ಕಾಸರಗೋಡು : ಎಸ್ ಸಿ, ಎಸ್ ಟಿ ಕಾನ್ಫೆಡರೇಶನ್ ನ ಆಶ್ರಯದಲ್ಲಿಮಂಗಳವಾರ ವಿದ್ಯಾನಗರದಲ್ಲಿಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಚೆಂಗಳ ಪಂಚಾಯಿತಿ ಅಧ್ಯಕ್ಷ ವಸಂತ ಅಜಕ್ಕೋಡು ಉದ್ಘಾಟಿಸಿದರು. ಜಿಲ್ಲಾಅಧ್ಯಕ್ಷ ಐ. ಲಕ್ಷತ್ರ್ಮಣ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಅಧ್ಯಕ್ಷ ಬಾಬು ನೀಲೇಶ್ವರ ಮುಖ್ಯ ಭಾಷಣಗೈದರು. ಅತ್ಯುತ್ತಮ ಅಧ್ಯಾಪಕರಿಗಿರುವ ಪುರಸ್ಕಾರ ಪಡೆದ ಡಾ. ಮಾಧವ ಕಾರಡ್ಕ ಅವರನ್ನು ಗೌರವಿಸಲಾಯಿತು. ಪೊನ್ನಪ್ಪ ಅಮ್ಮಂಗೋಡು, ರಾಘವನ್ ಉದುಮ, ಸಿ. ಕೆ. ಗಣೇಶ್ , ಮಾಧವನ್ ಕಾರಡ್ಕ ಮತ್ತಿತರರು ಮಾತನಾಡಿದರು.
ಚಿತ್ರ: 15ಕೆಎಸ್ ಎಲ್ ಅಂಬೇಡ್ಕರ್ - ಚೆಂಗಳ ಪಂಚಾಯಿತಿ ಅಧ್ಯಕ್ಷ ವಸಂತ ಅಜಕ್ಕೋಡು ಉದ್ಘಾಟಿಸಿದರು.

