**(ಸ್ಟೋರಿ) ಗ್ಯಾಸ್ ಪೂರೈಕೆಯಿಲ್ಲದೆ ಆಟೋ ಸ್ತಬ್ಧ ಬಹುತೇಕ ಎಲ್ಲಬಂಕ್ ಗಳು ಬಂದ್ * ಎಲ್ ಪಿಜಿ ದರವೂ ಶೇ.50ರಷ್ಟು ಹೆಚ್ಚಳ

Contributed byvijaya.poojary@timesgroup.com|Vijaya Karnataka
50

ವಿಜಯ್ ಕೋಟ್ಯಾನ್ ಮಂಗಳೂರು

vಜ್ಜಿaya.pಟಟ್ಜa್ಟyಃಠಿಜಿಞಛಿsಟ್ಛಜ್ಞಿdಜಿa.್ಚಟಞa

ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಗ್ಯಾಸ್ ಪೂರೈಕೆಯಲ್ಲಿಉಂಟಾದ ವ್ಯತ್ಯಯ ಮತ್ತಷ್ಟು ಬಿಗಡಾಯಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಸೇರಿದಂತೆ ರಾಜ್ಯಾದ್ಯಂತ ಆಟೋ ಗ್ಯಾಸ್ ಸಮಸ್ಯೆ ಉಲ್ಬಣಗೊಂಡಿದೆ. ಇದರಿಂದ 1 ಲಕ್ಷಕ್ಕೂ ಅಧಿಕ ಆಟೋ ರಿಕ್ಷಾಗಳು ಪ್ರತಿನಿತ್ಯ ಗ್ಯಾಸ್ ಸಮಸ್ಯೆಯಿಂದ ಪ್ರಯಾಣ ಮೊಟಕುಗೊಳಿಸುತ್ತಿವೆ.

ಬೆಂಗಳೂರು, ಮಂಗಳೂರು, ಮೈಸೂರು, ಹಾಸನ ಸೇರಿದಂತೆ ಗ್ಯಾಸ್ ಸಿಲಿಂಡರ್ ಕೊರತೆ ಎದುರಾಗಿದೆ. ರಾಜ್ಯದಲ್ಲಿಆಟೋರಿಕ್ಷಾಗಳಲ್ಲಿಪ್ರಮುಖ ಇಂಧನ ಎಲ್ ಪಿಜಿ ಆಗಿದ್ದು, 3 ಲಕ್ಷಕ್ಕೂ ಅಧಿಕ ರಿಕ್ಷಾಗಳು ಇದನ್ನೇ ಅವಲಂಬಿಸಿವೆ. ಬೆಂಗಳೂರು ನಗರವೊಂದರಲ್ಲೇ 1.50 ಲಕ್ಷ ಎಲ್ ಪಿಜಿ ಆಟೋಗಳಿವೆ. ರಾಜ್ಯದ ಶೇ.65ರಷ್ಟು ಎಲ್ ಪಿಜಿ ಪೂರೈಕೆಯನ್ನು ಖಾಸಗಿ ಕಂಪನಿಗಳು ಮಾಡುತ್ತಿದ್ದು, ರಾಜ್ಯಾದ್ಯಂತ ಅನೇಕ ಖಾಸಗಿ ಬಂಕ್ ಗಳು ಮುಚ್ಚಿವೆ. ಕೆಲವೊಂದು ರಿಕ್ಷಾಗಳಲ್ಲಿಪೆಟ್ರೋಲ್ ಮೂಲಕ ಓಡಾಡಲು ಅವಕಾಶವಿದ್ದ ಕಾರಣ ಆ ರಿಕ್ಷಾಗಳು ಪೆಟ್ರೋಲ್ ಬಳಕೆ ಮಾಡುತ್ತಿವೆ.

ಮಂಗಳೂರು ನಗರದಲ್ಲಿ15ಕ್ಕೂ ಅಧಿಕ ಬಂಕ್ ಗಳಲ್ಲಿಅಟೋ ಗ್ಯಾಸ್ ಪೂರೈಕೆಯಿದ್ದರೂ ಯುದ್ಧದ ಸಮಸ್ಯೆ ಬಳಿಕ ದಿನವೊಂದಕ್ಕೆ 3-5 ಬಂಕ್ ಗಳಿಗೆ ಮಾತ್ರ ಗ್ಯಾಸ್ ಪೂರೈಕೆಯಾಗುತ್ತಿತ್ತು. ಅದರಲ್ಲೂಕಳೆದೆರಡು ದಿನಗಳಿಂದ 1-2 ಬಂಕ್ ಗಳಿಗೆ ಮಾತ್ರ ಗ್ಯಾಸ್ ಪೂರೈಕೆಯಾಗುತ್ತಿದ್ದು, ಆಟೋ ಎಲ್ ಪಿಜಿ ಹೊಂದಿದ ಚಾಲಕರು ಭಾರಿ ತೊಂದರೆ ಅನುಭವಿಸುತ್ತಿದ್ದಾರೆ.

ವಾಟ್ಸ್ಯಾಪ್ ಮೆಸೇಜ್ ನೋಡಿ ಹೋಗಬೇಕು

ರಿಕ್ಷಾ ಚಾಲಕರೆಂದರೆ ಎಲ್ಲರಿಗೂ ತಾತ್ಸಾರವಾಗಿದೆ. ನಮ್ಮ ಪರಿಸ್ಥಿತಿ ಯಾರೂ ಕೇಳೋರೇ ಇಲ್ಲ. ಪ್ರತಿನಿತ್ಯ ಯಾವ ಪೆಟ್ರೋಲ್ ಬಂಕ್ ನಲ್ಲಿಎಲ್ ಪಿಜಿ ಸಿಗುತ್ತದೆ ಎಂದು ವಾಟ್ಸ್ಯಾಪ್ ಮೆಸೇಜ್ ನೋಡಿ ನಾವು ಕಿಲೋ ಮೀಟರ್ ಗಟ್ಟಲೆ ಸಂಚರಿಸಬೇಕು. ಅದಾಗಲೇ ಅಲ್ಲಿರಿಕ್ಷಾಗಳು ಸರತಿ ಸಾಲಿನಲ್ಲಿನಿಂತು ಕಾಯುತ್ತವೆ. ಪ್ರತಿ ರಿಕ್ಷಾ ಮಾಲೀಕರು ಕನಿಷ್ಠ 1ರಿಂದ 2 ಗಂಟೆ ಸರತಿ ಸಾಲಿನಲ್ಲಿನಿಂತು ಆಟೋ ಗ್ಯಾಸ್ ಪಡೆದುಕೊಳ್ಳುವ ದುಸ್ಥಿತಿಗೆ ತಲುಪಿದ್ದೇವೆ ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆ ಆಟೋರಿಕ್ಷಾ ಯುನಿಯನ್ ನ ಅರುಣ್ ಕುಮಾರ್ .

ನಮಗೂ ಕುಟುಂಬವಿದೆ, ಪ್ರತಿನಿತ್ಯ 200-250 ರೂ. ಮನೆಯ ಖರ್ಚು ವೆಚ್ಚಗಳಿವೆ. ಇನ್ನು ಕೆಲವೇ ದಿನಗಳಲ್ಲಿಮಕ್ಕಳ ಶಾಲಾ ಫೀಸ್ , ಪುಸ್ತಕ, ಡೊನೇಷನ್ ಕಟ್ಟಬೇಕಾಗಿದೆ. ರಿಕ್ಷಾ ಚಾಲಕರಿಗೆ ಸರಿಯಾದ ಬಾಡಿಗೆಯಿಲ್ಲದಿದ್ದರೆ ನಾವು ಹೇಗೆ ದಿನ ಕಳೆಯಬೇಕು, ಮಕ್ಕಳಿಗೆ ಶಿಕ್ಷಣ ಕೊಡಬೇಕು? ಎಂದು ಅರುಣ್ ರಿಕ್ಷಾ ಚಾಲಕರ ಕುಟುಂಬದ ನೋವನ್ನು ತೋಡಿಕೊಂಡಿದ್ದಾರೆ.

ದರ ಶೇ.50ರಷ್ಟು ಹೆಚ್ಚಳ

ಆಟೋ ಎಲ್ ಪಿಜಿ ದರ ಕೆಜಿಗೆ 66 ಇತ್ತು. ಆದರೆ ಎಲ್ ಪಿಜಿ ಗ್ಯಾಸ್ ಕೊರತೆಯಾದ ಬಳಿಕ ದರ 94.90 ರೂ.ಗೆ ಏರಿಕೆಯಾಗಿದ್ದು, ಚಾಲಕರು ಅನಿವಾರ್ಯವಾಗಿ ಹೆಚ್ಚಿನ ಬೆಲೆ ತೆತ್ತು ಗ್ಯಾಸ್ ಖರೀದಿಸಬೇಕಾಗಿದೆ. ಬೆಂಗಳೂರಿನಲ್ಲಿಎಲ್ ಪಿಜಿ ದರ ಶತಕ ದಾಟಿದೆ ಎನ್ನುತ್ತಾರೆ ಮಂಗಳೂರಿನ ರಿಕ್ಷಾ ಚಾಲಕ ಯೋಗೀಶ್ ಕುಮಾರ್ ಪಾಲ್ದಾನೆ.

ಕೋಟ್

ಆಟೋ ಗ್ಯಾಸ್ ಸಮಸ್ಯೆಯಿಂದ ಮಂಗಳೂರು ನಗರದಲ್ಲೇ 1,500ಕ್ಕೂ ಅಧಿಕ ಆಟೋ ರಿಕ್ಷಾಗಳು ಪ್ರಯಾಣ ಮೊಟಕುಗೊಳಿಸಿವೆ. ನಮಗೂ ಕುಟುಂಬವಿದೆ, ನಮ್ಮ ಸಮಸ್ಯೆಯನ್ನು ಕೇಳೋರಿಲ್ಲ. ಎಲ್ ಪಿಜಿ ದರವೂ ಕೆಜಿಗೆ 64ರಿಂದ 94.90 ರೂ.ಗೇರಿದೆ. ಹೀಗಾದರೆ ನಾವು ಬದುಕುವುದು ಹೇಗೆ?

-ಅರುಣ್ ಕುಮಾರ್ , ರಿಕ್ಷಾ ಚಾಲಕರು

ಫೊಟೋ: 13ಎಂಎನ್ ಜಿ-ಕುಂಟಿಕಾನ್

ಮಂಗಳೂರಿನ ಕುಂಟಿಕಾನ ಗ್ಯಾಸ್ ಬಂಕ್ ಸಮೀಪ ಎಲ್ ಪಿಜಿಗಾಗಿ ಸಾಲಿನಲ್ಲಿನಿಂತ ರಿಕ್ಷಾಗಳು.