ಮರಕುಂಬಿ: ಗ್ರಾಮದ ಶ್ರೀ ಚಕ್ರ ಸಮೇತ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ಬೈಲಹೊಂಗಲ ದಿಂದ ಮುರಗೋಡಕ್ಕೆ ಸೋಮವಾರದಿಂದ ಬಸ್ ಸಂಚಾರ ಆರಂಭಿಸಲಾಗಿದೆ. ಮರಕುಂಬಿ ಮುಖಾಂತರ ಬಸ್ ಸಂಚರಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ಎರಡು ಬಸ್ ಗಳನ್ನು ನಿಯೋಜಿಸಲಾಗಿದೆ ಎಂದು ಬೈಲಹೊಂಗಲ ಘಟಕ ವ್ಯವಸ್ಥಾಪಕ ಮಹೇಶ ತಿರಕಣ್ಣವರ ತಿಳಿಸಿದ್ದಾರೆ. ಗ್ರಾಮದ ದೇವಸ್ಥಾನ ಬಳಿ ಧರ್ಮದರ್ಶಿ ಡಾ. ಜಿ.ಬಿ. ಮಲ್ಲೇಶ ಬಸ್ ಗೆ ಪೂಜೆ ಸಲ್ಲಿಸಿದರು. ಗಣ್ಯರಾದ ಜೆ.ಬಿ. ಬಾಬು, ಗಂಗಪ್ಪ ಕುರಬೆಟ್ಟ, ಮಹಾಂತೇಶ ಕೌಜಲಗಿ, ಅಡಿವೆಪ್ಪ ಮುರಕೀಭಾಂವಿ, ಚಂದನ ಕೌಜಲಗಿ, ಬಸನಗೌಡ ಪಾಟೀಲ, ಶ್ರೀಕಾಂತ ಸುಂಕದ, ವಿ.ಎಲ್ . ಪಂಚಗಾವಿ, ಎಸ್ .ಎಸ್ . ಗೌಡರ ಉಪಸ್ಥಿತರಿದ್ದರು.
ಫೋಟೊ:
(29 ಎಂ.ಆರ್ ..ಕೆ:1):
ಮರಕುಂಬಿಯ ಶ್ರೀ ಚಕ್ರ ಸಮೇತ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನ ಬಳಿ ಬೈಲಹೊಂಗಲ - ಮುರಗೋಡ ಬಸ್ ಗೆ ಡಾ. ಜಿ.ಬಿ. ಮಲ್ಲೇಶ ಪೂಜೆ ಸಲ್ಲಿಸಿದರು.

