ಕೊಂಡಿಕೊಂಡೆ ಗಂಗಮ್ಮ ಬೆಟ್ಟದಲ್ಲಿ10 ದಿಗಳ ಮಹಾವಿಷ್ಣು ಯಾಗ

Contributed byjvchalapathichelur@gmail.com|Vijaya Karnataka

ಚೇಳೂರು ಬಳಿಯ ಕೊಂಡಿಕೊಂಡೆ ಗಂಗಮ್ಮ ಬೆಟ್ಟದಲ್ಲಿ ಮಹಾವಿಷ್ಣು ಯಾಗ ನಡೆಯುತ್ತಿದೆ. ಈ ಯಾಗವು ಲೋಕ ಕಲ್ಯಾಣಕ್ಕಾಗಿ ಹಮ್ಮಿಕೊಳ್ಳಲಾಗಿದೆ. ಮಾ.15ರಂದು ಯಾಗವು ಸಂಪನ್ನಗೊಳ್ಳಲಿದೆ. ಬೆಟ್ಟದ ಮೇಲೆ ಇರುವ ಬಾವಿಯ ಪವಾಡ ಭಕ್ತರನ್ನು ಆಕರ್ಷಿಸುತ್ತದೆ. ಯಾಗದಲ್ಲಿ ಪಾಲ್ಗೊಂಡು ದೇವಾಲಯ ಅಭಿವೃದ್ಧಿಗೆ ಸಹಕರಿಸಲು ಭಕ್ತರಿಗೆ ಆಹ್ವಾನ ನೀಡಲಾಗಿದೆ. ಯಾಗವು ನಾಡಿನ ಜನರ ಕ್ಷೇಮಕ್ಕಾಗಿ ನಡೆಯುತ್ತಿದೆ.

mahavishnu yagna at gangamma betta importance of religious programs

ವಿಕ ಸುದ್ದಿಲೋಕ ಚೇಳೂರು

ಚೇಳೂರು-ಬಾಗೇಪಲ್ಲಿಮುಖ್ಯ ರಸ್ತೆಯಲ್ಲಿರುವ ಪ್ರಸಿದ್ಧ ಕೊಂಡಿಕೊಂಡೆ ಗಂಗಮ್ಮ ಬೆಟ್ಟದ ಸಾಲು ಒಂದು ನೂರಕ್ಕೂ ಹೆಚ್ಚು ಎಕರೆ ಪ್ರದೇಶದಷ್ಟು ವಿಸ್ತಾರವಾಗಿದೆ. ಗಂಗಮ್ಮನ ಬೆಟ್ಟದಲ್ಲಿಮಳೆಗಾಲದಲ್ಲಿಮಂಜು ಆವರಿಸಲಿದ್ದು, ಪ್ರವಾಸಿಗರ ಹೃನ್ಮನ ತಣಿಸುತ್ತದೆ.

ಈ ಸುಂದರ ಗಂಗಮ್ಮನ ಬೆಟ್ಟದಲ್ಲಿಲೋಕ ಕಲ್ಯಾಣಕ್ಕಾಗಿ ಮಹಾವಿಷ್ಣು ಯಾಗ ನಡೆಯುತ್ತಿದೆ. ಈ ತಿಂಗಳ 6ರಂದು ಆರಂಭವಾಗಿದ್ದು, ಮಾ.15ರ ಸಂಜೆ 6 ಗಂಟೆಗೆ ಕಲ್ಯೋಣೋತ್ಸವ ಮತ್ತು ನಾನಾ ಧಾರ್ಮಿಕ ಕಾರ್ಯಕ್ರಮಗಳು ಮುಕ್ತಾಯವಾಗುತ್ತವೆ.

ಚೇಳೂರು ಬೆಟ್ಟ ಗುಡ್ಡಗಳ ನಾಡಾಗಿದೆ, ಅದರಲ್ಲಿಗಡಿಗವಾರಪಲ್ಲಿಬೆಟ್ಟ, ಬುರುಡಗುಂಟೆ ದೇವಾಲಯ, ಚಿಟ್ಟಿಗಾನಪುರ ಬೆಟ್ಟ ಸೇರಿದಂತೆ ಹಲವಾರು ಬೆಟ್ಟಗಳಿದ್ದು, ಇದು ಪುರಾಣ ಮತ್ತು ಪ್ರೇಕ್ಷಣೀಯ ಸ್ಥಳವಾಗಿ ಗುರುತಿಸಿಕೊಂಡಿದೆ.

ಬೆಟ್ಟದ ಮೇಲೆ ದೇವಾಲಯ ಪಕ್ಕದಲ್ಲೇ ನೂರಾರು ಅಡಿ ಆಳದ ಬಾವಿ ಇದೆ, ಬಾವಿಯಲ್ಲಿಎಲ್ಲಾಕಾಲಗಳಲ್ಲೂನೀರು ಸಿಗುತ್ತದೆ. ಈ ನೀರಿನ ಮೇಲೆ ಹಸಿರಿನ ಚಾಪೆಯ ಹಾಗೆ ತೆಪ್ಪೆ ಇದ್ದು, ಈ ತೆಪೆಯ್ಪ ಮೇಲೆ ನೂರಾರು ಜನ ನಿಂತುಕೊಳ್ಳಬಹುದು, ಆದರೆ ಮುಳುಗುವುದಿಲ್ಲ. ಇದೇ ಇಲ್ಲಿನ ಪವಾಡವೆಂದು ಹೇಳುತ್ತಾರೆ. ದೇವಾಲಯ ಬೆಟ್ಟದ ಮೇಲೆ ಧಾರ್ಮಿಕ ಸಭೆ. ದೇವರ ಭಜನೆಗಳು, ಚಿಂತನಾ ಶಿಬಿರಗಳು ನಡೆಯುತ್ತವೆ.

ಗಂಗಮ್ಮ ಬೆಟ್ಟಕ್ಕೆ ದಾರಿ; ಚೇಳೂರಿಂದ ಬಾಗೇಪಲ್ಲಿರಸ್ತೆ ಮಾರ್ಗವಾಗಿ 8 ಕಿ.ಮೀ. ಹೋದರೆ ಎಡಗಡೆಯಲ್ಲಿರುವ ಬೆಟ್ಟಕ್ಕೆ ಉತ್ತಮವಾದ ರಸ್ತೆ ಮೂಲಕ ಹೋಗಬಹುದು. ಬೆಟ್ಟದ ಕೆಳಗಿನಿಂದ ದೇವಾಲಯ ಮತ್ತು ಯಾಗ ವೇದಿಕೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.

ಈ ಮಹಾವಿಷ್ಣು ಯಾಗದಲ್ಲಿಪ್ರಧಾನ ವೇದ ಪಂಡಿತ ಚೈತನ್ಯ ಮಾತನಾಡಿ, ಮುಂಗಾರಿನಲ್ಲಿಮಳೆ ಬೆಳೆ ಆಗಲಿ, ಜನರ ಕ್ಷೇಮಕ್ಕಾಗಿ ಯಾಗ ಮಾಡಲಾಗುತ್ತಿದೆ ಎಂದರು.

ಕೋಟ್ ....

ಕೊಂಡಿಕೊಂಡೆ ಬೆಟ್ಟದಲ್ಲಿಈ ಹಿಂದೆ ಮಹಾರುದ್ರಯಾಗ ಮಾಡಿದ್ದು, ಇತ್ತೀಚೆಗೆ ಮಹಾದ್ವಾರ ಪ್ರತಿಷ್ಠಾಪನೆ ಮಾಡಿ ಹೆಲಿಕ್ಪಾರ್ ನಿಂದ ಪುಷ್ಪಾಭಿಷೇಕ ಮಾಡಲಾಗಿತ್ತು. ಚಿತ್ರದುರ್ಗ ಪೀಠಾಧೀಕಾರಿ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಆಗಮಿಸಿದ್ದರು. ಇದೀಗ ಮಹಾವಿಷ್ಣು ಯಾಗ ಮಾಡುತ್ತಿದ್ದು, ಭಕ್ತರು ಭಾಗವಹಿಸಬಹುದು. ದೇವಾಲಯದ ಅಭಿವೃದ್ಧಿಗೆ ತನು ಮನ ಧನ ಸಹಾಯ ಮಾಡಬಹುದು.

- ರಾಮಾಂಜಿಸ್ವಾಮಿ, ದೇವಾಲಯ ವ್ಯವಸ್ಥಾಪಕ

ಕೊಂಡಿಕೊಂಡೆ ದೇವಾಲಯ ಅಭಿವೃದ್ಧಿ ಮಾಡಲು ಭಕ್ತರು ಸಹಾಯ ಮಾಡಬೇಕು, ಇದೀಗ ಯಾಗ ಮಾಡುತ್ತಿದ್ದು ನಾಡಿನ ಜನರ ಕ್ಷೇಮಕ್ಕಾಗಿ ಮಳೆ ಬೆಳೆಯಾಗಿ ಉತ್ತಮ ಜನ ಜೀವನಕ್ಕಾಗಿ ಧಾರ್ಮಿಕ ಕಾರ್ಯಕ್ರಮ ಮಾಡುತ್ತಿರುವುದು ಸಂತಸ ತಂದಿದೆ.

- ಜಿ.ವಿ. ವೆಂಕಟರಮಣ, ಚಿಂತಕ, ಗುಂತೂರುಪಲ್ಲಿ

11 ಸಿಎಲ್ ಆರ್ 1

ಬಾಗೇಪಲ್ಲಿರಸ್ತೆಯಲ್ಲಿರುವ ಗಂಗಮ್ಮ ಬೆಟ್ಟದ ಮಹಾದ್ವಾರ.

11 ಸಿಎಲ್ ಆರ್ 2

ಮಹಾವಿಷ್ಣು ಯಾಗದಲ್ಲಿಹೋಮ ಜಪದಲ್ಲಿನಿರತರಾಗಿರುವ ವೇದ ಪಂಡಿತರು.