ಉಪನ್ಯಾಸ, ಕವಿಗೋಷ್ಠಿ
ಯಲ್ಲಾಪುರ: ಕೇಂದ್ರ ಸಾಹಿತ್ಯ ವೇದಿಕೆಯ ವತಿಯಿಂದ ಪುಸ್ತಕದ ಅವಲೋಕನ, ಉಪನ್ಯಾಸ, ಕವಿಗೋಷ್ಠಿ ಮಾ.14ರಂದು ಮಧ್ಯಾಹ್ನ 3ಕ್ಕೆ ಪಟ್ಟಣದ ಕಾಳಮ್ಮನಗರದ ಶಿವಶಂಕರ ನಿಲಯದಲ್ಲಿನಡೆಯಲಿದೆ. ಸರಕಾರಿ ಪದವಿ ಕಾಲೇಜಿನ ಪ್ರಾ.ಡಾ.ಜನಾರ್ಧನ ಉದ್ಘಾಟಿಸಲಿದ್ದಾರೆ. ಕೇಂದ್ರ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷೆ ಶಿವಲೀಲಾ ಹುಣಸಗಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಇತಿಹಾಸಕಾರ ಡಾ.ಲಕ್ಷಿತ್ರ್ಮೕಶ ಹೆಗಡೆ , ಲೇಖಕರಾದ ಬೀರಣ್ಣ ನಾಯಕ ಮೊಗಟಾ, ಡಾ.ನವೀನಕುಮಾರ ಎ.ಜಿ. ಆಗಮಿಸಲಿದ್ದು, ಪವಿತ್ರಾ ಆಗೇರ, ಮಂಜುನಾಥ ಪಟಗಾರ ಪುಸ್ತಕ ಅವಲೋಕನ ಮಾಡಲಿದ್ದಾರೆ.
ಕವಿ ಗೋಷ್ಠಿಯಲ್ಲಿ ಶ್ರೀರಂಗ ಕಟ್ಟಿ, ಸುಬ್ರಾಯ ಬಿದ್ರೆಮನೆ, ಮಧುಕೇಶ್ವರ ಭಾಗ್ವತ್ , ದಿಲೀಪ ದೊಡ್ಮನಿ, ಶರೀಪ ಹಾರ್ಸಿಕಟ್ಟಾ, ದತ್ತಾತ್ರೆಯ ಕಣ್ಣಿಪಾಲ, ರಾಧಾ ಭಟ್ಟ, ವೀರವ್ವ ಪೂಜಾರಿ, ಡಾ.ಸುಚೇತಾ ಮದ್ಗುಣಿ, ಕೃಷ್ಣ ಭಟ್ಟ ನಾಯ್ಕನಕೆರೆ, ವಿನೋದಕುಮಾರ ಐಗಳ, ರವಿಕುಮಾರ, ಸಂಗೀತಾ ಲಮಾಣಿ, ಪಾರ್ವತಿ ಕಟ್ಟಿಮನಿ, ಸತೀಶ ಶೆಟ್ಟಿ ಇನ್ನಿತರರು ಭಾಗವಹಿಸಲಿದ್ದಾರೆ.

