18ರಿಂದ ಕುತ್ತಿಕೋಳ್ ಶ್ರೀ ತಂಬುರಾಟಿ ಭಗವತಿ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶ, ಕಳಿಯಾಟ ಮಹೋತ್ಸವ

Contributed bygangadhar.korekkana@gmail.com|Vijaya Karnataka

ಕಾಸರಗೋಡಿನ ಕುತ್ತಿಕೋಳ್‌ ಶ್ರೀ ತಂಬುರಾಟಿ ಭಗವತಿ ದೇವಸ್ಥಾನದಲ್ಲಿ ಪುನರ್‌ ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ಕಳಿಯಾಟ ಮಹೋತ್ಸವ ಏ. 18 ರಿಂದ 28 ರವರೆಗೆ ನಡೆಯಲಿದೆ. ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯೊಂದಿಗೆ ಕಾರ್ಯಕ್ರಮಗಳು ಆರಂಭವಾಗಲಿವೆ. ದೇವಸ್ಥಾನದ ಪುನರ್‌ ಪ್ರತಿಷ್ಠಾಪನೆ ಮತ್ತು ಕಳಿಯಾಟ ಉತ್ಸವವು ಹತ್ತು ದಿನಗಳ ಕಾಲ ನಡೆಯಲಿದೆ.

kutti koll shri tamburaati bhagavati temples re establishment of brahma kalasha and kaliyaat festival key highlights

ಕಾಸರಗೋಡು: ಕುತ್ತಿಕೋಳ್ ಶ್ರೀ ತಂಬುರಾಟಿ ಭಗವತಿ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶ ಮತ್ತು ಕಳಿಯಾಟ ಮಹೋತ್ಸವ ಏ. 18ರಿಂದ 28ರ ವರೆಗೆ ನಡೆಯಲಿದೆ. ಬ್ರಹ್ಮಕಲಶ ಮತ್ತು ಕಳಿಯಾಟ ಮಹೋತ್ಸವ ಏ. 18ರಿಂದ 23ರ ತನಕ ಬ್ರಹ್ಮಶ್ರೀ ಇರುವೈಲು ಕೇಶವ ತಂತ್ರಿಗಳ ಕಾರ್ಮಿಕತ್ವದಲ್ಲಿಹಾಧಿಗೂ 24ರಿಂದ 28ರ ವರೆಗೆ ಐದು ದಿನಗಳ ಕಾಲ ಕಳಿಯಾಟ ಮಹೋತ್ಸವ ನಡೆಯಲಿದೆ ಎಂದು ಆಚರಣಾ ಸಮಿತಿ ಎ. ಮಾಧವನ್ ನಾಯರ್ ಕಳಕ್ಕರ ಸುದ್ದಿಗೋಷ್ಠಿಯಲ್ಲಿಮಾಹಿತಿ ನೀಡಿದರು.

ಏ. 18ರಂದು ಬೆಳಗ್ಗೆ 10 ಗಂಟೆಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯೊಂದಿಗೆ ಮಹೋತ್ಸವ ಕಾರ್ಯಕ್ರಮಗಳು ಆರಂಭವಾಗಲಿವೆ. ಬೆಳಗ್ಗೆ 11.30ಕ್ಕೆ ಮಾತೃ ಸಂಗಮವನ್ನು ಸುಳ್ಯ ಶಾಸಕ ಭಾಗೀರಥಿ ಮುರುಳ್ಯ ಉದ್ಘಾಟಿಸುವರು.

ಕುತ್ತಿಕೋಳ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭನಾ ಕುಮಾರಿ ಅಧ್ಯಕ್ಷತೆ ವಹಿಸುವರು. ಶಿಕ್ಷಕಿ ಇಂದಿರಾಕುಟ್ಟಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

ಏ. 19 ರಂದು ಬೆಳಗ್ಗೆ 5.30ಕ್ಕೆ ಲಲಿತಾ ಸಹಸ್ರನಾಮ, ಹರಿ ನಾಮ ಕೀರ್ತನೆ ಸಂಖ್ಯೆ ನಡೆಯಲಿದೆ. ಸಂಜೆ 3 ಗಂಟೆಗೆ ಸಾಂಸ್ಕೃತಿಕ ಸಭೆಯನ್ನು ಸಂಸದ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸಲಿದ್ದಾರೆ. ಸಿ.ಎಚ್ . ಕುಂಞಂಬು ಅಧ್ಯಕ್ಷತೆ ವಹಿಸಲಿದ್ದಾರೆ. ವಲ್ಸನ್ ಪಿಲಿಕೋಡ್ ಸಾಂಸ್ಕೃತಿಕ ಉಪನ್ಯಾಸ ನೀಡಲಿದ್ದಾರೆ.

ಏ. 20ರಂದು ಬೆಳಗ್ಗೆಯಿಂದ ನಾಧಿನಾ ಪೂಜಾ ವಿಧಿವಿಧಾನಗಳು ನಡೆಯಲಿವೆ. ಸಂಜೆ 3 ಗಂಟೆಗೆ ನಟ್ಟರಿವು ಸಭಾ ಕಾರ್ಯಕ್ರಮವನ್ನು ಕೇರಳ ಪೂರಕಳಿ ಅಕಾಡೆಮಿ ಅಧ್ಯಕ್ಷ ಕೆ.ಕುಂಞಿರಾಮನ್ ಉದ್ಘಾಟಿಸಲಿದ್ದಾರೆ.

ಏ. 21ರಂದು ಬೆಳಗ್ಗೆ 9 ಗಂಟೆಗೆ ಶಿವ ಸಹಸ್ರನಾಮ. ಬೆಳಗ್ಗೆ 10 ಗಂಟೆಗೆ ಅಕ್ಷರಶ್ಲೋಕ ಸಭಾ ಕಾರ್ಯಕ್ರಮ. ಸಂಧಿಜೆ 3 ಗಂಟೆಗೆ ಧಾರ್ಮಿಕ ಸಾಮರಸ್ಯ ಸಭೆಯನ್ನು ಜಿಲ್ಲಾಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ ಉದ್ಘಾಟಿಸಲಿದ್ದಾರೆ. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ರೆ. ಫಾ. ಡಾ. ಜೋಸೆಫ್ ವಾರನಾಥ, ಅಬ್ದುಲ್ ಖಾದರ್ ಸಖಾಫಿ ಕಟ್ಟಿಪ್ಪಾರ, ಇಸ್ಮಾಯಿಲ್ ಬಡವಿ ಭಾಗವಹಿಸುವರು.

ಏ. 22ರಂದು ಸಂಜೆ 3 ಗಂಟೆಗೆ ನಡೆಯುವ ವಿಚಾರ ಸಂಕಿರಣವನ್ನು ಮಾಜಿ ಶಾಸಕ ಕೆ.ವಿ. ಕುಂಞಿರಾಮನ್ ಉದ್ಘಾಟಿಸುವರು. ಇತಿಹಾಸಿಕ ಸಂಶೋಧಕ ಡಾ.ಸಿ. ಬಾಲನ್ ಉಪನ್ಯಾಸ ನೀಡುವರು.

ಏ.23ರಂದು ಮಹಾಮಸ್ತಕಾಭಿಷೇಕದ ಬಳಿಕ ಏ.24ರಂದು ದೇವಸ್ಥಾನದ ಕಳಿಯಾಟ ಉತ್ಸವ ಆರಂಭವಾಗಲಿದೆ. ಭಂಡಾರ ಆಗಮನದ ಬಳಿಕ ಕಳಿಯಾಟ ಆರಂಭವಾಗಲಿದೆ.

ಏ.25ರಂದು ಸಂಜೆ 5 ಗಂಟೆಗೆ ಪುಲ್ಲೂರನ್ ಕೋಲದೊಂದಿಗೆ ಆರಂಭದೊಂದಿಗೆ ನಾನಾ ಕೋಲಗಳು ನಡೆಯಲಿದೆ. ಏ. 26ರಂದು ನಡುಕಳಿಯಾಟ, ರಾತ್ರಿ 9 ಗಂಟೆಗೆ ಕುತ್ತಿಕೋಳ್ ಸಮಿತಿ ವತಿಯಿಂದ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಪುಲಿಕಂಡನ್ ಕೋಲದ ವೆಳ್ಳಾಟ್ಟಂ ನಡೆಯಲಿದೆ.

ಏ. 27ರಂದು ಬೆಳಗ್ಗೆ 5.30ಕ್ಕೆ ಶ್ರೀ ಪುಳ್ಳಿ ಕರಿಂಕಾಳಿ ಅಮ್ಮನವರ ಆಯಿರ ತಿರಿ ಮಹೋತ್ಸವ ಜರುಗಲಿದೆ. ನಂತರ ನಾನಾ ಕೋಲಗಳು ನಡೆಯಲಿವೆ. ಏ. 28ರಂದು ಕಳಿಯಾಟದ ಕೊನೆಯ ದಿನವಾದ ಬೆಳಗ್ಗೆ 7 ಗಂಟೆಗೆ ನಾಧಿನಾ ಕೋಲಗಳು ನಡೆಯಲಿವೆ. ಸಂಜೆ 6 ಗಂಟೆಗೆ ಶ್ರೀ ಪುಲ್ಲೂರನ್ ಕೋಲದ ತಿರುಮುಡಿ ಸಮರ್ಪಣೆ ನಡೆಯಲಿದೆ. ರಾತ್ರಿ 8 ಗಂಟೆಗೆ ಶ್ರೀ ತಂಬುರಾಟಿ ಅಮ್ಮನವರ ತಿರುಮುಡಿ ನಡೆಯಲಿದೆ. ರಾತ್ರಿ 10 ಗಂಟೆಗೆ ಶ್ರೀ ತಂಬುರಾಟಿ ಭಗವತಿ ಭಗವತಿಯ ಮುಡಿಯನ್ನು ಇಳಿಸುವುದರೊಂದಿಗೆ 10 ದಿನಗಳ ಕಾಲ ನಡೆದ ತಂಬು ರಟ್ಟಿ ಭಗವತಿ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಕಾಳಿಯಾಟ ಉತ್ಸವ ಮುಕ್ತಾಯಗೊಳ್ಳಲಿದೆ.

ಸುದ್ದಿಗೋಷ್ಠಿಯಲ್ಲಿಆಚರಣಾ ಸಮಿತಿಯ ಪ್ರಧಾನ ಸಂಚಾಲಕ ಟಿ ಕುಂಞಿಕೃಷ್ಣನ್ , ಕೋಶಾಧಿಧಿಕಾರಿ ಪಿ.ವಿ. ಗೋಪಾಲನ್ ಬೆಡಗಂ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ.ಟಿ. ಶ್ರೀಧರನ್ , ಬಿ. ವಿಜಯನ್ ಪಾಣೂರು, ಕೆ. ಅರವಿಂದನ್ , ರತೀಶ್ ಚೆಲಿಟ್ಟುಕರನ ವೇದಿಕೆ ಉಪಸ್ಥಿತರಿದ್ದರು.