ವಿಕ ಸುದ್ದಿಲೋಕ ಕಾರ್ಕಳ
ಸ್ಥಳೀಯ ರೋಟರಿ ಆನ್ಸ್ ಕ್ಲಬ್ ವತಿಯಿಂದ ಮಹಿಳಾ ದಿನಾಚರಣೆಯು ರೋಟರಿ ಬಾಲ ಭವನದಲ್ಲಿನಡೆಯಿತು.
ಮಹಿಳೆಯರ ಶಕ್ತಿ, ಸಾಧನೆ, ಸ್ನೇಹ, ಸೌಹಾರ್ದತೆಯನ್ನು ಸಂಭ್ರಮಿಸುವ ವಿಶೇಷ ದಿನದ ಅಂಗವಾಗಿ ಮಹಿಳಾ ಶಕ್ತಿ ಸಮಾಜದ ಭವಿಷ್ಯ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಹಿಳಾ ದಿನಾಚರಣೆ ಪ್ರಯುಕ್ತ ಕ್ಲಬ್ಬಿನ ಸದಸ್ಯ ಮಹಿಳೆಯರಿಗೆ ಸ್ಪರ್ಧೆಗಳು ಮತ್ತು ಮನರಂಜನ ಕಾರ್ಯಕ್ರಮ ನಡೆಸಲಾಯಿತು. ತುರುಬಿನ ಅಲಂಕಾರ ಸ್ಪರ್ಧೆಯಲ್ಲಿಕಸ್ತೂರಿ ವಸಂತ ಹಾಗೂ ವಿಜಯಶ್ರೀ ರಾವ್ , ಜಡೆಯ ಅಲಂಕಾರ ಸ್ಪರ್ಧೆಯಲ್ಲಿರೇಖಾ ಜಿ. ಹಾಗೂ ಅರ್ಚನಾ ಪ್ರಭಾತ್ ಪ್ರಥಮ. ದ್ವಿತೀಯ ಸ್ಥಾನ ಪಡೆದರು. ಈ ಸಂದರ್ಭ ಸಂಪನ್ಮೂಲ ವ್ಯಕ್ತಿ ಡಾ. ಆಶಾ ಪಿ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ಕ್ಲಬ್ಬಿನ ಅಧ್ಯಕ್ಷೆ ಜಯಂತಿ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಸಭಾಪತಿ ವೃಂದಾ ಹರಿಪ್ರಕಾಶ್ ಉಪಸ್ಥಿತರಿದ್ದರು.
ಗಾಯತ್ರಿ ವಿಜೇಂದ್ರ ಸ್ವಾಗತಿಸಿದರು. ಆಶಾ ಡಿ ಮೆಲ್ಲೊಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಫೊಟೋಕ್ಯಾಪ್ಶನ್ -ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿಡಾ. ಆಶಾ ಪಿ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
(ಫೊಟೋ:11ಕೆವಿ-ಆರ್ ಟಿಆರ್ )

