ವಿಕ ಸುದ್ದಿಲೋಕ ಬಾಗೇಪಲ್ಲಿ
2 ವರ್ಷಗಳ ಒಳಗೆ ಗೂಳೂರಿನಲ್ಲಿಮುಸ್ಲಿಂ ಸಮುದಾಯಕ್ಕೆ ಶಾದಿ ಮಹಲ್ ನಿರ್ಮಾಣ ಮಾಡಿಯೇ ತೀರುತ್ತೇನೆ ಎಂದು ಶಾಸಕ ಎಸ್ .ಎನ್ . ಸುಬ್ಬಾರೆಡ್ಡಿ ತಿಳಿಸಿದರು.
ತಾಲೂಕಿನ ಗೂಳೂರು ಮಸೀದಿ ಆವರಣದಲ್ಲಿಮುಸ್ಲಿಂ ಸಮುದಾಯದ ಮುಖಂಡರು ಆಯೋಜಿಸಿದ್ದ ಇಫ್ತಿಯಾರ್ ಕೂಟದಲ್ಲಿಪವಿತ್ರ ರಂಜಾನ್ ಹಬ್ಬಕ್ಕೆ ಶುಭಾಶಯ ಕೋರಿ ಮಾತನಾಡಿದ ಅವರು, ಇದು ನನ್ನ ಸ್ವಂತ ಹೋಬಳಿಯಾಗಿದ್ದರಿಂದ ವಿಧಾನಸಭೆ ಅಧಿವೇಶನ ಇದ್ದರೂ ಗೂಳೂರು ಮುಸ್ಲಿಂ ಸಮುದಾಯದ ಮುಖಂಡರು ಆಯೋಜಿಸಿರುವ ಕಾರ್ಯಕ್ರಮದಲ್ಲಿಭಾಗಿಯಾಗಿದ್ದೇನೆ. ಈಗಾಗಲೇ ಈ ಸಮುದಾಯಕ್ಕೆ ಖಬರಸ್ತಾನ್ ಗೆ 2 ಎಕರೆ ಜಮೀನು ನೀಡಿದ್ದೇನೆ. ಇನ್ನು 2 ವರ್ಷಗಳ ಒಳಗೆ ಇಲ್ಲಿಶಾದಿ ಮಹಲ್ ನಿರ್ಮಾಣ ಮಾಡಿ ಅವರಿಗೆ ಅನುಕೂಲ ಮಾಡಿಕೊಡುತ್ತೇನೆ ಎಂದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಅಧ್ಯಕ್ಷ ಹೆಚ್ .ಎಸ್ . ನರೇಂದ್ರ ಮಾತನಾಡಿ, ಶಾಸಕ ಸುಬ್ಬಾರೆಡ್ಡಿ ಅವರು ಜಾತ್ಯತೀತ ನಾಯಕರಾಗಿದ್ದು, ಎಲ್ಲಾಜಾತಿ ಧರ್ಮಗಳನ್ನು ಪ್ರೀತಿಯಿಂದ ನೋಡುವ ನಾಯಕರಾಗಿದ್ದಾರೆ. ಹಿಂದೂ ಮುಸ್ಲಿಂ ಜನರು ಬಹಳ ಅನ್ಯೋನ್ಯವಾಗಿ ಇರಬೇಕು ಎಂದು ಕ್ಷೇತ್ರದಲ್ಲಿಯಾವುದೇ ಗಲಾಟೆ ಜಗಳಗಳಿಗೆ ಆಸ್ಪದ ನೀಡುತ್ತಿಲ್ಲ. ಅದರಲ್ಲೂಮುಸ್ಲಿಂ ಜನಾಂಗಕ್ಕೆ ಬೇಕಾದ ಎಲ್ಲಾಸೌಕರ್ಯಗಳನ್ನು ನೀಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿತಾಪಂ ಮಾಜಿ ಅಧ್ಯಕ್ಷ ಎಸ್ .ಎಸ್ . ರಮೇಶ್ ಬಾಬು, ಕೆ.ಆರ್ . ನರೇಂದ್ರ, ಗ್ರಾಪಂ ಮಾಜಿ ಅಧ್ಯಕ್ಷ ಮುನ್ನಾ ಖಾನ್ , ಸೊಸೈಟಿ ಅಧ್ಯಕ್ಷ ಸಿ.ಎನ್ . ಬಾಬುರೆಡ್ಡಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಬ್ಬುರಾಮು, ಹಿರಿಯ ಮುಖಂಡರಾದ ಸುಭಾನ್ ಸಾಬ್ , ಹೈದರವಲ್ಲಿ, ಶಾನು, ಯಶ್ವಂತ್ ಬಾಬು, ನಾಗು, ಸೂಹೇಲ್ , ಬಾಬಾ, ಅಬ್ದುಲ್ , ಜುಬೇರ್ , ನೂರುಲ್ಲಾ, ಟಿಪ್ಪು, ಯೂಸುಫ್ , ನವಾಜ್ , ಶಾರುಕ್ , ನದೀಮ್ , ನಜ್ರು ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.
12 ಬಿಪಿಎಲ್ 4
ಗೂಳೂರು ಮಸೀದಿಯಲ್ಲಿಏರ್ಪಡಿಸಿದ್ದ ಇಫ್ತಿಯಾರ್ ರೂಟದಲ್ಲಿಶಾಸಕ ಸುಬ್ಬಾರೆಡ್ಡಿ ಮಾತನಾಡಿದರು.

