ಪಶ್ಚಿಮ ಏಷ್ಯಾದ ಸಂಘರ್ಷದಿಂದ ದೇಶದಲ್ಲಿ ಎಲ್‌ಪಿಜಿ ಕೊರತೆ ಎದುರಾಗಿದೆ. ಇದನ್ನು ನಿವಾರಿಸಲು ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಜಾಮ್‌ನಗರದ ಸಂಸ್ಕರಣಾಗಾರದಲ್ಲಿ ಎಲ್‌ಪಿಜಿ ಉತ್ಪಾದನೆಯನ್ನು ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸಲು ನಿರ್ಧರಿಸಿದೆ. ಭಾರತೀಯ ಕುಟುಂಬಗಳಿಗೆ ಅಡೆತಡೆಯಿಲ್ಲದೆ ಇಂಧನ ಪೂರೈಸಲು ಕಂಪನಿ ಆದ್ಯತೆ ನೀಡುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಿ ಅನಿಲ ಪೂರೈಕೆ ಸ್ಥಿರವಾಗಿರಲು ಶ್ರಮಿಸಲಾಗುತ್ತಿದೆ. ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯವಿರುವ ವಲಯಗಳಿಗೆ ಇಂಧನ ತಲುಪಿಸಲು ಪ್ರಯತ್ನಿಸಲಾಗುತ್ತಿದೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ದೇಶಾದ್ಯಂತ ಎಲ್‌ಪಿಜಿ (LPG) ಸಿಲಿಂಡರ್‌ಗಳ ಕೊರತೆ ಎದುರಾಗಿದೆ. ಈ ಸಮಸ್ಯೆಯನ್ನು ನಿವಾರಿಸಲು, ಜಾಮ’ನಗರದಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್‌ನ ದೊಡ್ಡ ಪೆಟ್ರೋಕೆಮಿಕಲ್ಸ್ ಘಟಕದಲ್ಲಿ ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ರಿಲಯನ್ಸ್ ಕಂಪನಿಯು ಈ ಬಗ್ಗೆ ಮಾಹಿತಿ ನೀಡಿದೆ.
ಜಾಮ’ನಗರದಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್‌ನ ಪೆಟ್ರೋಕೆಮಿಕಲ್ಸ್ ಸಂಕೀರ್ಣವು ವಿಶ್ವದಲ್ಲೇ ಅತಿ ದೊಡ್ಡದಾದ ಸಂಸ್ಕರಣಾ ಕೇಂದ್ರವಾಗಿದೆ. ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ದೊಡ್ಡ ಏರಿಳಿತಗಳು ಕಂಡುಬರುತ್ತಿರುವ ಈ ಸಮಯದಲ್ಲಿ, ಭಾರತೀಯ ಕುಟುಂಬಗಳಿಗೆ ಅಡೆತಡೆಯಿಲ್ಲದೆ ಇಂಧನ ಪೂರೈಸುವುದನ್ನು ಖಚಿತಪಡಿಸಿಕೊಳ್ಳುವುದು ತಮ್ಮ ರಾಷ್ಟ್ರೀಯ ಆದ್ಯತೆ ಎಂದು ಮುಕೇಶ್ ಅಂಬಾನಿ ನೇತೃತ್ವದ ಕಂಪನಿ ಹೇಳಿದೆ.ಉತ್ಪಾದನೆಯಾದ ಎಲ್‌ಪಿಜಿ ಅನಿಲವನ್ನು ಆದ್ಯತೆ ನೀಡಬೇಕಾದ ವಲಯಗಳಿಗೆ ಪೂರೈಸಲಾಗುವುದು ಎಂದು ರಿಲಯನ್ಸ್ ತಿಳಿಸಿದೆ. "ನಮ್ಮ ತಂಡವು ಗರಿಷ್ಠ ಪ್ರಮಾಣದ ಎಲ್‌ಪಿಜಿ ಉತ್ಪಾದನೆಗಾಗಿ ಹಗಲಿರುಳು ಕೆಲಸ ಮಾಡುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಿ ಅನಿಲದ ಪೂರೈಕೆಯನ್ನು ಸ್ಥಿರವಾಗಿ ಇಡುವುದು ನಮ್ಮ ಗುರಿಯಾಗಿದೆ. ಕೋಟ್ಯಂತರ ಭಾರತೀಯ ಕುಟುಂಬಗಳ ಯೋಗಕ್ಷೇಮ ಮತ್ತು ಭಾರತದ ಇಂಧನ ಭದ್ರತೆ ನಮಗೆ ಯಾವಾಗಲೂ ಮೊದಲ ಆದ್ಯತೆ. ನಾವು ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಇಂಧನ ಪೂರೈಕೆ ಅತ್ಯಂತ ಅಗತ್ಯವಿರುವವರಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ಕಂಪನಿ ಹೇಳಿದೆ.