ಸ್ಟೈಲ್

Contributed byshubha.hegde@timesgroup.com|Vijaya Karnataka

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಇತ್ತೀಚೆಗೆ ಧರಿಸಿದ್ದ ತಿಳಿ ಗುಲಾಬಿ ಬಣ್ಣದ ಸೀರೆ ಎಲ್ಲರ ಗಮನ ಸೆಳೆದಿದೆ. ಆರ್ಗನ್ಜಾ ಪ್ಯಾಚ್‌ವರ್ಕ್ ಸೆರಗು ಹೊಂದಿದ್ದ ಈ ಸೀರೆ ರಾಯಲ್ ಲುಕ್ ನೀಡಿದೆ. ಸಾಂಪ್ರದಾಯಿಕ ಸೀರೆಗೆ ಚಿನ್ನದ ಬಣ್ಣದ ಸೀಕ್ವಿನ್‌ ಬಸ್ಟಿಯರ್‌ ಧರಿಸಿ, ಹಳೆಯ ಡೈಮಂಡ್‌ ಮತ್ತು ಮುತ್ತಿನ ಚೋಕರ್‌ ಹಾಕುವ ಮೂಲಕ ಹೊಸ ಟ್ರೆಂಡ್‌ ಸೃಷ್ಟಿಸಿದ್ದಾರೆ. ಇದು ಹಳೆಯ ಮತ್ತು ಹೊಸ ಫ್ಯಾಷನ್‌ನ ಅದ್ಭುತ ಸಂಗಮವಾಗಿದೆ.

dramatic elegance kiara advanis pink outfit and golden ensemble

ಕಿಯಾರಾ ಕ್ಯೂಟ್ ಲುಕ್

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು ಇತ್ತೀಚೆಗೆ ಉಟ್ಟಿದ್ದ ತಿಳಿ ಗುಲಾಬಿ ಬಣ್ಣದ ಸೀರೆ ಅಭಿಮಾನಿಗಳ ಮನ ಗೆದ್ದಿದೆ. ಬೇಬಿ ಪಿಂಕ್ ಬಣ್ಣದ ಬಟ್ಟೆಯು ತುಂಬಾ ಹಗುರವಾಗಿದ್ದು, ನೋಟದಲ್ಲಿರಾಯಲ್ ಫೀಲ್ ನೀಡುತ್ತದೆ. ಈ ಸೀರೆಯ ಹೈಲೈಟ್ ಎಂದರೆ ಅದರ ಆರ್ಗನ್ಜಾ ಪ್ಯಾಚ್ ವರ್ಕ್ ಸೆರಗು. ಇದರಲ್ಲಿಹೂವಿನ ಕೆತ್ತನೆ ಹಾಗೂ ವಾಸ್ತುಶಿಲ್ಪದ ವಿನ್ಯಾಸಗಳಿದ್ದು, ನೋಡುಗರಿಗೆ ಇದು ಕಲಾಕೃತಿಯಂತೆ ಕಾಣಿಸುತ್ತದೆ.

ಸಾಮಾನ್ಯ ಬ್ಲೌಸ್ ಬದಲಿಗೆ ಅವರು ಚಿನ್ನದ ಬಣ್ಣದ ಸೀಕ್ವಿನ್ ಬಸ್ಟಿಯರ್ ಧರಿಸಿದ್ದರು. ಇದು ಸಾಂಪ್ರದಾಯಿಕ ಉಡುಗೆಗೆ ಗ್ಲಾಮರಸ್ ಲುಕ್ ನೀಡಿದ್ದು, ಇದಕ್ಕೆ ಪೂರಕವಾಗಿ ಹಳೆಯ ಮಾದರಿಯ ಡೈಮಂಡ್ ಮತ್ತು ಮುತ್ತಿನ ಚೋಕರ್ ಧರಿಸುವ ಮೂಲಕ ಅವರು ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ. ಹಳೆಯ ಪರಂಪರೆ ಮತ್ತು ಇಂದಿನ ಫ್ಯಾಷನ್ ಎರಡನ್ನೂ ಸಮತೋಲನದಲ್ಲಿತೋರಿಸಿದ್ದಾರೆ ಕಿಯಾರಾ.