ರಂಗ ಚಿನ್ನಾರಿಯಲ್ಲಿಪ್ರತಿಭಾನಂದಿನಿ ಕಾರ ್ಯಕ್ರಮ

Contributed byprasadsarali@gmail.com|Vijaya Karnataka

ರಂಗಚಿನ್ನಾರಿ, ಸ್ವರಚಿನ್ನಾರಿ, ನಾರಿಚಿನ್ನಾರಿ ವತಿಯಿಂದ ಪ್ರತಿಭಾ ನಂದಿನಿ ಕಾರ್ಯಕ್ರಮ ಕರಂದಕ್ಕಾಡು ಪದ್ಮಗಿರಿ ಕಲಾಕುಟೀರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದಿವ್ಯಾ ಸಂದೀಪ್ ಉದ್ಘಾಟಿಸಿದರು. ಇಂಡಿಯಾ ಬುಕ್ ಆಫ್ ರೆಕಾರ್ಡ್ ಪಡೆದ ಆಶಿತಾ ಅವರನ್ನು ಗೌರವಿಸಲಾಯಿತು. ಕವನ ವಾಚನ, ಏಕಪಾತ್ರಾಭಿನಯ, ಭರತನಾಟ್ಯ ಪ್ರದರ್ಶನಗಳು ನಡೆದವು. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಿದ್ದರು.

pratibhnandini programme celebration of womens strength and art

ಕಾಸರಗೋಡು : ರಂಗಚಿನ್ನಾರಿ ಕಾಸರಗೋಡು, ಸ್ವರಚಿನ್ನಾರಿ ಸಂಗೀತ ಘಟಕ, ನಾರಿಚಿನ್ನಾರಿ ಮಹಿಳಾ ಘಟಕ ವತಿಯಿಂದ ಪ್ರತಿಭಾ ನಂದಿನಿ ಕಾರ ್ಯಕ್ರಮ ಬುಧವಾರ ಮಧ್ಯಾಹ್ನ ಕರಂದಕ್ಕಾಡು ಪದ್ಮಗಿರಿ ಕಲಾಕುಟೀರದಲ್ಲಿನಡೆಯಿತು.

ನಾರಿಚಿನ್ನಾರಿ ಅಧ್ಯಕ್ಷೆ ಕೆ.ಸವಿತಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯೆ ದಿವ್ಯಾ ಸಂದೀಪ್ ಉದ್ಘಾಟಿಸಿದರು. ನೀರ್ಚಾಲು ಶಾಲೆಯ ಸಂಸ್ಕೃತ ಅಧ್ಯಾಪಿಕೆ ಅಕ್ಷತಾ ಭಟ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ತುದಿಗಾಲಲ್ಲಿನಿಲ್ಲುವ ಸ್ಪರ್ಧೆಯಲ್ಲಿಇಂಡಿಯಾ ಬುಕ್ ಆಫ್ ರೆಕಾರ್ಡ್ ಪಡೆದ ಆಶಿತಾ ಅವರನ್ನು ಗೌರವಿಸಲಾಯಿತು. ವಿಜಯಲಕ್ಷಿತ್ರ್ಮೕ ಶಾನುಭೋಗ್ , ಲಕ್ಷಿತ್ರ್ಮೕ ಕೆ., ದಿವ್ಯಾಗಟ್ಟಿ ಪರಕ್ಕಿಲ, ಸೌಮ್ಯಾ ಪ್ರವೀಣ್ , ಸರ್ವಮಂಗಳ ಜಯ ಪುಣಿಂಚಿತ್ತಾಯ ಕವನ ವಾಚಿಸಿದರು. ಪ್ರಣಮ್ಯ ಕೆ.ಎಸ್ . ಏಕಪಾತ್ರಾಭಿನಯದ ಮೂಲಕ ಗಮನಸೆಳೆದರು. ವಿದುಷಿ ಅಶ್ವಿನಿ ಕೆ.ಎಂ. ಹಾಗೂ ವಿದುಷಿ ವಿಷಯಾ ಬಾಲಕೃಷ್ಣನ್ ಅವರಿಂದ ಶಿವಾರ್ಪಣೆ ಭರತನಾಟ್ಯ ಜನಮನಸೂರೆಗೊಂಡಿತು.

ಚಿತ್ರ: 27 ಬಿಎ ರಂಗಚಿನ್ನಾರಿ