ಜಾತ್ರೆಯಲ್ಲೂತೆರೆಯದ ಶೌಚಾಲಯ ಬಾಗಿಲು

Contributed bypressbasu78@gmail.com|Vijaya Karnataka

ಹುಕ್ಕೇರಿ ಲಕ್ಷ್ಮೀದೇವಿ ಜಾತ್ರೆಯಲ್ಲಿಭಕ್ತರಿಗೆ ಶೌಚಾಲಯ ಸಮಸ್ಯೆ ಎದುರಾಗಿದೆ. ಬಸ್‌ ನಿಲ್ದಾಣದ ಬಳಿ ಇರುವ ಶೌಚಾಲಯವನ್ನು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮುಚ್ಚಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಲಕ್ಷಾಂತರ ಭಕ್ತರು, ಅದರಲ್ಲೂ ಮಹಿಳೆಯರು ತೀವ್ರ ತೊಂದರೆ ಅನುಭವಿಸಿದ್ದಾರೆ. ಕೂಡಲೇ ಶೌಚಾಲಯ ತೆರೆದು ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕು ಎಂದು ಆಗ್ರಹಿಸಲಾಗಿದೆ.

restroom issues at the festival no facilities for devotees

(ನಮ್ ಏರಿಯಾ ಪ್ರಾಬ್ಲಂ)

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ | ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹ

ಬಸವರಾಜ ಕೊಂಡಿ ಹುಕ್ಕೇರಿ

ಘ್ಕಿp್ಟಛಿssಚಿas್ಠಃಜಞaಜ್ಝಿ.್ಚಟಞ

ಪಟ್ಟಣದಲ್ಲಿಮೂರು ವರ್ಷದ ನಂತರ ಲಕ್ಷಿತ್ರ್ಮದೇವಿ ಜಾತ್ರಾ ಮಹೋತ್ಸವ ಜರುಗುತ್ತಿದ್ದು, ಆಗಮಿಸುವ ಲಕ್ಷಾಂತರ ಭಕ್ತರಿಗೆ ಶೌಚಾಲಯ ಸಮಸ್ಯೆ ಎದುರಾಗಿದೆ. ಬಸ್ ನಿಲ್ದಾಣ ಆವರಣದ ಬಳಿ ಇರುವ ಶೌಚಾಲಯದ ಬಾಗಿಲು ಮುಚ್ಚಿರುವ ಕೆಎಸ್ ಎಸ್ ಆರ್ ಟಿಸಿ ಘಟಕ ವ್ಯವಸ್ಥಾಪಕರ ನಡೆಗೆ ಜಾತ್ರಾ ಮಹೋತ್ಸವ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.

ತಾಪಂ ಸಭಾಭನದಲ್ಲಿಮಾ.5ರಂದು ಜಾತ್ರಾ ಮಹೋತ್ಸವದ ಅಂಗವಾಗಿ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿಉಪವಿಭಾಗಾಧಿಕಾರಿ ಶ್ರವಣಕುಮಾರ ನಾಯ್ಕ ಹಾಗೂ ಡಿವೈಎಸ್ಪಿ ರವಿ ನಾಯ್ಕ ಅವರ ಎದುರು ಶೌಚಾಲಯ ಕುರಿತು ಚರ್ಚೆಯಾಗಿತ್ತು. ಬಸ್ ನಿಲ್ದಾಣ ಹತ್ತಿರ ಇರುವ ಶೌಚಾಲಯವನ್ನು ಕೆಎಸ್ ಆರ್ ಟಿಸಿ ಅಧಿಕಾರಿಗಳು ಬಂದ್ ಮಾಡಿದ್ದು, ಸಾರ್ವಜನಿಕರಿಗೆ ತೊಂದರೆಯಾಗಿದೆ. ಹಾಗಾಗಿ, ಬಾಗಿಲು ತೆಗೆಯಿಸಬೇಕು ಎಂದು ಜಾತ್ರಾ ಕಮಿಟಿಯವರು ಮನವಿ ಮಾಡಿದ್ದರು. ಅದಕ್ಕೆ ಎಸಿ ಹಾಗೂ ಡಿವೈಎಸ್ಪಿ ಅವರು, ‘‘ಶೌಚಾಲಯ ಸ್ವಚ್ಛಗೊಳಿಸಿ ಜನರ ಉಪಯೋಗಕ್ಕೆ ಅನುವು ಮಾಡಿಕೂಡಬೇಕು,’’ಎಂದು ಸೂಚಿಸಿದ್ದರು.

‘‘ಎಸಿ ಅವರ ಸೂಚನೆಗೂ ಕೆಎಸ್ ಆರ್ ಟಿಸಿ ವ್ಯವಸ್ಥಾಪಕರು ಕಿಮ್ಮತ್ತು ಕೊಟ್ಟಿಲ್ಲ. ಮಂಗಳವಾರ ಜಾತ್ರೆಗೆ ಆಗಮಿಸಿದ ಲಕ್ಷಾಂತರ ಭಕ್ತರು ಶೌಚ ಮಾಡಲು ಜಾಗ ಇಲ್ಲದೆ ಪರದಾಡಿದ್ದಾರೆ. ಮಹಿಳೆಯರಂತೂ ತೀವ್ರ ಸಮಸ್ಯೆ ಎದುರಿಸಿದ್ದಾರೆ. ಶೀಘ್ರ ಶೌಚಾಲಯದ ಬಾಗಿಲು ತೆರೆಸಬೇಕು,’’ ಎಂದು ಜಾತ್ರಾ ಕಮಿಟಿ ಒತ್ತಾಯಿಸಿದೆ.

ಕ್ವೋಟ್ ...1

ಬಸ್ ನಿಲ್ದಾಣ ಗೋಡೆ ಹತ್ತಿರ ಇರುವ ಶೌಚಾಲಯವನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡುವಂತೆ ನನಗೆ ಯಾರೂ ಸೂಚಿಸಿಲ್ಲ. ಅಕ್ಕಪಕ್ಕದ ಅಂಗಡಿಯವರು ಗಲೀಜು ಮಾಡುತ್ತಾರೆ ಎನ್ನುವ ಕಾರಣಕ್ಕೆ ಶೌಚಾಲಯ ಬಂದ್ ಮಾಡಲಾಗಿದೆ. ಮೂತ್ರಿ ತೆರವುಗೊಳಿಸಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡುವ ಯೋಜನೆ ಇದೆ.

-ಎಚ್ .ಎಸ್ .ಚಕ್ರವರ್ತಿ | ಕೆಎಸ್ ಆರ್ ಟಿಸಿ ಘಟಕ ವ್ಯವಸ್ಥಾಪಕರು, ಹುಕ್ಕೇರಿ

11ಹುಕ್ಕೇರಿ1: ಹುಕ್ಕೇರಿ ಬಸ್ ನಿಲ್ದಾಣದ ಬಳಿ ಇರುವ ಶೌಚಾಲಯದ ಬಾಗಿಲು ಮುಚ್ಚಿರುವುದು.