ವಯಸ್ಸಾದ ಶಿಕ್ಷಕರಿಗೆ ಗಣತಿಯಲ್ಲಿವಿನಾಯಿತಿಗೆ ಮನವಿ

Contributed bydmpatilp18@gmail.com|Vijaya Karnataka

ಆಳಂದ ತಾಲೂಕಿನಲ್ಲಿ 2026-27ರ ಜನಗಣತಿ ಕಾರ್ಯಕ್ಕೆ ನಿಯೋಜನೆಗೊಂಡಿರುವ ವಯೋವೃದ್ಧ, ಅನಾರೋಗ್ಯ ಪೀಡಿತ, ಗರ್ಭಿಣಿ, ವಿಶೇಷ ಚೇತನ ಶಿಕ್ಷಕರಿಗೆ ವಿನಾಯಿತಿ ನೀಡಬೇಕೆಂದು ಖಾಸಗಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದುಂಡಪ್ಪ ಜಮಾದಾರ, ಕಾರ್ಯದರ್ಶಿ ನಾಗಪ್ಪ ಕಾಮನಳ್ಳಿ ಆಗ್ರಹಿಸಿದ್ದಾರೆ. ಬಿಇಒ ವಿ.ರಂಗಸ್ವಾಮಿ ಶಟ್ಟಿ ಹಾಗೂ ತಹಸೀಲ್ದಾರ ಅಣ್ಣಾರಾವ ಪಾಟೀಲ್‌ ಅವರಿಗೆ ಮನವಿ ಸಲ್ಲಿಸಲಾಗಿದೆ. ಶಿಕ್ಷಕರ ಕೊರತೆ ಇಲ್ಲದ ಕಾರಣ, ತೊಂದರೆಗೊಳಗಾದವರಿಗೆ ವಿನಾಯಿತಿ ನೀಡಲು ಕೋರಲಾಗಿದೆ.

request for exemption from census for retired teachers a plea in aland taluk

16 ಎಎಲ್ಡಿ 4

ಆಳಂದ ತಾಲೂಕಿನಲ್ಲಿಜನಗಣತಿಗೆ ನೇಮಕವಾಗಿರುವ ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರು,ಕಾಯಿಲೆಗಳಿಂದ ಬಳಲುತ್ತಿರುವರಿಗೆ ವಿನಾಯಿತಿ ನೀಡುವಂತೆ ಅನುದಾನಿತ ಶಾಲಾ ಶಿಕ್ಷಕರ ಸಂಘದಿಂದ ಬಿಇಒ ವಿ.ರಂಗಸ್ವಾಮಿ ಶಟ್ಟಿಗೆ ಮನವಿ ಸಲ್ಲಿಸಿದರು.

ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರಿಗೆ ಗಣತಿಯಲ್ಲಿವಿನಾಯಿತಿ ನೀಡಿ

ವಿಕ ಸುದ್ದಿಲೋಕ ಆಳಂದ

ತಾಲೂಕಿನಲ್ಲಿಜನಗಣತಿ 2026-27 ಈ ಕಾರ್ಯಕ್ಕೆ ನೇಮಕವಾಗಿರುವ ಶಿಕ್ಷಕರಲ್ಲಿವಯಸ್ಸಾದವರಿಗೆ, ಕಾಯಿಲೆಗಳಿಂದ ಬಳಲುತ್ತಿರುವರಿಗೆ, ಗರ್ಭಿಣಿಯರಿಗೆ , ವಿಶೇಷ ಚೇತನರಿಗೆ ವಿನಾಯಿತಿ ನೀಡುವಂತೆ ಖಾಸಗಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ದುಂಡಪ್ಪ ಜಮಾದಾರ, ಕಾರ್ಯದರ್ಶಿ ನಾಗಪ್ಪ ಕಾಮನಳ್ಳಿ ಆಗ್ರಹಿಸಿದ್ದಾರೆ.

ಈ ಕುರಿತು ತಹಸೀಲ್ದಾರ ಅಣ್ಣಾರಾವ ಪಾಟೀಲ್ ಹಾಗೂ ಬಿಇಒ ವಿ.ರಂಗಸ್ವಾಮಿ ಶಟ್ಟಿ ಅವರಿಗೆ ಮನವಿ ಪತ್ರ ಸಲ್ಲಿಸಿರುವ ಅವರು, ಗಣತಿ ಕಾರ್ಯಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ನಿಯೋಜನೆ ಗೊಂಡಿರುವ ತರಬೇತಿ ಪಡೆದು ಕಾರ್ಯಕ್ಕೆ ಸಜ್ಜಾಗುತ್ತಿದ್ದಾರೆ. ಗಣತಿ ಕಾರ್ಯಕ್ಕೆ ಶಿಕ್ಷಕರ ಕೊರತೆ ಆಗಲ್ಲ. ಹೀಗಾಗಿ ತೊಂದರೆ ಇವರುವರಿಗೆ ಮಾತ್ರ ಅವರ ಮನವಿ ಸ್ವೀಕರಿಸಿ ಅವರಿಗೆ ಗಣತಿಯಿಂದ ಮುಕ್ತ ಮಾಡಬೇಕು ಎಂದು ಅವರು ಮನವಿ ಪತ್ರದಲ್ಲಿತಿಳಿಸಿದ್ದಾರೆ.