ಶಾರ್ಟ್ ಸಕ್ರ್ಯೂಟ್ : ಕೆಫೆಗೆ ಬೆಂಕಿ
ವಿಕ ಸುದ್ದಿಲೋಕ ಕಲಬುರಗಿ
ನಗರ ಹಳೇ ಜೇವರ್ಗಿ ರಸ್ತೆಯ ಕೆಫೆಯೊಂದಕ್ಕೆ ಭಾನುವಾರ ಮಧ್ಯಾಹ್ನ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿಯಾಗಿದೆ.
ಹಳೇ ಜೇವರ್ಗಿ ರಸ್ತೆಯ ಬರ್ಕಾಂಜಾ ಕೆಫೆಗೆ ಮಧ್ಯಾಹ್ನದ ವೇಳೆಗೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ತಗುಲಿದೆ. ಕೂಡಲೇ ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿತು. ಬೇಸಿಗೆಯ ನಡು ಬಿರು ಬಿಸಿಲಿನ ಮಧ್ಯಾಹ್ನದ ವೇಳೆ ಬೆಂಕಿ ಕೆನ್ನಾಲಿಗೆಗಳು ಏಳುತ್ತಿರುವುದು ಸುತ್ತಲಿನ ಜನರಿಗೆ ಆತಂಕ ಉಂಟು ಮಾಡಿತು. ಸಮಕ್ಕೆ ಸರಿಯಾಗಿ ಆಗಮಿಸಿದ ಅಗ್ನಿ ಶಾಮಕ ದಳ ಬೆಂಕಿ ಆರಿಸುವ ಮೂಲಕ ದೊಡ್ಡ ಅಪಾಯ ತಪ್ಪಿಸಿದೆ.
ಇರ್ಫಾನ್ ಶೇಕ್ ಎಂಬುವವರಿಗೆ ಸೇರಿದ ಕೆಫೆಯಲ್ಲಿನ ಸುಮಾರು 10 ಲಕ್ಷ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ ಎಂದು ಮೂಲಗಳು ತಿಳಿಸಿವೆ.

