ಬೆಂಗಳೂರಿನಲ್ಲಿಪಶು ವೈದ್ಯಕೀಯ ಸೇವೆಗಳ ನಿರ್ದೇಶನಾಲಯದ ಆವರಣದಲ್ಲಿಅತ್ಯಾಧುನಿಕ (ಹೈಟೆಕ್ ) ರೇಬಿಸ್ ರೋಗ ನಿರ್ಣಯ ಪ್ರಯೋಗಾಲಯ (ಆರ್ ಡಿಎಲ್ ) ನಿರ್ಮಾಣ ಯೋಜನೆಯ ಹಿಂದೆ ಪಶುಸಂಗೋಪನಾ ಇಲಾಖೆಯ ಎಕ್ಸಿಕ್ಯುಟಿವ್ ಎಂಜಿನಿಯರ್ ರಾಮಪ್ಪ ಕೋರವಾರ ಅವರ ಶ್ರಮ ಮತ್ತು ತಾಂತ್ರಿಕ ನೈಪುಣ್ಯತೆ ಹಿರಿದಾಗಿದೆ. ರಾಮಪ್ಪ ಅವರ ವಿದ್ಯಾರ್ಥಿ ವಸತಿ ನಿಲಯ, ಪ್ರಯೋಗಾಲಯ, ರೇಬಿಸ್ ರೋಗನಿರ್ಣಯ ಪ್ರಯೋಗಾಲಯ, ಮಹಾವಿದ್ಯಾಲಯ (ಬಹುಮಹಡಿ) ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿಬಳಸುವ ಪ್ರತಿಯೊಂದು ವಸ್ತುವು (ಸಿಮೆಂಟ್ , ಉಕ್ಕು, ಮರಳು ಸೇರಿ ಇತರೆ ವಸ್ತುಗಳು)ಉತ್ತಮ ದರ್ಜೆಯದ್ದಾಗಿದ್ದು, ಕಟ್ಟಡವು ಬರೀ ಗೋಡೆಗಳಲ್ಲ, ಅದೊಂದು ಭವಿಷ್ಯದ ಆಸ್ತಿ ಎಂಬ ತತ್ವದಡಿ ಕೆಲಸ ಮಾಡಿದ್ದಾರೆ. ಇವರು ಕೈಗೊಳ್ಳುವ ಕೆಲಸಗಳು ಇತರ ಎಂಜಿನಿಯರುಗಳು, ಉನ್ನತ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿವೆ. ಡಾ.ಯತಿರಾಜ, ಡಾ. ಇಸಲೂರ ಅವರ ಮಾರ್ಗದರ್ಶನದಲ್ಲಿ ರಾಮಪ್ಪನವರು ಕೈಗೊಂಡ ಕಟ್ಟಡ ಕಾಮಗಾರಿ ಕೇವಲ ಸಿಮೆಂಟ್ -ಗಾರೆಯ ರಚನೆಯಲ್ಲ, ಬದಲಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಮಾನದಂಡಗಳನ್ನು ಹೊಂದಿದೆ. ರೇಬಿಸ್ ನಂತಹ ಅಪಾಯಕಾರಿ ವೈರಸ್ ಗಳನ್ನು ಸುರಕ್ಷತಾ ಕ್ರಮಗಳನ್ನು ಇಲ್ಲಿಅಚ್ಚುಕಟ್ಟಾಗಿ ಅಳವಡಿಸಲಾಗಿದೆ. ಈ ಹಿಂದೆ ರೇಬಿಸ್ ಪರೀಕ್ಷೆಗಾಗಿ ವರದಿ ಬರಲು ದಿನಗಟ್ಟಲೆ ಕಾಯಬೇಕಿತ್ತು. ಆದರೆ, ಈ ಹೊಸ ಹೈಟೆಕ್ ಲ್ಯಾಬ್ ನಿಂದಾಗಿ ಅತೀ ವೇಗವಾಗಿ ರೋಗ ಪತ್ತೆ ಹಚ್ಚಬಹುದು. ಬೆಂಗಳೂರು ಮಾತ್ರವಲ್ಲದೆ ಸುತ್ತಲಿನ ಜಿಲ್ಲೆಗಳಿಗೂ ಇದು ಅನುಕೂಲವಾಗಿದೆ. ಸಾರ್ವಜನಿಕರಲ್ಲಿಹರಡುವ ಆತಂಕ ತಡೆಗಟ್ಟಲು ಇದು ಸಹಕಾರಿಯಾಗಿದೆ. ಯಾವುದೇ ಒಂದು ಸರಕಾರಿ ಕಟ್ಟಡವು ಗುಣಮಟ್ಟದಿಂದ ಕೂಡಿರಬೇಕಾದರೆ ಅಲ್ಲಿನ ಎಂಜಿನಿಯರ್ ಗಳ ದೂರದೃಷ್ಟಿ ಮುಖ್ಯ. ರಾಮಪ್ಪ ಅವರು ಈ ಯೋಜನೆಯನ್ನು ನಿಗದಿತ ಸಮಯದಲ್ಲಿಮುಗಿಸಿದ್ದು ಮಾತ್ರವಲ್ಲದೆ ತಾಂತ್ರಿಕ ಸೂಕ್ಷ್ಮತೆಗಳನ್ನು ಗಮನ ದಲ್ಲಿಟ್ಟುಕೊಂಡು ಹೈಟೆಕ್ ಕಟ್ಟಡ ಶಿಲ್ಪಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇಲಾಖೆಯ ಒಳಗೂ ಮತ್ತು ಹೊರಗೂ ಇವರ ಕೆಲಸಕ್ಕೆ ಎಲ್ಲರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸುಸಜ್ಜಿತ ಲ್ಯಾಬ್ ಗಳು ರಾಜ್ಯದ ಪಶುಸಂಗೋಪನಾ ಕ್ಷೇತ್ರದಲ್ಲಿಹೊಸ ಕ್ರಾಂತಿಯನ್ನು ತರಲಿವೆ. ಪ್ರಾಣಿಜನ್ಯ ರೋಗಗಳ ನಿಯಂತ್ರಣಕ್ಕೆ ಭದ್ರ ಬುನಾದಿಯಾಗಲಿವೆ. ರಾಮಪ್ಪ ಅವರು ಕೇವಲ ಒಬ್ಬ ಎಂಜಿನಿಯರ್ ಆಗಿ ಉಳಿಯದೆ ಒಬ್ಬ ಸಮರ್ಥ ಕಟ್ಟಡ ಶಿಲ್ಪಿಯಾಗಿ ಗುರುತಿಸಿಕೊಂಡಿದ್ದಾರೆ. ಸಾಮಾನ್ಯ ಕಟ್ಟಡಗಳಿಗೂ ಮತ್ತು ವೈದ್ಯಕೀಯ ಪ್ರಯೋಗಾಲಯಗಳಿಗೂ ದೊಡ್ಡ ವ್ಯತ್ಯಾಸವಿದೆ. ರೇಬಿಸ್ ಲ್ಯಾಬ್ ನಿರ್ಮಾಣದಲ್ಲಿಅಂತಾರಾಷ್ಟ್ರೀಯ ಗುಣಮಟ್ಟದ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ರಾಮಪ್ಪ ಅವರು ಗಾಳಿಯ ಒತ್ತಡ ನಿಯಂತ್ರಣ ಸೋಂಕು ನಿವಾರಕ ವ್ಯವಸ್ಥೆ ಮತ್ತು ತ್ಯಾಜ್ಯ ವಿಲೇವಾರಿಯ ತಾಂತ್ರಿಕ ಅಂಶಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ ಕೆಲಸ ಮಾಡಿ ಈ ಯೋಜನೆಯನ್ನು ನಿಗದಿತ ಅವಧಿಯಲ್ಲೇ ಪೂರ್ಣಗೊಳಿಸಿ ಇಲಾಖೆಯ ವಿಶ್ವಾಸ ಹೆಚ್ಚಿಸಿದ್ದಾರೆ. ಪಶು ವೈದ್ಯಕೀಯ ತಜ್ಞರ ಅಗತ್ಯತೆಗಳನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ನಕ್ಷೆ ರೂಪಿಸಿ ಕೆಲಸ ಮಾಡುವುದು ದೊಡ್ಡ ಸವಾಲು. ರಾಮಪ್ಪ ಅವರು ವಿಜ್ಞಾನಿಗಳು ಮತ್ತು ಕಾರ್ಮಿಕರ ನಡುವೆ ಉತ್ತಮ ಕೊಂಡಿಯಾಗಿ ಕೆಲಸ ಮಾಡಿ ಈ ಯೋಜನೆ ಯಶಸ್ವಿಗೊಳಿಸಿದ್ದಾರೆ. ರೇಬಿಸ್ ನಂತಹ ಮಾರಕ ರೋಗ ಪತ್ತೆಹಚ್ಚುವಲ್ಲಿಈ ಕಟ್ಟಡ ದೊಡ್ಡ ಪಾತ್ರ ವಹಿಸುತ್ತದೆ. ಇಲಾಖೆಗೆ ಒಂದು ಮಾದರಿ ಮೂಲಸೌಕರ್ಯ ಒದಗಿಸಿದ್ದಾರೆ. ಇತರೆ ಸರಕಾರಿ ಅಧಿಕಾರಿಗಳಿಗೆ ರಾಮಪ್ಪ ಅವರ ಕಾರ್ಯವೈಖರಿ ಒಂದು ಉತ್ತಮ ಮಾದರಿಯಾಗಿದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಡಾ. ಜೆ.ವಿ.ಗೌಡ, ಬೀದರ್ ನ ಕರ್ನಾಟಕ ಪಶು ವಿಶ್ವವಿದ್ಯಾಲಯದ ಕುಲಪತಿ
ಡಾ.ಕೆ.ಸಿ.ವೀರಣ್ಣ, ಕುಲಸಚಿವ ಡಾ. ಪಿ.ಟಿ. ರಮೇಶ,
ಡಾ.ಶ್ರೀನಿವಾಸಗೌಡ, ಡಾ. ಸುರೇಶ ಎಸ್ .ಹೊನ್ನಪ್ಪಗೋಳ,
ಡಾ. ರೇಣುಕಾ ಪ್ರಸಾದ್ , ಡಾ. ಜಯಪ್ರಕಾಶ ಅವರ ಮಾಗದರ್ಶನ ಮತ್ತು ಶಿಸ್ತು ಬದ್ಧತೆ ಕಲಿಕೆಯಿಂದ ಇದು ಸಾಧ್ಯವಾಗಿದೆ.

