲಿಉತ್ತಮ ಸಾಧನೆ ಮಾಡಿದ್ದಾರೆ. 45ಕ್ಕೂ ಹೆಚ್ಚು ವಿದ್ಯಾರ್ಥಿಗಳು ದೇಶದ ಮುಂಚೂಣಿ ಕಂಪನಿಗಳಲ್ಲಿಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಒಬ್ಬ ವಿದ್ಯಾರ್ಥಿ 7 ಲಕ್ಷ ರೂ. ವಾರ್ಷಿಕ ವೇತನ ಪಡೆದಿದ್ದಾರೆ. ಆಯ್ಕೆಯಾದವರ ಸರಾಸರಿ ವೇತನ 4 ಲಕ್ಷ ರೂ. ಆಗಿದೆ. ಬರ್ಜರ್‌ ಪೇಂಟ್ಸ್‌, ಕೃಟಾನಿಕ್‌ ಸೇರಿದಂತೆ ಹಲವು ಪ್ರಮುಖ ಕಂಪನಿಗಳು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿವೆ. ಬಿವಿವಿಎಸ್‌, ಎಚ್‌ಎಸ್‌ಕೆ ಆಸ್ಪತ್ರೆ ಕೂಡ ನೇಮಕಾತಿ ನಡೆಸಿವೆ.

bims mba students job achievement excellence in campus placement

ಉದ್ಯೋಗ ಲೋಕದಲ್ಲಿಬಿಮ್ಸ್ ವಿದ್ಯಾರ್ಥಿಗಳ ಸಾಧನೆ

ವಿಕ ಸುದ್ದಿಲೋಕ ಬಾಗಲಕೋಟೆ

ನಗರದ ಬವಿವ ಸಂಘದ ಅಂಗ ಸಂಸ್ಥೆ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಜ್ (ಬಿಮ್ಸ್ ) ಎಂಬಿಎ ವಿದ್ಯಾರ್ಥಿಗಳು ಪ್ರಸ್ತುತ ಸಾಲಿನ ಕ್ಯಾಂಪಸ್ ಪ್ಲೇಸ್ ಮೆಂಟ್ ನಲ್ಲಿಉತ್ತಮ ಸಾಧನೆ ಮಾಡಿದ್ದಾರೆ.

ಅಂದಾಜು 45ಕ್ಕೂ ಹೆಚ್ಚು ವಿದ್ಯಾರ್ಥಿಗಳು ದೇಶದ ಮುಂಚೂಣಿ ಕಂಪನಿಗಳಲ್ಲಿಉದ್ಯೋಗ ಪಡೆಯುವ ಮೂಲಕ ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ. ಈ ಬಾರಿಯ ಪ್ಲೇಸ್ ಮೆಂಟ್ ನಲ್ಲಿವಿದ್ಯಾರ್ಥಿಯೊಬ್ಬ ವಾರ್ಷಿಕ 7 ಲಕ್ಷ ರೂ. ಗರಿಷ್ಠ ವೇತನ ಪಡೆದಿದ್ದು, ಆಯ್ಕೆಯಾದ ವಿದ್ಯಾರ್ಥಿಗಳ ಸರಾಸರಿ ವೇತನ ಪ್ಯಾಕೇಜ್ ವಾರ್ಷಿಕ 4 ಲಕ್ಷ ರೂ.ಗಳಷ್ಟಿದೆ.

ನಾನಾ ಕ್ಷೇತ್ರಗಳ ಪ್ರಮುಖ ರಾಷ್ಟ್ರೀಯ ಹಾಗೂ ಬಹುರಾಷ್ಟ್ರೀಯ ಕಂಪನಿಗಳಾದ ಬರ್ಜರ್ ಪೇಂಟ್ಸ್ , ಕೃಟಾನಿಕ್ , ಎನ್ ಜೆ ಇನ್ ವೆಸ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ , ಕಾಡ್ ಮ್ಯಾಕ್ಸ್ ಸಲ್ಯೂಷನ್ಸ್ , ಇಂಡಿವಿಲೇಜ್ ಟೆಕ್ ಸಲ್ಯೂಷನ್ಸ್ , ಉನ್ನತಿ ಹಾಗೂ ಡೆಟಾಲಾಜಿಕ್ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿವೆ. ಜತೆಗೆ ಸಂಘದ ಅಂಗ ಸಂಸ್ಥೆಯಾದ ಬಿವಿವಿಎಸ್ , ಎಚ್ ಎಸ್ ಕೆ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯು ಸಹ ಆಡಳಿತ ವಿಭಾಗದ ಹುದ್ದೆಗಳಿಗೆ ವಿದ್ಯಾರ್ಥಿಗಳನ್ನು ನೇಮಿಸಿಕೊಂಡಿರುವುದು ವಿಶೇಷವಾಗಿದೆ ಎಂದು ಬಿಮ್ಸ್ ನಿರ್ದೇಶಕ ಡಾ.ಪ್ರಕಾಶ ವಡವಡಗಿ, ಪ್ಲೇಸ್ ಮೆಂಟ್ ಅಧಿಕಾರಿ ಡಾ.ಪವನ ಬೆನಕಟ್ಟಿ ತಿಳಿಸಿದ್ದಾರೆ.