‘ಎರೆಯ’ ಟು ಇಮ್ಮಡಿ ಪುಲಿಕೇಶಿ
ಇಂಟ್ರೊ
ಕನ್ನಡ ನೆಲದ ಅದ್ವಿತೀಯ ಅರಸ, ಚಾಣಾಕ್ಷ ಆಡಳಿತಗಾರ, ಚತುರ ಚಕ್ರವರ್ತಿ ಇಮ್ಮಡಿ ಪುಲಿಕೇಶಿಯ ಕಥೆಯನ್ನು ಸಿನಿಮಾ ಮಾಡಬೇಕೆಂದು ದಕ್ಷಿಣ ಭಾರತದ ಅನೇಕ ಬಿಗ್ ಸ್ಟಾರ್ ಗಳು, ನಿರ್ದೇಶಕರು ಪ್ರಯತ್ನಿಸುತ್ತಿದ್ದಾರೆ. ಇದರ ನಡುವೆಯೇ ಕನ್ನಡ ನಿರ್ದೇಶಕ ಕೆ.ಎಂ. ಚೈತನ್ಯ ಈ ಸಿನಿಮಾ ಅನೌನ್ಸ್ ಮಾಡಿದ್ದಾರೆ.
ಕಿರಣ್ ಚಂದ್ರ
ಇಮ್ಮಡಿ ಪುಲಿಕೇಶಿಯ ಹುಟ್ಟು ಹೆಸರು ‘ಎರೆಯ’. ಇದನ್ನೇ ಈಗ ನಿರ್ದೇಶಕ ಕೆ.ಎಂ. ಚೈತನ್ಯ ತಮ್ಮ ಸಿನಿಮಾ ಟೈಟಲ್ ಮಾಡಿದ್ದಾರೆ. ಪುಲಿಕೇಶಿಯ ಗತವೈಭವವನ್ನು ಅದ್ಭುತ ಸೆಟ್ ವರ್ಕ್ ಹಾಗೂ ಗ್ರಾಫಿಕ್ಸ್ ತಂತ್ರಜ್ಞಾನದೊಂದಿಗೆ ತೆರೆಯ ಮೇಲೆ ಕಟ್ಟಿಕೊಡಲು ಹೊರಟಿರುವ ಅವರಿಗೆ ಈ ಸಿನಿಮಾ ಒಂದು ತಪಸ್ಸಿನಂತಾಗಿದೆ.
ಸಂಶೋಧನಾತ್ಮಕ ಕಥೆ
ಈ ಬಗ್ಗೆ ಲವಲವಿಕೆಯೊಂದಿಗೆ ಮಾತನಾಡಿರುವ ನಿರ್ದೇಶಕ ಕೆ.ಎಂ. ಚೈತನ್ಯ, ‘ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್ ನಲ್ಲಿನ್ಯೂಕ್ಲಿಯರ್ ಸೈಟಿಂಸ್ಟ್ ಆಗಿರುವ ಡಾ. ಭೂಷಣ್ ಶಾನ್ ಭಾಗ್ ರಿಗೆ ಇತಿಹಾಸದ ಮೇಲಿನ ಅಪಾರ ಆಸಕ್ತಿ. ಭಾರತ ಕಂಡ ಶ್ರೇಷ್ಠ ರಾಜ ಇಮ್ಮಡಿ ಪುಲಿಕೇಶಿ ಬಗ್ಗೆ ಅವರು ಕಳೆದ ಐದು ವರ್ಷಗಳಲ್ಲಿಸಾಕಷ್ಟು ಸಂಶೋಧನೆ ನಡೆಸಿದ್ದಾರೆ. ಹಲವಾರು ಮೂಲಗಳಿಂದ ಮಾಹಿತಿಗಳನ್ನು ಕಲೆ ಹಾಕಿ, ಸಂಶೋಧನೆ ನಡೆಸಿ ಪುಸ್ತಕ ಬರೆದಿದ್ದಾರೆ. ಆ ಕೃತಿ ಪ್ರಕಟವಾಗುವ ಮುನ್ನವೇ ಅದನ್ನು ಖರೀದಿಸಿ ಈ ಸಿನಿಮಾ ಚಿತ್ರಕಥೆಗೆ ಅಳವಡಿಸಿಕೊಳ್ಳಲಾಗುತ್ತಿದೆ’ ಎಂದಿದ್ದಾರೆ.
ಬಿಗ್ ಸಿನಿಮಾ
‘ಇಮ್ಮಡಿ ಪುಲಕೇಶಿಯ ಕಥೆ ಭಾರತದ ಇತರ ರಾಜರಿಗಿಂತ ಭಿನ್ನವಾದದ್ದು. ಆತನ ಮಿಲಿಟರಿ ತಂತ್ರಗಾರಿಕೆ, ವ್ಯಾಪಾರ ನೀತಿ, ಶಿಲ್ಪಕಲೆಗೆ ನೀಡಿದ ಪ್ರೋತ್ಸಾಹ ಇತ್ಯಾದಿ ಈ ಸಿನಿಮಾದಲ್ಲಿಇರಲಿದೆ. ಸಣ್ಣ ಬಜೆಟ್ ನಲ್ಲಿಮಾಡಲಾಗದ ಈ ಸಿನಿಮಾದ ಕಥೆ ಎಷ್ಟು ದೊಡ್ಡದಾಗಿದೆ ಎಂದರೆ ವೆಬ್ ಸಿರೀಸ್ ಮಾಡಬಹುದಿತ್ತು. ಆದರೆ ಅದನ್ನು ಚಿತ್ರವಾಗಿ ದೊಡ್ಡ ಪರದೆಯಲ್ಲಿನೋಡಲು ಚೆನ್ನಾಗಿರುತ್ತದೆ ಎನ್ನುವುದು ನಮ್ಮ ಯೋಚನೆ. ಸದ್ಯಕ್ಕೆ ಇದರ ಸ್ಕ್ರೀನ್ ಪ್ಲೇ ಮುಕ್ತಾಯದ ಹಂತದಲ್ಲಿದ್ದು, ಇನ್ನು ಮೂರು ತಿಂಗಳಲ್ಲಿಪ್ರಿಪ್ರೊಡಕ್ಷನ್ ಆರಂಭವಾಗಲಿದೆ’ ಎಂದು ನಿರ್ದೇಶಕರು ಹೇಳಿದ್ದಾರೆ.
ಅಚ್ಚ ಕನ್ನಡದ ಚಕ್ರವರ್ತಿ
ಈ ಚಿತ್ರಕ್ಕೆ ಒಂದೇ ಲೀಡ್ ಪಾತ್ರ ಎಂದೇನಿಲ್ಲ, ಬದಲಾಗಿ ಸಾಕಷ್ಟು ಪ್ರಮುಖ ಪಾತ್ರಗಳಿವೆ ಎಂದು ವಿವರಿಸಿರುವ ಕೆ.ಎಂ. ಚೈತನ್ಯ, ‘ಈ ಸಿನಿಮಾ ನೋಡಿದರೆ ಇಮ್ಮಡಿ ಪುಲಕೇಶಿಯ ಒಟ್ಟು ಚಿತ್ರಣ ಸಿಗುತ್ತದೆ. ಇಂಥ ಕಥೆಯನ್ನು ಒಂದು ಸಿನಿಮಾವಾಗಿ ಹೇಳುವುದು ಚಾಲೆಂಜಿಂಗ್ . ಆದರೆ ಮಹಾತ್ಮ ಗಾಂಧಿಯ ಕಥೆಯನ್ನು ರಿಚರ್ಡ್ ಅಟೆನ್ ಬರೋ ಒಂದೇ ಸಿನಿಮಾದಲ್ಲಿತೋರಿಸಿದರು, ತುಘಲಕ್ ನ ಕಥೆಯನ್ನು ಗಿರೀಶ್ ಕಾರ್ನಾಡ್ ಒಂದೇ ನಾಟಕದಲ್ಲಿಕಟ್ಟಿಕೊಟ್ಟರು. ಆದೊಂದು ಬರವಣಿಗೆ ಕಲೆ. ಈಗ ಕನ್ನಡದ ಚಕ್ರವರ್ತಿಯ ಕಥೆಯನ್ನು ಜಗತ್ತಿಗೆ ನಾನಾ ಭಾಷೆಗಳಲ್ಲಿತೋರಿಸಬೇಕು ಎನ್ನುವುದು ನಮ್ಮ ಆಶಯ. 3ಡಿ ಅಥವಾ 2ಡಿ ವರ್ಷನ್ ನಲ್ಲಿತೋರಿಸಬೇಕೇ ಎಂಬ ಬಗ್ಗೆ ಇನ್ನೂ ಅಂತಿಮವಾಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ವಿಶೇಷ ತಂತ್ರಜ್ಞಾನ
‘ರಾಜ್ ಕುಮಾರ್ ನಟನೆಯ ಎಷ್ಟೋ ಸಿನಿಮಾಗಳಿಗೆ ಈಗಿರುವ ಟೆಕ್ನಾಲಜಿ ಸಿಕ್ಕಿಲ್ಲ. ಸಿಕ್ಕಿದ್ದರೆ ಆ ಸಿನಿಮಾಗಳ ಸೊಬಗೇ ಬೇರೆ ಇರುತ್ತಿತ್ತು. ಈಗ ತಂತ್ರಜ್ಞಾನ ಸಿಗುತ್ತಿದ್ದು, ಅದನ್ನು ಬಳಸಲು ನಮಗೆ ಅವಕಾಶವಿದೆ. ಈ ಸಿನಿಮಾಗೆ ಒಬ್ಬ ಪ್ರಖ್ಯಾತ ಪ್ರೊಡಕ್ಷನ್ ಡಿಸೈನರ್ ನಮ್ಮ ಜತೆ ಕೈ ಜೋಡಿಸಲಿದ್ದಾರೆ. ಇದರ ಕಾಸ್ಟ್ಯೂಮ್ , ಮೇಕಪ್ , ಸೆಟ್ ಮುಂತಾದ ಪ್ರತಿ ವಿಭಾಗದಲ್ಲಿಸಂಶೋಧಕರು ಇರುತ್ತಾರೆ. 6ನೇ ಶತಮಾನದ ಈ ಕಥೆಯನ್ನು ಯಾವುದೇ ಲೋಪಗಳಿಲ್ಲದೆ ತೆರೆಗಿಡುವ ಯೋಜನೆ ನಡೆಯುತ್ತಿದೆ’ ಎಂದು ತಿಳಿಸಿದ್ದಾರೆ ನಿರ್ದೇಶಕ ಕೆ.ಎಂ. ಚೈತನ್ಯ.
ಕೋಟ್
ಮುಂಬರುವ ಎರಡ್ಮೂರು ತಿಂಗಳಲ್ಲಿಇಮ್ಮಡಿ ಪುಲಿಕೇಶಿಯ ಪಾತ್ರದಲ್ಲಿಯಾರು ನಟಿಸುತ್ತಾರೆ ಎನ್ನುವುದು ರಿವೀಲ್ ಆಗಲಿದೆ. ಡಿಸೆಂಬರ್ ನಲ್ಲಿಇದರ ಶೂಟಿಂಗ್ ಶುರು ಮಾಡುವ ಯೋಚನೆ ಇದೆ. ಈ ತಂತ್ರಜ್ಞಾನದಂತೆ ಮೊದಲೇ ಗ್ರಾಫಿಕ್ಸ್ ಸಿದ್ಧಪಡಿಸಿ ಶೂಟಿಂಗ್ ಆರಂಭಿಸುವ ಪ್ಲ್ಯಾನ್ ಇದೆ.
ಕೆ.ಎಂ. ಚೈತನ್ಯ | ನಿರ್ದೇಶಕ

