ಚೌಕ್ ಗಡಿಯಾರ ದುರಸ್ತಿ
ವಿಕ ಸುದ್ದಿಲೋಕ ಲಿಂಗಸುಗೂರು
ಪಟ್ಟಣದ ಹೃದಯ ಭಾಗದಲ್ಲಿರುವ ಗಡಿಯಾರ ಚೌಕ್ ನ ಗಡಿಯಾರಗಳ ದುರಸ್ತಿಗೆ ಪುರಸಭೆ ಆಡಳಿತ ಗುರುವಾರ ಮುಂದಾಗಿದೆ.
ಈ ಕುರಿತು ‘ವಿಜಯ ಕರ್ನಾಟಕ’ ಪತ್ರಿಕೆ ಏ.16ರಂದು ‘ಶತಮಾನದ ಗಡಿಯಾರ ಮೌನ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿರುವ ಪುರಸಭೆ ಆಡಳಿತ ಗಡಿಯಾರಗಳ ದುರಸ್ತಿ ಆರಂಭಿಸಿದೆ. ಚೌಕ್ ನ ನಾಲ್ಕು ಕಡೆಗಳಲ್ಲಿಇರುವ ಗಡಿಯಾರಗಳಿಗೆ ಶೆಲ್ , ಮೋಟರ್ ಅಳವಡಿಸಲಾಗಿದ್ದು, ಸದ್ಯಕ್ಕೆ ಸಮಯ ತೋರಿಸುತ್ತಿವೆ. ಶೀಘ್ರ ಸಂಗೀತವೂ ಆರಂಭವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
---
16ಆರ್ ಸಿಎಚ್ ಎಲ್ ಎನ್ ಜಿ1: ಲಿಂಗಸುಗೂರು ಪಟ್ಟಣದ ಚೌಕ್ ನಲ್ಲಿರುವ ಗಡಿಯಾರಗಳ ದುರಸ್ತಿ ಮಾಡಲಾಯಿತು.
---
16ಆರ್ ಸಿಎಚ್ ಎಲ್ ಎನ್ ಜಿ2: ಗಡಿಯಾರ ಚೌಕ್ ಬಗ್ಗೆ ಪ್ರಕಟವಾದ ವರದಿಯ ಪ್ರತಿ.

