ಮಹಿಳಾ ಸ್ವಾವಲಂಬನೆ ಅತ್ಯಗತ್ಯ
ವಿಕ ಸುದ್ದಿಲೋಕ ಚಿಕ್ಕಮಗಳೂರು
ಮಹಿಳೆಯರ ಆರ್ಥಿಕ ಸ್ವಾವಲಂಬನೆ ಅತ್ಯಗತ್ಯ ಎಂದು ಮೂಡಿಗೆರೆ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಸವಿತಾ ರಮೇಶ್ ಅಭಿಪ್ರಾಯಪಟ್ಟರು.
ನಗರದ ಲಯನ್ಸ್ ಭವನದಲ್ಲಿಲೇಡಿಸ್ ಕ್ಲಬ್ ಇತ್ತೀಚೆಗೆ ಆಯೋಜಿಸಿದ್ದ ಮೂರನೇ ವಾಷಿಕೋತ್ಸವ ಹಾಗೂ ಮಹಿಳಾ ದಿನಾಚರಣೆ ಕಾರ ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಸುಶಿಕ್ಷಿತರಾಗಿ ಆರ್ಥಿಕ ಸ್ವಾವಲಂಬನೆಯತ್ತ ಗಮನಹರಿಸಬೇಕು ಎಂದರು.
ವೇದ ಕಾಲದಲ್ಲಿಸ್ತ್ರೀಯನ್ನು ಪೂಜ್ಯ ಭಾವನೆಯಿಂದ ಕಾಣಲಾಗುತ್ತಿತ್ತು. ಮಧ್ಯಯುಗದಲ್ಲಿಮಹಿಳೆ ಸ್ವಾತಂತ್ರ್ಯಕ್ಕೆ ಅರ್ಹಳಲ್ಲಎಂದು ಬಿಂಬಿಸಲಾಯಿತು. ಆಧುನಿಕತೆಯ ಬದಲಾವಣೆಯ ಗಾಳಿ ಬೀಸಿ ಮಹಿಳೆ ಇಂದು ಎಲ್ಲಕ್ಷೇತ್ರಗಳಲ್ಲೂತನ್ನ ಛಾಪು ಮೂಡಿಸಿದ್ದಾಳೆ ಎಂದರು.
ಗಂಡು-ಹೆಣ್ಣು ಎಂಬ ತಾರತಮ್ಯ ಮಾಡದೆ ಮಕ್ಕಳನ್ನು ಬೆಳೆಸಿದರೆ ಅವರ ಭವಿಷ್ಯ ಉತ್ತಮವಾಗಿರುತ್ತದೆ. ಮಹಿಳೆಯರಿಗೆ ಸ್ವಾತಂತ್ರ ಮತ್ತು ಸಮಾನತೆ ಸಿಗುತ್ತಿಲ್ಲ. ಶೇ.33 ಮೀಸಲು ದೊರೆತರೂ ಸರಿಯಾದ ತರಬೇತಿ ಇಲ್ಲ. ವಿದ್ಯೆಗೆ ಪ್ರಾಧಾನ್ಯತೆ ಸಿಗಬೇಕಾಗಿದೆ. ಮಹಿಳೆಯರೇ ಕಟ್ಟಿರುವ ಲೇಡಿಸ್ ಕ್ಲಬ್ ಅನೇಕ ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದ್ದು ಮುಂದಿನ ದಿನಗಳಲ್ಲಿಇನ್ನಷ್ಟು ಯಶಸ್ಸು ಪಡೆಯಲಿ ಎಂದು ಹಾರೈಸಿದರು.
ಲೇಡಿಸ್ ಕ್ಲಬ್ ಅಧ್ಯಕ್ಷೆ ಯಶೋಧ ಶಿವಪ್ಪ ಮಾತನಾಡಿ, ಯಾವುದೇ ಒಳ್ಳೆಯ ಕೆಲಸ ಮಾಡುವ ಮೊದಲು ಸಂಕಲ್ಪ ದೃಢವಾಗಿರಬೇಕು ಮತ್ತು ಅದು ಪಾರದರ್ಶಕವಾಗಿರಬೇಕು. ನಾವು ಮಾಡುವ ಅಳಿಲು ಸೇವೆ ಇನ್ನೊಬ್ಬರ ಮನಸ್ಸು ತಟ್ಟುವಂತಿರಬೇಕು. ಈ ಕಾರ್ಯ ಒಬ್ಬರಿಂದ ಅಸಾಧ್ಯ, ಎಲ್ಲರೂ ಕೈಜೋಡಿಸಿದಾಗ ವಿಶೇಷ ಸಾಧನೆ ಸಾಧ್ಯ ಎಂದು ಹೇಳಿದರು.
ನಾದಚೈತನ್ಯ ಸಾಂಸ್ಕೃತಿಕ ಯುವ ಕಲಾ ವೇದಿಕೆಯ ಕಾರ ್ಯದರ್ಶಿ ರೇಖಾ ಪ್ರೇಂಕುಮಾರ್ ಮಾತನಾಡಿ, ‘ನಾರಿತ್ವದಿಂದ ನಾರಾಯಣತ್ವದೆಡೆಗೆ’ ಸಾಗುವುದರಲ್ಲಿಸಾರ್ಥಕತೆ ಇದೆ. ಕುಟುಂಬ ನಿರ್ವಹಣೆಯಷ್ಟೇ ಅಲ್ಲ, ಸಮಾಜ ನಿರ್ಮಾಣದಲ್ಲೂಸ್ತ್ರೀ ಪಾತ್ರ ದೊಡ್ಡದಿದೆ. ಮಹಿಳಾ ದಿನಾಚರಣೆಯನ್ನು ನಾವೇ ಆಚರಿಸಿ ಸಂಭ್ರಮಿಸುವಂತದ್ದಲ್ಲ, ಪುರುಷರೂ ಆಚರಿಸಿ ಅದರಂತೆ ನಡೆದುಕೊಂಡಾಗ ಅರ್ಥಪೂರ್ಣವಾಗುತ್ತದೆ ಎಂದರು.
ರಾಷ್ಟ್ರೀಯ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪುರಸ್ಕೃತರಾದ ಯಲಗುಡಿಗೆ ಶಿಕ್ಷಕಿ ಗೀತಾ ರಾಜವತ್ , ದಾನಿಗಳಾದ ಸುಲೋಚನಮ್ಮ ಶ್ರೀನಿವಾಸ್ ಮತ್ತು ಸುಜಾತ ಗುರುಮೂರ್ತಿ, ಗಾಯಕಿ ರೇಖಾ ಮತ್ತು ಪಿಎನ್ ಬಿ ಉಪಸಂಪಾದಕಿ ಸುಮಿತ್ರಾ ಶಾಸ್ತ್ರಿ ಅವರನ್ನು ಗೌರವಿಸಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ಕುಮಾರ್ , ಟ್ರಸ್ಟಿ ಸುರೇಶ್ , ಪ್ರಾಂತೀಯ ಅಧ್ಯಕ್ಷ ವೆಂಕಟೇಶ್ , ಲೇಡಿಸ್ ಕ್ಲಬ್ ಕಾರ ್ಯದರ್ಶಿ ರುಕ್ಮಿಣಿ ರವೀಂದ್ರನಾಥ್ , ಭಾರತಿ ಈಶ್ವರ್ , ದಾಕ್ಷಾಯಣಿ, ನಾಗರತ್ನ, ಸರಳಾ ಶ್ರೀಧರ್ , ಸುಪ್ರಭ, ವಿಜಯ ಕೇಶವಮೂರ್ತಿ, ಸುಲೋಚನಾ ಮೋಹನ್ ಹಾಗೂ ಇತರರಿದ್ದರು.
12ರುದ್ರಯ್ಯ-ಪಿ1
ಚಿಕ್ಕಮಗಳೂರಿನ ಲಯನ್ಸ್ ಭವನದಲ್ಲಿಲೇಡಿಸ್ ಕ್ಲಬ್ ಆಯೋಜಿಸಿದ್ದ ಕಾರ್ಯಕ್ರಮವನ್ನು ಸವಿತಾ ರಮೇಶ್ ಉದ್ಘಾಟಿಸಿದರು.

