‘ನಮ್ಮ ಹೋರಾಟ ನಿಲ್ಲಲ್ಲ’
ಕುಡಿತಿನಿ: ರೈತರಿಂದ ಕುಡಿತಿನಿ ಪ್ರದೇಶದಲ್ಲಿ12,500 ಎಕರೆ ಜಮೀನನನ್ನು ಖರೀದಿಸಿದ್ದು, ನ್ಯಾಯಯುತ ಬೆಲೆ ನೀಡಬೇಕು ಎಂದು ಹೋರಾಟಗಾರ ವಿ.ಎಸ್ .ಶಿವಶಂಕರ ಹೇಳಿದರು.
‘‘ ರೈತರಿಗೆ ನ್ಯಾಯ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದರೂ ಅಧಿಕಾರಿಗಳು ಮಾತ್ರ ನಿರ್ಲಕ್ಷತ್ರ್ಯ ಧೋರಣೆ ತೋರಿದ್ದಾರೆ. ಜಿಲ್ಲಾಡಳಿತ ಕಂಪನಿ ಪರ ವಹಿಸಿ, ಭೂಸಂತ್ರಸ್ತ ರೈತರನ್ನು ಬಂಧಿಸಿರುವುದು ಯಾವ ನ್ಯಾಯ,’’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟಗಾರ ಜೆ.ಸತ್ಯಬಾಬು ಮಾತನಾಡಿ, ‘‘ನಮ್ಮ ಹೋರಾಟ ನಿಲ್ಲುವುದಿಲ್ಲ. ಭೂಸಂತ್ರಸ್ತ ರೈತರಿಗೆ ಸಮರ್ಪಕ ನ್ಯಾಯ ದೊರೆಯುವವರೆಗೂ ಪ್ರತಿಭಟನೆ ಮುಂದುವರಿಯುತ್ತದೆ,’’ ಎಂದರು. ನಂತರ 132 ಜನ ಪ್ರತಿಭಟನಾಕಾರರನ್ನು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು. ಮುಖಂಡರಾದ ಎಂ.ತಿಪ್ಪೇಸ್ವಾಮಿ, ಮಾಳಮ್ಮ, ಪಂಪನಗೌಡ, ಎ.ಸ್ವಾಮಿ, ಖಾದರ್ , ರತ್ನಮ್ಮ, ಜಂಗ್ಲಿಸಾಬು, ವೆಂಕಟರಮಣಬಾಬು, ಸಿದ್ದಪ್ಪ, ಶ್ರೀಧರ್ , ಗೋಪಾಲ ಹಾಗೂ ನೂರಾರು ರೈತರು ಪಾಲ್ಗೊಂಡಿದ್ದರು.

