ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ರೈಲಿನ ಅಪ್ಪರ್ ಬತ್ ರ್ ಆಶ್ರಯ
ಮುಂಬಯಿ: ಟಿ20 ವಿಶ್ವಕಪ್ ಫೈನಲ್ ನ ಕೊನೆಯ ಓವರ್ ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಭಾರತದ ಗೆಲುವಿಗೆ ನೆರವಾಗಿದ್ದ ಶಿವಂ ದುಬೆ , ಮೈದಾನದಲ್ಲಿಅಬ್ಬರಿಸಿದರೂ ಪ್ರಯಾಣದಲ್ಲಿಮಾತ್ರ ಅಪ್ಪಟ ‘ಸಾಮಾನ್ಯ’ನಂತೆ ವರ್ತಿಸಿದ್ದಾರೆ. ಅಹಮದಾಬಾದ್ ನಿಂದ ಮುಂಬಯಿಗೆ ವಿಮಾನ ಟಿಕೆಟ್ ಗಳು ಸಿಗದ ಕಾರಣ, ಅವರು ಯಾವುದೇ ಆಡಂಬರವಿಲ್ಲದೆ ರೈಲಿನ ಮೂಲಕ ಪ್ರಯಾಣಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ಸೋಮವಾರ ಬೆಳಗ್ಗೆ 5.10ಕ್ಕೆ ಅಹಮದಾಬಾದ್ ನಿಂದ ಹೊರಟ ‘ಸಯಾಜಿ ನಗರಿ ಎಕ್ಸ್ ಪ್ರೆಸ್ ’ ರೈಲನ್ನು ದುಬೆ ತಮ್ಮ ಪತ್ನಿ ಅಂಜುಮ್ ಹಾಗೂ ಇಬ್ಬರು ಮಕ್ಕಳೊಂದಿಗೆ ಹತ್ತಿದರು. ತಾರಾ ಆಟಗಾರನಾಗಿದ್ದರೂ ಅಭಿಮಾನಿಗಳ ಕಣ್ಣಿಗೆ ಬೀಳಬಾರದೆಂದು ಮುನ್ನೆಚ್ಚರಿಕೆ ವಹಿಸಿದ್ದ ಅವರು, ಟೋಪಿ, ಮಾÓ್ಕ… ಮತ್ತು ಫುಲ್ ಸ್ಲೀವ್ ಟಿ-ಶರ್ಟ್ ಧರಿಸಿ ಗುರುತು ಸಿಗದಂತೆ ಎಸಿ 3-ಟೈರ್ ಬೋಗಿ ಪ್ರವೇಶಿಸಿದರು.
ಸಂದೇಹ ಪಟ್ಟ ಟಿಟಿಇ: ರಿಸರ್ವೇಶನ್ ಪಟ್ಟಿಯಲ್ಲಿ‘ಶಿವಂ ದುಬೆ’ ಎಂಬ ಹೆಸರು ಕಂಡು ಬೆಚ್ಚಿಬಿದ್ದ ಟಿಕೆಟ್ ಪರೀಕ್ಷಕರು, ಕೂಡಲೇ ಅವರಿದ್ದ ಸೀಟಿಗೆ ಬಂದು ವಿಚಾರಿಸಿದರು. ಆದರೆ ಸಮಯಪ್ರಜ್ಞೆ ಮೆರೆದ ದುಬೆ ಪತ್ನಿ ಅಂಜುಮ್ , ‘‘ಅಯ್ಯೋ.. ಅಷ್ಟು ದೊಡ್ಡ ಕ್ರಿಕೆಟಿಗ ರೈಲಿನಲ್ಲಿಯಾಕೆ ಬರುತ್ತಾರೆ? ಸುಮ್ಮನೆ ಅನುಮಾನ ಪಡಬೇಡಿ,’’ ಎಂದು ಹೇಳಿ ಟಿಟಿಇಯನ್ನು ನಯವಾಗಿ ವಾಪಸ್ ಕಳುಹಿಸಿದರು.
ತಮ್ಮ ಸೀಟಿಗೆ ಬಂದ ಕೂಡಲೇ ಮೇಲಿನ ಬತ್ ರ್ ಏರಿ ಕುಳಿತ ದುಬೆ, ಪ್ರಯಾಣದುದ್ದಕ್ಕೂ ಯಾರಿಗೂ ಸಿಗದೆ ಸದ್ದಿಲ್ಲದೆ ಮುಂಬಯಿ ತಲುಪಿದರು. ಕುಟುಂಬದವರೊಂದಿಗೆ ಬೇಗನೆ ಮನೆ ತಲುಪಬೇಕೆಂಬ ಕಾರಣಕ್ಕೆ ಅವರು ವಿಮಾನ ಬಿಟ್ಟು ರೈಲು ಪ್ರಯಾಣ ಆಯೋಜಿಸಿದ್ದರು ಎಂದು ತಿಳಿದುಬಂದಿದೆ.
ಕ್ರಿಕೆಟಿಗನ ಮಾಸ್ಕ್ ಆಟ!
ರೈಲು: ಸಯಾಜಿ ನಗರಿ ಎಕ್ಸ್ ಪ್ರೆಸ್ (ಅಹಮದಾಬಾದ್ -ಮುಂಬಯಿ).
ಬೋಗಿ: ಎಸಿ 3-ಟೈರ್ (ಸಾಮಾನ್ಯವಾಗಿ ಸ್ಟಾರ್ ಗಳು ಹೋಗದ ದರ್ಜೆ).
ವೇಷ: ಟೋಪಿ, ಫುಲ್ ಸ್ಲೀವ್ ಟಿ-ಶರ್ಟ್ ಮತ್ತು ಮುಖಕ್ಕೆ ಮಾಸ್ಕ್
ಸೀಟು: ಯಾರಿಗೂ ಕಾಣಬಾರದೆಂದು ‘ಅಪ್ಪರ್ ಬತ್ ರ್ ’ ಆಯ್ಕೆ

