ವಿಕ ಸುದ್ದಿಲೋಕ ಬೆಂಗಳೂರು ರಾಜ್ಯದಲ್ಲಿಅಡುಗೆ ಅನಿಲ ಪೂರೈಕೆಯಲ್ಲಿವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿಕೇಂದ್ರ ಮತ್ತು ರಾಜ್ಯ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು ಎಂದು ಎಫ್ ಕೆಸಿಸಿಐ ಮನವಿ ಮಾಡಿದೆ. ಈ ಸಂಬಂಧ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಹರ್ದೀಪ್ ಸಿಂಗ್ ಪುರಿ ಹಾಗೂ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಎಫ್ ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ , ‘ಧಿ‘ಅಡುಗೆ ಅನಿಲ ಕೊರತೆ ಹಿನ್ನೆಲೆಯಲ್ಲಿರಾಜ್ಯದ ಬಹುತೇಕ ಕಡೆ ಎಚ್ ಪಿಸಿಎಲ್ ಗ್ಯಾಸ್ ಏಜೆನ್ಸಿಗಳು ತಾತ್ಕಾಲಿಕವಾಗಿ ಬಂದ್ ಆಗಿವೆ. ಇದರಿಂದ ಸಾರ್ವಜನಿಕರಿಗೆ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ತೀವ್ರ ಸಮಸ್ಯೆಯಾಗಿದೆ,’ಧಿ’ ಎಂದು ಹೇಳಿದ್ದಾರೆ. ‘ಧಿ‘ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಚಿವಾಲಯ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಪರಿಹಾರ ಕ್ರಮ ಕೈಗೊಳ್ಳಬೇಕು. ಎಚ್ ಪಿಸಿಎಲ್ , ಅಡುಗೆ ಅನಿಲ ಪೂರೈಕೆಯ ವಸ್ತುಸ್ಥಿತಿಯ ಬಗ್ಗೆ ಪಾರದರ್ಶಕವಾಗಿ ಮಾಹಿತಿ ನೀಡಿದರೆ ಡೀಲರ್ ಗಳು ತಮ್ಮ ದೈನಂದಿನ ವಹಿವಾಟನ್ನು ಯೋಜಿಸಲು ಹಾಗೂ ಪೂರೈಕೆಯಲ್ಲಿನ ವ್ಯತ್ಯಯ ತಡೆಯಲು ಸಹಾಯವಾಗಲಿದೆ,’ಧಿ’ ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

