ವಿದ್ಯಾರ್ಥಿಗಳ ಐಕ್ಯತಾ ರಾರ ಯಲಿ

Contributed bysantoshettyp@gmail.com|Vijaya Karnataka

ರಾಣೇಬೆನ್ನೂರಿನಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ 56ನೇ ಸಂಸ್ಥಾಪನಾ ದಿನಾಚರಣೆ ಆಚರಿಸಿತು. ಕೆಇಬಿ ಗಣೇಶ ದೇವಸ್ಥಾನದಿಂದ ಬಸ್‌ ನಿಲ್ದಾಣದವರೆಗೆ ವಿದ್ಯಾರ್ಥಿಗಳು ಐಕ್ಯತಾ ರಾರ‍ಯಲಿಯಲ್ಲಿ ಪಾಲ್ಗೊಂಡರು. ಶಿಕ್ಷಣ, ಉದ್ಯೋಗ ಹಕ್ಕುಗಳಿಗಾಗಿ, ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧ ಎಸ್‌ಎಫ್‌ಐ ಹೋರಾಟ ನಡೆಸುತ್ತಿದೆ ಎಂದು ಮುಖಂಡರು ತಿಳಿಸಿದರು. ನೂರಾರು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

students unity rally held today 56th foundation day celebration

ವಿಕ ಸುದ್ದಿಲೋಕ ರಾಣೇಬೆನ್ನೂರ

ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ ಎಫ್ ಐ) ಚಳವಳಿ 56ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ತಾಲೂಕು ಸಮಿತಿ ನೇತೃತ್ವದಲ್ಲಿನಗರದ ಕೆಇಬಿ ಗಣೇಶ ದೇವಸ್ಥಾನದಿಂದ ಬಸ್ ನಿಲ್ದಾಣದವರೆಗೆ ವಿದ್ಯಾರ್ಥಿಗಳ ಐಕ್ಯತಾ ರಾರ ಯಲಿ ನಡೆಯಿತು.

ಎಸ್ ಎಫ್ ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ . ಮಾತನಾಡಿ, ‘‘ಸರ್ವರಿಗೂ ಶಿಕ್ಷಣ, ಉದ್ಯೋಗ ಮೂಲಭೂತ ಹಕ್ಕಿಗಾಗಿ, ಸಮಸಮಾಜದ ನಿರ್ಮಾಣಕ್ಕಾಗಿ, ವಿದ್ಯಾರ್ಥಿ ಸಮುದಾಯದ ಐಕ್ಯತೆಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಎಸ್ ಎಫ್ ಐ ಚಳವಳಿಯು 56 ವರ್ಷದ ಸಂಭ್ರಮಾಚರಣೆಯಲ್ಲಿದೆ. ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧ ದೇಶದ ಉದ್ದಗಲಕ್ಕೂ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಮಾಜವಾದ ಆಶಯಗಳಿಗಾಗಿ ಎಸ್ ಎಫ್ ಐ 56 ವಸಂತಕಾಲ ನಿರಂತರ ಹೋರಾಡುತ್ತಿರುವ ವಿದ್ಯಾರ್ಥಿ ಸಂಘಟನೆಯಾಗಿದೆ’’ ಎಂದರು.

ಜಿಲ್ಲಾ ಮುಖಂಡ ಅರುಣ್ ನಗವತ್ ಮಾತನಾಡಿ, ‘‘ಆಳುವ ಸರಕಾರಗಳ ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧ ಅನ್ಯಾಯ, ಶೋಷಣೆಗಳ, ದೌರ್ಜನ್ಯಗಳ ವಿರುದ್ಧ, ವಿದ್ಯಾರ್ಥಿಗಳ ಹಕ್ಕಿಗಾಗಿ, ಮೂಲಭೂತ ಸೌಕರ್ಯಗಳಿಗಾಗಿ ಆಗ್ರಹಿಸಿ ನಿರಂತರ ವಿದ್ಯಾರ್ಥಿಗಳ ಪರವಾಗಿ ಬೃಹತ್ ಹೋರಾಟಗಳನ್ನು ರೂಪಿಸಿ ಧ್ವನಿ ಎತ್ತುತ್ತಿದೆ’’ ಎಂದರು.

ತಾಲೂಕು ಅಧ್ಯಕ್ಷ ಗೌತಮ್ ಸಾವಕ್ಕನವರ, ಕಾರ್ಯದರ್ಶಿ ಕೃಷ್ಣ ನಾಯ್ಕ, ಕಾಲೇಜ್ ಘಟಕದ ಅಧ್ಯಕ್ಷೆ ಸೌಮ್ಯಾ ಕ್ಯಾತನ, ಭಾಗ್ಯ ಲಮಾಣಿ, ಗುರುದೇವ ಆರ್ ., ತರುಣ್ ಕೆ., ಸಂದೀಪ್ ಎನ್ ., ಜಮಲಸಾಬ್ , ರಾಕೇಶ ಎಚ್ ., ಸ್ನೇಹ ಬ್ಯಾಡಗಿ, ರಮ್ಯಾ ಕರೆಯಜ್ಜನವರ, ಮಧು ಸಿ. ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

--

ಫೋಟೊ 31-ಆರ್ ಎನ್ ಆರ್ -07,07ಎ

ರಾಣೇಬೆನ್ನೂರು ತಾಲೂಕು ಸಮಿತಿ ನೇತೃತ್ವದಲ್ಲಿವಿದ್ಯಾರ್ಥಿಗಳ ಐಕ್ಯತಾ ರಾರ ಯಲಿ ನಡೆಯಿತು.