ವಿಕ ಸುದ್ದಿಲೋಕ ಮಂಗಳೂರು
ಖಾಸಗಿ ವಾಹನಗಳಲ್ಲಿಶಾಲಾ ಮಕ್ಕಳನ್ನು ಸಾಗಾಟ ಮಾಡಲಾಗುತ್ತಿದ್ದು, ಇದರ ವಿರುದ್ಧ ಸುಮಾರು 17 ಬಾರಿ ದೂರು ನೀಡಿದರೂ ಕ್ರಮವಾಗಿಲ್ಲ. ಮುಂದಿನ ಶೈಕ್ಷಣಿಕ ಆರಂಭವಾಗುವುದರೊಳಗೆ ಕ್ರಮಕೈಗೊಳ್ಳದಿದ್ದಲ್ಲಿಉಗ್ರ ಹೋರಾಟ ನಡೆಸುವುದು ಅನಿವಾರ್ಯವಾದೀತು ಎಂದು ದಕ್ಷಿಣ ಕನ್ನಡ ಜಿಲ್ಲಾಶಾಲಾ ಮಕ್ಕಳ ವಾಹನ ಚಾಲಕರ ಸಂಘ ಗೌರವಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿಗುರುವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿ, ಖಾಸಗಿ (ವೈಟ್ ಬೋರ್ಡ್ )ವಾಹನದ ಚಾಲಕರು, ಮಾಲೀಕರು ನಿಯಮ ಮೀರಿ ಮಕ್ಕಳನ್ನು ಕೊಂಡೊಯ್ಯುತ್ತಿದ್ದಾರೆ. ತ್ರಾಸಿಯಲ್ಲಿಕೆಲ ವರ್ಷದ ಹಿಂದೆ ಖಾಸಗಿ ವಾಹನದಲ್ಲಿವಿದ್ಯಾರ್ಥಿಗಳನ್ನು ಸಾಗಾಟ ಮಾಡಿದ ಸಂದರ್ಭ ದುರ್ಘಟನೆಯಾಗಿತ್ತು. ಈ ಸಂದರ್ಭ ಮಕ್ಕಳಿಗೆ ಸಮರ್ಪಕವಾದ ಪರಿಹಾರ ಸಿಕ್ಕಿಲ್ಲ. ಇಂತಹ ಘಟನೆಗಳು ಕಣ್ಣ ಮುಂದಿದ್ದರೂ ಮಂಗಳೂರು ಸೇರಿದಂತೆ ಜಿಲ್ಲೆಯ ಅನೇಕ ಕಡೆಗಳಲ್ಲಿವಾಹನ ಸಂಚಾರ ನಿಯಮಗಳನ್ನೇ ಉಲ್ಲಂಘಿಘಿಸಿ ಖಾಸಗಿ ವಾಹನಗಳಲ್ಲಿವಿದ್ಯಾರ್ಥಿಗಳನ್ನು ಸಾಗಾಟ ಮಾಡಲಾಗುತ್ತಿದೆ ಎಂದರು.
ಟೂರಿಸ್ಟ್ ವಾಹನಗಳ ಮಾಲೀಕರು ದುಬಾರಿ ತೆರಿಗೆ, ಇನ್ಸೂರೆನ್ಸ್ ಸೇರಿದಂತೆ ಸುಮಾರು 23 ಸಾವಿರ ರೂ. ಕಟ್ಟಿ ವಾಹನ ಓಡಿಸುತ್ತಾರೆ. ಸರಕಾರದ ನಿರ್ದೇಶನದಂತೆ ಪ್ಯಾನಿಕ್ ಬಟನ್ ಗಾಗಿ 14 ಸಾವಿರ ರೂ. ಕಟ್ಟಬೇಕಾಗಿದೆ. ಆದರೆ ಖಾಸಗಿ ವಾಹನಗಳಲ್ಲಿಪ್ಯಾನಿಕ್ ಬಟನ್ ಆಗಲಿ, ದುಬಾರಿ ಇನ್ಸೂರೆನ್ಸ್ ಆಗಲಿ, ಯಾವುದೇ ರೀತಿಯ ತೆರಿಗೆಗಳನ್ನು ಪಾವತಿಸದೆ ಬಾಡಿಗೆ ಆಧಾರದಲ್ಲಿಮಕ್ಕಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ಸಮಸ್ಯೆ ಬಗೆಹರಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿಸಂಘ ಅಧ್ಯಕ್ಷ ಸತೀಶ್ ಪೂಜಾರಿ ಅಶೋಕನಗರ, ಸಂಘ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ಸ್ಥಾಪನಾಧ್ಯಕ್ಷ ಮೋಹನ್ ಕುಮಾರ್ ಅತ್ತಾವರ, ಕಾರ್ಯಾಧ್ಯಕ್ಷ ಕಿರಣ್ ಲೇಡಿಹಿಲ್ , ಸಂಘಟನಾ ಕಾರ್ಯದರ್ಶಿ ಲೋಕೇಶ್ ಸುರತ್ಕಲ್ ಉಪಸ್ಥಿತರಿದ್ದರು.

