ವಿಕ ಸುದ್ದಿಲೋಕ ಹೊಳೆನರಸೀಪುರ
ಮನುಜ ಮತ ವಿಶ್ವಪಥವಾಗಬೇಕು ಎಂದು ಕುವೆಂಪು ಅವರು ಸಾಮಾಜಿಕ ಪರಿವರ್ತನೆಗೆ ಸಾಹಿತ್ಯಾತ್ಮಕ ಪ್ರಯತ್ನ ನಡೆಸಿದವರು ಎಂದು ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಿ.ಕೆ.ಕುಮಾರಯ್ಯ ಹೇಳಿದರು.
ಪಟ್ಟಣದ ಮಹಾತ್ಮಗಾಂಧಿ ಉದ್ಯಾನವನದಲ್ಲಿದಲಿತ ಸಾಹಿತ್ಯ ಪರಿಷತ್ತಿನ ವತಿಯಿಂದ ಕುವೆಂಪು ಜನ್ಮದಿನಾಚರಿಸಿ ಮಾತನಾಡಿದರು.
‘‘ಸಕಲ ಜೀವಿಗಳಿಗೆ ಆಶ್ರಯ ನೀಡಿರುವ ಪ್ರಕೃತಿಯೇ ಪ್ರತ್ಯಕ್ಷ ದೇವರು ಎಂದು ನಂಬಿದ್ದವರು. ಸಮಾನತೆಯೊಂದೆ ಪ್ರಗತಿಗೆ ದಾರಿ ಎಂದು ಸಾರಿದವರು. ಆದ್ದರಿಂದಲೇ ಯುಗದ ಕವಿ, ಜಗದಕವಿ ಎನಿಸಿಕೊಂಡಿದ್ದರು. ಮೊದಲು ಆಂಗ್ಲಕವಿ ಎನಿಸಿಕೊಂಡ ಕುವೆಂಪುರವರು, ನಂತರ ಕನ್ನಡದಲ್ಲಿಅತ್ಯಂತ ಮೇರು ಪ್ರಶಸ್ತಿಗಳ ಸರಮಾಲೆಯನ್ನೇ ಮುಡಿಗೇರಿಸಿಕೊಂಡ ಶ್ರೇಷ್ಠ ಕವಿ,’’ ಎಂದರು.
ಎಸ್ ಎಸ್ ಎಲ್ ಸಿಯಲ್ಲಿಅತಿ ಹೆಚ್ಚು ಅಂಕಗಳಿಸಿದ ಪೂರ್ಣಶ್ರೀ ಹಾಗೂ ದಿಶಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕರಾಟೆ ಪಟು ಹರ್ಷವರ್ಧನ್ ಅವರನ್ನು ಪುರಸ್ಕರಿಸಲಾಯಿತು.
ಪ್ರಾಧ್ಯಾಪಕ ಲೋಕೇಶ್ , ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕ ಶಿವರಾಮ್ , ದಲಿತ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಡಿ.ಆರ್ .ರಂಗಸ್ವಾಮಿ, ದಸಾಪ ಅಧ್ಯಕ್ಷ ಡಿ.ಕೆ.ವಸಂತಯ್ಯ, ಉಪಾಧ್ಯಕ್ಷ ಕೆ.ಎಂ.ನಾಗರಾಜ್ , ಚುಟುಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪ್ರೇಮಾ ಮಂಜುನಾಥ್ , ಸಂಪನ್ಮೂಲ ವ್ಯಕ್ತಿ ಪ್ರಭುಶಂಕರ್ ಮತ್ತಿತರರು ಹಾಜರಿದ್ದರು.
ಎಚ್ ಎಸ್ ಎನ್ 30ಎಚ್ ಎನ್ ಪಿ1
ಹೊಳೆನರಸೀಪುರ ಪಟ್ಟಣದ ಮಹಾತ್ಮಗಾಂಧಿ ಉದ್ಯಾನವನದಲ್ಲಿದಲಿತ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕುವೆಂಪು ಜನ್ಮದಿನ ಕಾರ ್ಯಕ್ರಮದಲ್ಲಿಗಣ್ಯರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

