ಕೊಡಂಗೆ ಮುರತ ತುಡರ್ ಶ್ರೀ ವೈದ್ಯನಾಥ ತುಳು ಭಕ್ತಿಗೀತೆ ಬಿಡುಗಡೆ

Contributed bydhanushkulal9@gmail.com|Vijaya Karnataka

ಶಕ್ತಿ ನಗರದಲ್ಲಿ 'ಸಾನಿಧ್ಯ ಸಂಭ್ರಮ ಶಕ್ತಿನಗರ - 2026' ಕಾರ್ಯಕ್ರಮದಲ್ಲಿ 'ಕೊಡಂಗೆ ಮುರತ ತುಡರ್‌ ಶ್ರೀ ವೈದ್ಯನಾಥ' ಎಂಬ ತುಳು ಭಕ್ತಿಗೀತೆ ಬಿಡುಗಡೆ ಮಾಡಲಾಯಿತು. ಈ ಗೀತೆಯನ್ನು ಖ್ಯಾತ ಗಾಯಕ ಧನಂಜಯ ವರ್ಮಾ ಹಾಡಿದ್ದಾರೆ. ಶ್ರೀ ವೈದ್ಯನಾಥ ದೈವದ ಮಹಿಮೆಯನ್ನು ಸಾರುವ ಈ ಗೀತೆ ಧನಂಜಯ್‌ ವರ್ಮ-ವಿ8ಜಿ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆಗೊಂಡಿದೆ.

kodange murath tudrar tulu devotional song released on lord vaidhyanath

ವಿಕ ಸುದ್ದಿಲೋಕ ಮಂಗಳೂರು

ಸಾನಿಧ್ಯ ವಸತಿಯುತ ಶಾಲೆ ಶಕ್ತಿನಗರ ಹಾಗೂ ಪದವು ಗ್ರಾಮ ಮತ್ತು ಶಕ್ತಿನಗರದ ನಾನಾ ಸಂಘ-ಸಂಸ್ಥೆಗಳ ಸಹಯೋಗದಲ್ಲಿಭಾನುವಾರ ನಾಲ್ಯಪದವಿನ ದ.ಕ.ಜಿ.ಪಂ. ಸರಕಾರಿ ಪ್ರೌಢಶಾಲೆಯ ಮೈದಾನದಲ್ಲಿನಡೆದ ‘ಸಾನಿಧ್ಯ ಸಂಭ್ರಮ ಶಕ್ತಿನಗರ - 2026’ ಸಾಮಾಜಿಕ ಜಾಗೃತಿ ಕಾರ್ಯಕ್ರಮದಲ್ಲಿಪದವು ಗ್ರಾಮದ ಪ್ರಧಾನ ದೈವ ಶ್ರೀ ವೈದ್ಯನಾಥ ದೈವದ ಕುರಿತಾದ ತುಳು ಭಕ್ತಿಗೀತೆ ‘ಕೊಡಂಗೆ ಮುರತ ತುಡರ್ ಶ್ರೀ ವೈದ್ಯನಾಥ’ ಅನ್ನು ನಾನಾ ಗಣ್ಯರ ಸಮ್ಮುಖದಲ್ಲಿಬಿಡುಗಡೆಗೊಳಿಸಲಾಯಿತು.

ಬಿಡುಗಡೆ ಕಾರ್ಯಕ್ರಮದಲ್ಲಿಸಾನಿಧ್ಯ ಸಂಸ್ಥೆಯ ಆಡಳಿತಾಧಿಕಾರಿ, ಅಧ್ಯಕ್ಷ ಮಹಾಬಲ ಮಾರ್ಲ, ಖಜಾಂಚಿ ಜಗದೀಶ್ ಶೆಟ್ಟಿ, ನಿರ್ದೇಶಕ ಬಿ.ಎಸ್ . ಮೊಹಮ್ಮದ್ ಬಶೀರ್ , ನಿಕಟ ಪೂರ್ವ ಕಾರ್ಪೋರೇಟರ್ ಕಿಶೋರ್ ಕೊಟ್ಟಾರಿ, ಉದ್ಯಮಿ ರವಿ ಶೆಟ್ಟಿ ಕತಾರ್ , ಸಿಎ ಸುಧೀರ್ ಶೆಟ್ಟಿ ಮುಂಬಯಿ, ಬಿಜೆಪಿಯ ಮಂಗಳೂರು ನಗರ ದಕ್ಷಿಣ ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು, ಅನುಗ್ರಹ ಫಿಲಂಸ್ ಮಾಲೀಕ ಸಂತೋಷ್ ಶೆಟ್ಟಿ ಕುಂಬ್ಳೆ, ಗಾಯಕ ಧನಂಜಯ್ ವರ್ಮ ಹಾಗೂ ಛಾಯಾಗ್ರಹಣ ನಿರ್ದೇಶಕ ಧನುಷ್ ಉಪಸ್ಥಿತರಿದ್ದರು.

ಬಾಕ್ಸ್ :

ಭಕ್ತರಲ್ಲಿಆಧ್ಯಾತ್ಮಿಕ ಭಾವನೆಗಳನ್ನು ಮೂಡಿಸುವ ಹಾಗೂ ತುಳುನಾಡಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ *ಕೊಡಂಗೆ ಮುರತ ತುಡರ್ ಶ್ರೀ ವೈದ್ಯನಾಥ* ತುಳು ಭಕ್ತಿಗೀತೆಯನ್ನು ಖ್ಯಾತ ಗಾಯಕ ಧನಂಜಯ ವರ್ಮಾ ಹಾಡಿದ್ದು, ಸಂಗೀತ ನಿರ್ದೇಶನ ಹಾಗೂ ಮಿಕ್ಸಿಂಗ್ -ಮಾಸ್ಟರಿಂಗ್ ಕಾರ್ಯವನ್ನು ಸಂದೇಶ್ ಬಾಬಣ್ಣ ನಿರ್ವಹಿಸಿದ್ದಾರೆ. ಗೀತೆಯ ಸಾಹಿತ್ಯವನ್ನು ದಯಾನಂದ ಜಿ. ಕಥಲ್ಸಾರ್ ರಚಿಸಿದ್ದಾರೆ. ಚಿತ್ರದ ನಿರ್ಮಾಣದಲ್ಲಿಸಂತೋಷ್ ಶೆಟ್ಟಿ ಕುಂಬಳೆ ಹಾಗೂ ಸುಚಿತ್ರಾ ಡಿ ವರ್ಮಾ ಕೈಜೋಡಿಸಿದ್ದು, ಗ್ರಾಮಸ್ಥರು ಸಹಕಾರದೊಂದಿಗೆ ನಿರ್ಮಾಣ ಕಾರ್ಯ ನಡೆದಿದೆ. ಛಾಯಾಗ್ರಹಣ ನಿರ್ದೇಶನ ಮತ್ತು ದೃಶ್ಯ ಸಂಯೋಜಕರಾಗಿ ಧನುಷ್ ಶಕ್ತಿನಗರ ಕಾರ್ಯ ನಿರ್ವಹಿಸಿದ್ದು, ಸಂಕಲನ ಹಾಗೂ ಪೋಸ್ಟರ್ ವಿನ್ಯಾಸವನ್ನು ಸೂರ್ಯ ಕುಲಾಲ್ ವೇಣೂರು ಮಾಡಿದ್ದಾರೆ. ಶ್ರೀ ವೈದ್ಯನಾಥ ದೈವಸ್ಥಾನದ ಸಮಿತಿಯ ಸಹಯೋಗದೊಂದಿಗೆ ಈ ಗೀತೆ ರೂಪುಗೊಂಡಿದ್ದು, ಧನಂಜಯ್ ವರ್ಮ-ವಿ8ಜಿ ಯೂಟ್ಯೂಬ್ ಚಾನಲ್ ನಲ್ಲಿಬಿಡುಗಡೆಗೊಂಡಿದೆ.

ಫೊಟೋ:

13ಎ-ಬಿಡುಗಡೆ

*ಕೊಡಂಗೆ ಮುರತ ತುಡರ್ ಶ್ರೀ ವೈದ್ಯನಾಥ* ತುಳು ಭಕ್ತಿಗೀತೆ ಬಿಡುಗಡೆಗೊಳಿಸಲಾಯಿತು.