ಹೋಟೆಲ್ , ಪಬ್ , ಬೀಚ್ ಗಳಲ್ಲಿಜೋಶ್ , ವಿಶೇಷ ಕಾರ ್ಯಕ್ರಮ * ಧಾರ್ಮಿಕ ಕೇಂದ್ರಗಳಲ್ಲಿಪ್ರಾರ್ಥನೆ, ಪೂಜೆ
ವಿಕ ಸುದ್ದಿಲೋಕ ಕಾಸರಗೋಡು
ಹೊಸ ವರ್ಷದ ಆಗಮನವನ್ನು ಕಾಸರಗೋಡು ನಗರ ಸೇರಿದಂತೆ ಜಿಲ್ಲೆಯಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು. ಹೋಟೆಲ್ , ಮಾಲ್ ಗಳಲ್ಲಿ, ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಧಾರ್ಮಿಕ ಕೇಂದ್ರಗಳಲ್ಲಿವಿಶೇಷ ಪ್ರಾರ್ಥನೆ, ಪ್ರವಚನಗಳು ನಡೆದವು.
ವಿಶೇಷ ಬಗೆಯ ಆಹಾರ ವೈವಿಧ್ಯ, ಮನರಂಜನೆ, ಡಿಜೆ ಪಾರ್ಟಿಗಳು ಸಂಭ್ರಮವನ್ನು ಇಮ್ಮಡಿಗೊಳಿಸಿದವು. ರೆಸಾರ್ಟ್ ಗಳಲ್ಲೂ ಸಡಗೆ ಮನೆ ಮಾಡಿತ್ತು. ಮಾಲ್ , ಪ್ರವಾಸಿ ತಾಣಗಳು, ಬೀಚ್ ಗಳಲ್ಲಿಹೆಚ್ಚಿನ ಜನರು ಜಮಾಯಿಸಿದ್ದರು. ಯುವಜನರೇ ಚರಣೆಯ ಮುಂಚೂಣಿಯಲ್ಲಿದ್ದರು.
ಹೊಸ ವರ್ಷ ಹೊಸ ಭರವಸೆ ತರಲಿ: ಕಳೆದು ಹೋದ ವರ್ಷದಲ್ಲಿನಡೆದ ಕಹಿ ಘಟನೆಗಳನ್ನು ಮರೆತು ಹೊಸ ವರ್ಷದಲ್ಲಿಹೊಸ ಭರವಸೆಯಿಂದ ಬದುಕು ನಡೆಸಿ ಎಂದು ಮಂಗಳೂರು ಬಿಪಷ್ ಡಾ.ಪೀಟರ್ ಪಾವ್ ್ಲಸಲ್ಡಾನ ಮೊಗರ್ನಾಡ್ ಚರ್ಚ್ನಲ್ಲಿನಡೆದ ವಿಶೇಷ ಪ್ರಾರ್ಥನಾವಿಧಿಯಲ್ಲಿಪ್ರವಚನ ನೀಡಿದರು. ಮಂಗಳೂರು ಕ್ರೈಸ್ತ ಧರ್ಮಕ್ಷೇತ್ರದ ವ್ಯಾಪ್ತಿಯಲ್ಲಿರುವ ದ.ಕ, ಕಾಸರಗೋಡಿನ ಎಲ್ಲಚರ್ಚ್ಗಳಲ್ಲಿಬುಧವಾರ ರಾತ್ರಿ ವಿಶೇಷ ಆರಾಧನೆ, ಪ್ರಾರ್ಥನೆ ಹಾಗೂ ಕೃತಜ್ಞತಾ ಪೂಜೆಗಳು ನಡೆಯಿತು. ಸಂಜೆ ಸುಮಾರು 7ರ ಹೊತ್ತಿಗೆ ಒಂದು ಗಂಟೆಗಳ ಕಾಲದ ಆರಾಧನೆಯಲ್ಲಿಹಳೆಯ ವರ್ಷದಲ್ಲಿದೇವರು ಕರುಣಿಸಿದ ಆರ್ಶೀವಾದಗಳನ್ನು ಸ್ಮರಿಸಿಕೊಂಡು ಕೃತಜ್ಞತೆ ಸಲ್ಲಿಸುವ ಜತೆಗೆ ಕೃತಜ್ಞತಾ ಪೂಜೆಯಲ್ಲಿವಿಶ್ವಶಾಂತಿಗಾಗಿ ಪ್ರಾರ್ಥನೆ ನಡೆಯಿತು.
ಹೊಸ ವರ್ಷಾಚರಣೆಗಾಗಿ ಕಾಸರಗೋಡಿನಲ್ಲಿಪ್ರತ್ಯೇಕ ಸಿದ್ಧತೆ ಮಾಡಲಾಗಿಇತ್ತು. ಬೇಕಲ ಬೀಚ್ ಪಾರ್ಕ್ನಲ್ಲಿಬೀಚ್ ಫೆæಸ್ಟ್ ನಲ್ಲಿಹೊಸ ವರ್ಷಾಚರಣೆ ಹಮ್ಮಿಕೊಂಡಿದ್ದು, ರಾತ್ರಿ 12ರ ತನಕ ಕಾರ್ಯಕ್ರಮ ನಡೆಯಿತು.
ಬಿಗಿ ಬಂದೋಬಸ್ ್ತ: ಹೊಸ ವರ್ಷಾಚರಣೆ ನಿಯಮ ಮೀರಿ ನಡೆಯದಂತೆ ಪೊಲೀಸರು ಕಠಿಣ ಮಾರ್ಗಸೂಚಿ ಪ್ರಕಟಿಸಿದ್ದರಲ್ಲದೆ, ಬಿಗಿ ಬಂದೋ ಬಸ್ ್ತ ಕೈಗೊಂಡಿದ್ದರು. ಕಾಸರಗೋಡು ಜಿಲ್ಲೆಯಲ್ಲಿಅತಿದೊಡ್ಡ ಹೊಸ ವರ್ಷದ ಆಚರಣೆ ನಡೆಯುತ್ತಿರುವ ಬೇಕಲ್ ನಲ್ಲಿಪೊಲೀಸರು ಭಾರಿ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದರು. ವೇಡನ್ ಸಂಗೀತ ಕಾರ್ಯಕ್ರಮದ ಸಂದರ್ಭದಲ್ಲಿಸಂಭವಿಸಿದ ಅಹಿತಕರ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಬೇಕಲ್ ಉತ್ಸವ ನಡೆಯುತ್ತಿರುವ ಪಳ್ಳಿಕೆರೆ ಬೀಚ್ ನಲ್ಲಿಭದ್ರತಾ ವ್ಯವಸ್ಥೆಗಳನ್ನು ಜಿಲ್ಲಾಪೊಲೀಸ್ ಮುಖ್ಯಸ್ಥ ಬಿ.ವಿ. ವಿಜಯಭರತ್ ರೆಡ್ಡಿ ನೇರವಾಗಿ ಮೇಲ್ವಿಚಾರಣೆ ಮಾಡಿದ್ದರು.
(((ಪೊಟೋ.. ಧರ್ಮಸ್ಥಳ, ಮಂಗಳೂರಿನದ್ದು ಬಳಸಿ))))

