ಸಬ್ಸಿಡಿ ಆಸೆ ತೋರಿಸಿ ರೈತರಿಗೆ 1.34 ಕೋಟಿ ರೂ. ವಂಚನೆ

Contributed bychethan.bp@timesofindia.com|Vijaya Karnataka

ಕೃಷಿ ಪರಿಕರಗಳನ್ನು ಸಬ್ಸಿಡಿ ದರದಲ್ಲಿ ಕೊಡಿಸುವುದಾಗಿ ನಂಬಿಸಿ, ಗಂಗಾಧರಗೌಡ ಎಂಬಾತ ಸುಮಾರು 80 ರೈತರಿಂದ 1.34 ಕೋಟಿ ರೂ. ವಂಚಿಸಿದ್ದಾನೆ. ಹಣ ಪಡೆದ ನಂತರ ಸಂಪರ್ಕಕ್ಕೆ ಸಿಗದಿದ್ದಾಗ ರೈತರು ಅನುಮಾನಗೊಂಡು ದೂರು ನೀಡಿದ್ದಾರೆ. ಪೊಲೀಸರು ಆರೋಪಿ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣ ಕಡೂರು ತಾಲೂಕಿನ ವೈ. ಮಲ್ಲಾಪುರದಲ್ಲಿ ನಡೆದಿದೆ.

political connection leads to a 134 crore fraud with farmers

ಸಬ್ಸಿಡಿ ಆಸೆ ತೋರಿಸಿ ರೈತರಿಗೆ 1.34 ಕೋಟಿ ರೂ. ವಂಚನೆ

ವಿಕ ಸುದ್ದಿಲೋಕ ಚಿಕ್ಕಮಗಳೂರು

ಕೃಷಿ ಪರಿಕರಗಳನ್ನು ಸಬ್ಸಿಡಿ ದರದಲ್ಲಿಕೊಡಿಸುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿ, ಸುಮಾರು 80 ರೈತರಿಗೆ 1.34 ಕೋಟಿ ರೂ. ವಂಚಿಸಿದ್ದಾನೆ.

ವೈ. ಮಲ್ಲಾಪುರದ ಮಹೇಶ್ವರಪ್ಪ ಎಂಬುವರಿಗೆ 2024ರಲ್ಲಿಬೆಂಗಳೂರಿನಲ್ಲಿಪರಿಚಿತನಾದ ವ್ಯಕ್ತಿ ತನ್ನ ಹೆಸರು ಗಂಗಾಧರಗೌಡ ಪ್ರವಾಸೋದ್ಯಮ ಇಲಾಖೆಯಲ್ಲಿಕಾರ್ಯನಿರ್ವಹಿಸುತ್ತಿದ್ದೇನೆ. ಕೃಷಿ ಇಲಾಖೆಯಲ್ಲಿಟ್ರ್ಯಾಕ್ಟರ್ ಸೇರಿದಂತೆ ಇತರೆ ಕೃಷಿ ಉಪಕರಣಗಳನ್ನು ಸಬ್ಸಿಡಿ ದರದಲ್ಲಿಕೊಡಿಸುತ್ತೇನೆ ಎಂದು ಪರಿಚಯಿಸಿಕೊಂಡಿದ್ದ. ಇದನ್ನು ನಂಬಿದ ಮಹೇಶ್ವರಪ್ಪ ತಮ್ಮ ಸ್ನೇಹಿತರು ಸೇರಿದಂತೆ ಹಲವರ ಜತೆ ಈ ವಿಷಯ ಹಂಚಿಕೊಂಡಿದ್ದಾರೆ. ಒಟ್ಟು 80 ರೈತರಿಂದ ಸಂಗ್ರಹವಾದ 1,34,98,400 ಕೋಟಿ ರೂ.ಗಳನ್ನು ಗಂಗಾಧರಗೌಡ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿ ಖಾತೆಗೆ ಜಮಾ ಮಾಡಿದ್ದಾರೆ.

ಹಲವು ದಿನಗಳು ಕಳೆದರೂ ಯಾವುದೇ ಸಬ್ಸಿಡಿ ಬರದಿದ್ದಾಗ ದೂರವಾಣಿ ಕರೆ ಮಾಡಿ ವಿಚಾರಿಸಿದರೆ ಸದನ ಕಲಾಪ ಮುಗಿಯಬೇಕು, ಕಡತಗಳ ವಿಲೇವಾರಿ ಬಾಕಿ ಇದೆ. ಹೀಗೆ ಸಬೂಬು ಹೇಳುತ್ತಾ ಬಂದಿದ್ದಾನೆ. ಕೊನೆಗೆ ದೂರವಾಣಿ ಸಂಪರ್ಕಕ್ಕೂ ಸಿಗದ ಹಿನ್ನೆಲೆ ಅನುಮಾನಗೊಂಡ ರೈತರು ದೂರು ನೀಡಿದ್ದಾರೆ.

ಕಡೂರು ತಾಲೂಕಿನ ವೈ. ಮಲ್ಲಾಪುರ ಗ್ರಾಮದ ಮಹೇಶ್ವರಪ್ಪ ಎಂಬ ರೈತರು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲಆಯಾಮಗಳಲ್ಲಿಆರೋಪಿ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.