ಜಿಲ್ಲೆಯ ಪಿಯು ಫಲಿತಾಂಶ ಕುಸಿತಕ್ಕೆ ವರದಿ ಸಲ್ಲಿಕೆ

Contributed byphanumanthu14@gmail.com|Vijaya Karnataka

ಯಾದಗಿರಿ ಜಿಲ್ಲೆಯ ದ್ವಿತೀಯ ಪಿಯುಸಿ ಫಲಿತಾಂಶ ರಾಜ್ಯದಲ್ಲಿ ಕೊನೆಯ ಸ್ಥಾನ ಪಡೆದಿದೆ. ಬೋಧಕ ಸಿಬ್ಬಂದಿ ಕೊರತೆ, ಆಂಗ್ಲ ಉಪನ್ಯಾಸಕರ ಅಭಾವ, ಸಾಮಾಜಿಕ-ಆರ್ಥಿಕ ಸಮಸ್ಯೆಗಳು, ಮೂಲಸೌಕರ್ಯಗಳ ಕೊರತೆ ಇದಕ್ಕೆ ಕಾರಣ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ವರದಿ ನೀಡಿದೆ. ಗ್ರಾಮೀಣ ಕಾಲೇಜುಗಳಲ್ಲಿ ಪ್ರಯೋಗಾಲಯ, ಡಿಜಿಟಲ್ ಉಪಕರಣಗಳ ಕೊರತೆಯೂ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗಿದೆ. ಆದರೂ, ಕಳೆದ ವರ್ಷಕ್ಕಿಂತ ಫಲಿತಾಂಶ ಸುಧಾರಿಸಿದೆ.

yadgiri district pu results decline report prepared for higher education department

ಬೋಧಕ ಸಿಬ್ಬಂದಿ, ಆಂಗ್ಲಭಾಷಾ ಉಪನ್ಯಾಸಕರ ಕೊರತೆ, ಸಾಮಾಜಿಕ, ಆರ್ಥಿಕ ಸವಾಲುಗಳು, ಮೂಲಸೌಕರ್ಯಗಳ ಕೊರತೆಯಿಂದಲೇ ಫಲಿತಾಂಶ ಕುಸಿತ

ಪಿಯು ಫಲಿತಾಂಶ ಕುಸಿತ: ವರದಿ ಸಲ್ಲಿಸಿದ ಇಲಾಖೆ

ಹನುಮಂತು ಪಿ ಯಾದಗಿರಿ

ಘ್ಕಿpha್ಞ್ಠಞa್ಞಠಿh್ಠ14ಃಜಞaಜ್ಝಿ.್ಚಟಞ

2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ 1ರ ಫಲಿತಾಂಶದಲ್ಲಿಯಾದಗಿರಿ ಜಿಲ್ಲೆಯ ಹಿನ್ನೆಡೆಗೆ ಹಾಗೂ ರಾಜ್ಯದಲ್ಲಿಕೊನೆಯ ಸ್ಥಾನ ಪಡೆಯಲು ಬೋಧಕ ಸಿಬ್ಬಂದಿ ಕೊರತೆ, ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳು, ಮೂಲ ಸೌಕರ್ಯಗಳ ಕೊರತೆ ಹಾಗೂ ಆಂಗ್ಲಭಾಷಾ ಉಪನ್ಯಾಸಕರ ಕೊರತೆಯೇ ಪ್ರಮುಖ ಕಾರಣಗಳಾಗಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪಟ್ಟಿ ಮಾಡಿದೆ.

ರಾಜ್ಯದಲ್ಲಿಕೊನೆಯ ಸ್ಥಾನದಲ್ಲಿರುವ ಯಾದಗಿರಿ ಜಿಲ್ಲೆಶೇ.71.21ರಷ್ಟು ಫಲಿತಾಂಶ ಪಧಿಡೆದು ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮ ಫಲಿತಾಂಶ ಪಡೆದರೂ, ಕೊನೆಯ ಸ್ಥಾನದಲ್ಲಿಉಳಿದಿರುವುದು ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಗುಣಮಟ್ಟವನ್ನು ರಾಜ್ಯದ ಎದುರು ಮತ್ತೊಮ್ಮೆ ಹರಾಜು ಹಾಕಿದಂತಾಗಿರುವುದರಿಂದ ಜಿಲ್ಲೆಯ ಫಲಿತಾಂಶ ಕೊನೆಯ ಸ್ಥಾನಕ್ಕೆ ಕುಸಿಯಲು ಕಾರಣಗಳ ಬಗ್ಗೆ ರಾಜ್ಯ ಸರಕಾರಕ್ಕೆ ವರದಿ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಜಿಲ್ಲಾಡಳಿತ ಈ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಿಂದ ಮಾಹಿತಿ ಕೋರಿದೆ.

ಈ ಹಿನ್ನೆಲೆಯಲ್ಲಿಜಿಲ್ಲಾಡಳಿತಕ್ಕೆ ನೀಡಿರುವ ವರದಿಯಲ್ಲಿಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಉಲ್ಲೇಖಿಸಿರುವಂತೆ ಕಳೆದ ವರ್ಷಕ್ಕಿಂತ ಈ ವರ್ಷ ಶೇಕಡಾವಾರು ಫಲಿತಾಂಶದಲ್ಲಿಗಣನೀಯ ಸುಧಾರಣೆ ಕಂಡಿದ್ದರೂ, ರಾಜ್ಯದ ಇತರೆ ಜಿಲ್ಲೆಗಳಿಗೆ ಸಮಾನವಾಗಿ ಸ್ಪರ್ಧಿಸಲು ವಿಶೇಷವಾಗಿ ವಿಜ್ಞಾನ ಮತ್ತು ಗಣಿತ ವಿಷಯಗಳ ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿರುವುದು ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಿದೆ ಎಂಬ ಕಾರಣ ನೀಡಿದ್ದಾರೆ.

ಜಿಲ್ಲೆಯ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿಆಂಗ್ಲಭಾಷಾ ಉಪನ್ಯಾಸಕರ ಹುದ್ದೆಗಳು ದೀರ್ಘ ಕಾಲದಿಂದ ಖಾಲಿ ಇರುವುದು ಪ್ರಸಕ್ತ ಸಾಲಿನ ಫಲಿತಾಂಶದ ಮೇಲೆ ಅತ್ಯಂತ ಗಂಭೀರ ಪರಿಣಾಮ ಬೀರಿದ್ದು, ಆಂಗ್ಲಭಾಷಾ ವಿಯಷದಲ್ಲಿವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣವು ತೀವ್ರವಾಗಿ ಇಳಿಕೆ ಕಂಡುಬಂದಿದೆ.

ಅದೇ ರೀತಿ ಜಿಲ್ಲೆಯಲ್ಲಿಸಾಮಾಜಿಕ ಹಾಗೂ ಆರ್ಥಿಕ ಸವಾಲುಗಳಿರುವುದರಿಂದ ವಲಸೆ ಸಧಿಮಸ್ಯೆ ಹಾಗೂ ವಿದ್ಯಾರ್ಥಿಗಳು ಕೃಷಿ ಚಟುವಟಿಕೆಗಳಲ್ಲಿತೊಡಗಿಕೊಳ್ಳುವುದರಿಂದ ಅನಿಯಮಿತ ಹಾಜರಾತಿಯೂ ಕಡಿಮೆಯಾಗಿದ್ದು, ಶೈಕ್ಷಣಿಕ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. ಜಧಿತೆಗೆ ಗ್ರಾಮೀಣ ಭಾಗದ ಕಾಲೇಜುಗಳಲ್ಲಿಸುಸಜ್ಜಿತ ಪ್ರಯೋಗಾಲಯಗಳು ಹಾಗೂ ಡಿಜಿಟಲ್ ಕಲಿಕಾ ಉಪಕರಣಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳು ಪ್ರಾಯೋಗಿಕ ಜ್ಞಾನದಿಂದ ವಂಚಿತರಾಗುತ್ತಿದ್ದಾರೆ.

* ಬಾಕ್ಸ್

ವರದಿ ಕೇಳಿದ ರಾಜ್ಯ ಸರಕಾರ?

ಜಿಲ್ಲೆಯ ದ್ವಿತೀಯ ಪಿಯುಸಿ ಫಲಿತಾಂಶ ಕೊನೆಯ ಸ್ಥಾನದಲ್ಲಿರುವುದರಿಂದ ಜಿಲ್ಲಾಡಳಿತದಿಂದ ರಾಜ್ಯ ಸರಕಾರ ವರದಿ ಕೇಳಿರುವ ಬಗ್ಗೆ ಚರ್ಚೆಗಳು ನಡೆದಿದ್ದು, ಈ ಬಗ್ಗೆ ಖಚಿತ ಪಡಿಸಿಕೊಳ್ಳಲು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ, ಅವರು ಮೊಬೈಲ್ ಸಂಪರ್ಕಕ್ಕೆ ಸಿಗಲಿಲ್ಲ.

* ಬಾಕ್ಸ್

ಕೊನೆಯಲ್ಲಿದ್ದರೂ ಇದೊಂದು ಸಕಾರಾತ್ಮಕ ಬದಲಾವಣೆ

ಸರಕಾರಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿಶೇ.67.41ರಷ್ಟು ಉತ್ತೀರ್ಣರಾಗಿದ್ದು, ರಾಜ್ಯಮಟ್ಟದಲ್ಲಿಜಿಲ್ಲೆಯು 29ನೇ ಸ್ಥಾನದಲ್ಲಿದೆ. ಇದು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದಲ್ಲಿಕಂಡುಬಂದ ಸಕಾರಾತ್ಮಕ ಬದಲಾವಣೆ ಸಂಕೇತವಾಗಿದ್ದು, ರಾಜ್ಯದಲ್ಲಿಕೊನೆಯ ಸ್ಥಾನದಲ್ಲಿರುವ ಜಿಲ್ಲೆಯಲ್ಲಿಇದೊಂದು ಸಕಾರಾತ್ಮಕ ಬದಲಾವಣೆ ಆಗಿದೆ ಎಂದು ಉಪನಿರ್ದೇಶಕರ ವದರಿಯಲ್ಲಿಉಲ್ಲೇಖಿಸಿರುವ ಅಂಶವಾಗಿದೆ.

ಕೋಟ್ )ಧಿ)ಧಿ)ಧಿ)

ರಾಜ್ಯದಲ್ಲಿದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿಯಾದಗಿರಿ ಜಿಲ್ಲೆಯ ಫಲಿತಾಂಶ ಕೊನೆಯ ಸ್ಥಾನದಲ್ಲಿರುವ ಪರಿಣಾಮ ಧಿಸಿಎಂ ಸಿದ್ದರಾಮಯ್ಯ ಅವರು ವಿಡಿಯೊ ಸಂವಾದಲ್ಲಿಜಿಲ್ಲೆಯ ಫಲಿತಾಂಶದ ಬಗ್ಗೆ ಕೇಳಿದಾಗ ವರದಿ ನೀಡುವ ಸಲುವಾಗಿ ಜಿಲ್ಲಾಡಳಿತ ಮಾಹಿತಿ ಕೇಳಿರುವುದರಿಂದ ಜಿಲ್ಲೆಯ ಫಲಿತಾಂಶ ಕುಸಿತಕ್ಕೆ ಕಾರಣವಾಗಿರುವ ಅಂಶಗಳನ್ನು ಪಟ್ಟಿಮಾಡಿ ವರದಿ ನೀಡಲಾಗಿದೆ.

-ಪಂಡಿತರಾವ್ ಪವಾರ್ , ಜಿಲ್ಲಾಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ