ಪುಟ-2

Contributed byshubha.hegde@timesgroup.com|Vijaya Karnataka

ಬೇಸಿಗೆಯಲ್ಲಿ ನಡೆಯುವ ಮದುವೆಗಳಿಗೆ ವರನ ಉಡುಪುಗಳ ಬಗ್ಗೆ ಈ ಲೇಖನ ಮಾಹಿತಿ ನೀಡುತ್ತದೆ. ಮೆಹೆಂದಿ, ಹಳದಿ ಶಾಸ್ತ್ರ, ಮದುವೆ ಮುಹೂರ್ತ ಮತ್ತು ರಿಸೆಪ್ಷನ್ ಸಂದರ್ಭಗಳಲ್ಲಿ ಧರಿಸಬಹುದಾದ ಆರಾಮದಾಯಕ ಹಾಗೂ ಆಕರ್ಷಕ ಉಡುಪುಗಳ ಆಯ್ಕೆಗಳನ್ನು ವಿವರಿಸಲಾಗಿದೆ. ಹಗುರವಾದ ಬಟ್ಟೆಗಳು ಮತ್ತು ಮೃದುವಾದ ಬಣ್ಣಗಳು ಬೇಸಿಗೆಗೆ ಸೂಕ್ತವಾಗಿವೆ. ಇವು ವರನಿಗೆ ಆರಾಮ ನೀಡುವುದರ ಜೊತೆಗೆ ಸುಂದರವಾಗಿ ಕಾಣುವಂತೆ ಮಾಡುತ್ತವೆ.

summer wedding grooms attire style and accessories

ಬೇಸಿಗೆ ಮದುವೆಗೆ ವರನ ಅಲಂಕಾರ

ಬಾಲಾಜಿ

ಇಂಟ್ರೊ: ಬೇಸಿಗೆಯ ವಾತಾವರಣಕ್ಕೆ ಪೂರಕವಾಗುವ ಹಾಗೂ ಮದುಮಗನ ಸರಳ, ಸುಂದರ ಲುಕ್ .

ಸ್ಲಗ್ : ಮೆನ್ಸ್ ಫ್ಯಾಷನ್

ಬೇಸಿಗೆಯ ಮದುವೆಗಳು ವಿಶಿಷ್ಟ ಸೊಬಗನ್ನು ಹೊಂದಿರುತ್ತವೆ. ಸುವರ್ಣ ಕಿರಣಗಳಿಂದ ಕಂಗೊಳಿಸುವ ಸೂರ್ಯಾಸ್ತ, ತಂಪಾದ ಗಾಳಿಯ ನಡುವಿನ ಹೊರಾಂಗಣ ಮಂಟಪಗಳು ಮದುವೆಗೆ ವಿಶೇಷ ಮೆರುಗು ನೀಡುತ್ತವೆ. ಆದರೆ ಸುಡುವ ಬಿಸಿಲಿನಲ್ಲಿಭಾರವಾದ ಶೇರ್ವಾನಿ ಧರಿಸಿ ಬೆವರುವುದು ವರನಿಗೂ ಇಷ್ಟವಿರುವುದಿಲ್ಲ. ಆದ್ದರಿಂದ ಈ ಬೇಸಿಗೆಯ ಮದುವೆ ಸಮಾರಂಭಕ್ಕೆ ವರನ ಉಡುಪು ಹೇಗೆ ಆಕರ್ಷಕ ಹಾಗೂ ಆರಾಮ ನೀಡುವಂತಿರಬೇಕು ಎಂಬ ವಿವರ ಇಲ್ಲಿದೆ.

ಮೆಹೆಂದಿ ಸಂಭ್ರಮ: ಮೆಹೆಂದಿ ಕಾರ್ಯಕ್ರಮವು ವರನಿಗೆ ತನ್ನ ಆರಾಮದಾಯಕ ಶೈಲಿಯನ್ನು ಪ್ರದರ್ಶಿಸಲು ಇರುವ ಅತ್ಯುತ್ತಮ ಅವಕಾಶ. ಭಾರವಾದ ಕಸೂತಿ ಕೆಲಸವಿರುವ ಉಡುಪುಗಳ ಬದಲು, ಕನಿಷ್ಠ ದಾರದ ಕಸೂತಿ ಹೊಂದಿರುವ ಕಾಟನ್ ಕುರ್ತಾಗಳನ್ನು ಆರಿಸಿ.ಮಿಂಟ್ ಗ್ರೀನ್ , ಪೌಡರ್ ಬ್ಲೂಅಥವಾ ಮೃದುವಾದ ಪೀಚ್ ಬಣ್ಣದ ಲಿನನ್ ಬಂದ್ ಗಲಾಗಳು ಬೇಸಿಗೆಗೆ ಅತ್ಯಂತ ಸೂಕ್ತ. ಇದಕ್ಕೆ ಪೂರಕವಾಗಿ ಟ್ಯಾನ್ ಲೆದರ್ ಬಣ್ಣದ ಕೊಲ್ಹಾಪುರಿ ಚಪ್ಪಲಿ ಅಥವಾ ಜುಟ್ಟಿಗಳನ್ನು ಧರಿಸಿದರೆ ನಿಮ್ಮ ಲುಕ್ ಪರಿಪೂರ್ಣವಾಗುತ್ತದೆ.

ಹಳದಿ ಶಾಸ್ತ್ರ: ಹಳದಿ ಶಾಸ್ತ್ರವು ಗದ್ದಲ ಹಾಗೂ ಮೋಜಿನಿಂದ ಕೂಡಿರುವುದರಿಂದ ಉಡುಪು ಸರಳವಾಗಿರಲಿ. ಸಾಸಿವೆ ಹಳದಿ ಅಥವಾ ಐವರಿ ಬಣ್ಣದ ಕಾಟನ್ ಕುರ್ತಾ-ಪೈಜಾಮಾದ ಜೊತೆಗೆ ಸ್ಲೀವ್ ಲೆಸ್ ನೆಹರು ಜಾಕೆಟ್ ಧರಿಸುವುದು ಈಗಿನ ಟ್ರೆಂಡ್ .

ಮದುವೆಯ ಮುಹೂರ್ತ: ಐವರಿ, ಕ್ರೀಮ್ ಅಥವಾ ಪೇಸ್ಟಲ್ ಬಣ್ಣದ ಸಿಲ್ಕ…-ಬ್ಲೆಂಡ್ ಅಥವಾ ಚಿಕನ್ ಕಾರಿ ಶೇರ್ವಾನಿಗಳು ಅತ್ಯುತ್ತಮ ಆಯ್ಕೆ. ನಿಮಗೆ ಇನ್ನೂ ಭವ್ಯವಾದ ನೋಟ ಬೇಕೆಂದರೆ ಕಡಿಮೆ ಪದರಗಳಿರುವ ಹಗುರವಾದ ಬ್ರೋಕೇಡ್ ಶೇರ್ವಾನಿಯನ್ನು ಆರಿಸಿಕೊಳ್ಳಿ. ಇದು ತಂಪಾದ ಅನುಭವ ನೀಡುತ್ತದೆ.

ರಿಸೆಪ್ಷನ್ : ಮದುವೆಯ ನಾನಾ ಹಂತಗಳ ಸಾಂಪ್ರದಾಯಿಕ ಉಡುಪಿನಿಂದ ಹೊರಬಂದು ಆಧುನಿಕ ಶೈಲಿಯನ್ನು ಅಳವಡಿಸಿಕೊಳ್ಳುವ ಸಮಯ. ಸ್ಕೈ ಬ್ಲೂ, ಬೇಜ್ ಅಥವಾ ಕ್ಲಾಸಿಕ್ ಗ್ರೇ ಬಣ್ಣದ ಲಿನನ್ ಅಥವಾ ಹಗುರವಾದ ವೂಲ್ ಸೂಟ್ ಗಳು ಬೇಸಿಗೆಯ ಸಂಜೆಗೆ ಹೇಳಿಮಾಡಿಸಿದಂತಿರುತ್ತವೆ. ಕಪ್ಪು ಟ್ರೌಸರ್ ಜೊತೆಗೆ ಪೇಸ್ಟಲ್ ಬಣ್ಣದ ಟಕ್ಸಿಡೋ ಜಾಕೆಟ್ ಧರಿಸುವುದು ಈಗಿನ ಫ್ಯಾಷನ್ ಜಗತ್ತಿನ ಹಾಟ್ ಫೇವರಿಟ್ .

ಒಟ್ಟಾರೆ ಬೇಸಿಗೆ ಮದುವೆಗಳಲ್ಲಿಹಗುರವಾದ ಬಟ್ಟೆ, ಮೃದುವಾದ ಬಣ್ಣಗಳು ಮತ್ತು ಕನಿಷ್ಠ ಪದರಗಳ ಆಯ್ಕೆಯು ವರನನ್ನು ಆಕರ್ಷಕವಾಗಿ ಕಾಣುವಂತೆ ಮಾಡುವುದಲ್ಲದೆ, ಮದುವೆಯ ಸಂಭ್ರಮವನ್ನು ಪೂರ್ಣವಾಗಿ ಆನಂದಿಸಲು ನೆರವಾಗುತ್ತದೆ.