(ಧಿಬೆಂ.ಧಿಗೆ)ನಿಧನ

Contributed bykeshavmurthy8@gmail.com|Vijaya Karnataka

ಮೈಸೂರಿನ ಹಿರಿಯ ಪತ್ರಕರ್ತ ಕೆ.ಜೆ.ಕುಮಾರ್‌ ಅವರು 74ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೂರು ದಶಕಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದ ಅವರು ಸಿನಿಮಾ ಬರಹಗಳಿಗೆ ಹೆಸರುವಾಸಿಯಾಗಿದ್ದರು. ತಮಿಳು ನಟ ರಜನಿಕಾಂತ್‌ ಮತ್ತು ದಿ. ಅಂಬರೀಶ್‌ ಅವರೊಂದಿಗೆ ಒಡನಾಟ ಹೊಂದಿದ್ದರು. ಅವರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ರುದ್ರಭೂಮಿಯಲ್ಲಿ ನಡೆಯಲಿದೆ.

dhibemdhige veteran journalist kj kumar passes away

ಮೈಸೂರು: ನಗರದ ಯಾದವಗಿರಿ ನಿವಾಸಿ, ಹಿರಿಯ ಪತ್ರಕರ್ತ ಕೆ.ಜೆ.ಕುಮಾರ್ (74) ಹೃದಯಾಘಾತದಿಂದ ಬುಧವಾರ ನಿಧನರಾದರು. ಮೃತರಿಗೆ ಪತ್ನಿ ಉಷಾ, ಪುತ್ರಿ ಸುನಯ ಶೆಟ್ಟಿ, ಸಹೋದರಿಯಾದ ನಗರ ಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಪ್ರಕಾಶ್ ಇದ್ದಾರೆ. ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ರುದ್ರಭೂಮಿಯಲ್ಲಿಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೂರು ದಶಕಗಳಿಗೂ ಹೆಚ್ಚು ಕಾಲ ಮೈಸೂರಿನ ಪತ್ರಿಕೋದ್ಯಮದಲ್ಲಿಸೇವೆ ಸಲ್ಲಿಸಿರುವ ಕೆ.ಜೆ.ಕುಮಾರ್ , ಸಿನಿಮಾ ಬರಹಗಳಿಗೆ ಹೆಸರಾಗಿದ್ದರು.ತಮಿಳುನಟ ರಜನಿಕಾಂತ್ , ದಿ.ಅಂಬರೀಶ್ ಅವರ ಜತೆಗೆ ಒಡನಾಟ ಹೊಂದಿದ್ದರು.