ವಿಕ ಸುದ್ದಿಲೋಕ ಬೆಂಗಳೂರು
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಗೊಟ್ಟಿಗೆರೆ ವಾರ್ಡ್ ನ ಪಿಲ್ಲಗಾನಹಳ್ಳಿ ಮುಖ್ಯರಸ್ತೆಯಲ್ಲಿಪರವಾನಗಿ (ಟ್ರೇಡ್ ಲೈಸೆನ್ಸ್ ) ಪಡೆಯದೆ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ 145 ಉದ್ದಿಮೆಗಳಿಗೆ ಸೂಚನಾ ಪತ್ರ ಜಾರಿ ಮಾಡಲಾಗಿದೆ. 7 ಮಳಿಗೆಗಳಿಗೆ ಬೀಗಮುದ್ರೆ ಹಾಕಲಾಗಿದೆ.
ಸೂಚನಾ ಪತ್ರದಲ್ಲಿಸ್ವಯಂಪ್ರೇರಿತವಾಗಿ ಉದ್ದಿಮೆ ಮುಚ್ಚಲು ಸೂಚಿಸಿದರೂ ಯಾವುದೇ ಕ್ರಮ ಕೈಗೊಳ್ಳದ 7 ಉದ್ದಿಮೆಗಳಿಗೆ ಬೀಗಮುದ್ರೆ ಹಾಕಲಾಗಿದೆ. ಗ್ರಾನೈಟ್ ಫ್ಯಾಕ್ಟರಿ, ಎಫ್ ಎಸ್ ಕೇಟರಿಂಗ್ , ಎಸ್ .ಕೆ.ಮೆಟಲ್ ಫ್ಯಾಬ್ರಿಕೇಟರ್ಸ್ , ಬೈಕ್ ಜೋನ್ ಗ್ಯಾರೇಜ್ , ಝ.ಎಸ್ .ಆಟೋಗ್ಲಾಸ್ ಆ್ಯಂಡ್ ಪ್ಲೈವುಡ್ , ಆರ್ .ಕೆ.ಸ್ಟೀಲ್ ಟ್ರೇಡರ್ಸ್ , ಪ್ರಿಯದರ್ಶಿನಿ ಎಂಟರ್ ಪ್ರೈಸಸ್ ಗೆ ಬೀಗ ಹಾಕಲಾಗಿದೆ.

