ಡಾ.ಅಂಬೇಧಿಡ್ಕರ್ ಭಾಧಿವಧಿಚಿಧಿತ್ರಕ್ಕೆ ಪುಧಿಷ್ಪಾಧಿರ್ಚನೆ
ವಿಕ ಸುದ್ದಿಲೋಕ ಮೊಳಕಾಲ್ಮುರು
ಎಲ್ಲವರ್ಗದವರಿಗೂ ಸಮಾನವಾಗಿ ಹಕ್ಕುಗಳು ಲಭಿಸುವಂತೆ ಸಂವಿಧಾನ ರಚಿಸಿ ಇಂದಿಗೂ ಎಲ್ಲರ ಮನದಲ್ಲಿಮನೆ ಮಾಡಿರುವ ಡಾ.ಬಿ.ಆರ್ .ಅಂಬೇಡ್ಕರ್ ಕಾರ್ಯ ಶ್ಲಾಘನೀಯ ಎಂದು ಶಾಸಕ ಎನ್ .ವೈ.ಗೋಪಾಲಧಿಕೃಷ್ಣ ಧಿಹೇಧಿಳಿದರು.
ಪಟ್ಟಣದ ತಾಪಂ ಕಚೇರಿ ಆವರಣದಲ್ಲಿಮಂಗಳವಾರ ತಾಪಂ, ಪಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿಏರ್ಪಡಿಸಿದ್ದ ಡಾ.ಬಿ.ಆರ್ .ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಮ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿಮಾತನಾಡಿದರು.
ದಾಕ್ಷಿ ರಸ ಹಾಗೂ ವೈನ್ ಬೋರ್ಡ್ ಅಧ್ಯಕ್ಷ ಡಾ.ಬಿ.ಯೋಗೇಶ್ ಬಾಬು ಮಾತನಾಡಿ, ಅಂಬೇಡ್ಕರ್ ಜಯಂತಿ ಮೆರವಣಿಗೆಗೆ ಸೀಮಿತವಾಗಬಾರದು ಎಂದರು.
ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಭಾವಚಿತ್ರಗಳನ್ನು ಪಟ್ಟಣದ ಮುಖ್ಯ ರಸ್ತೆಯಲ್ಲಿಮೆರವಣಿಗೆ ನಡೆಸಲಾಯಿತು. ಹೆಚ್ಚು ಅಂಕ ಪಡೆದ ಸಮುದಾಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ತಹಸೀಲ್ದಾರ್ ಟಿ.ಜಗದೀಶ್ , ತಾಪಂ ಇಒ ಎಚ್ .ಹನುಮಂತಪ್ಪ, ಬಿಇಒ ನಿರ್ಮಲಾದೇವಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹರೀಶ್ , ಮುಖಂಡರಾದ ನಾಗರಾಜ್ , ಜಿ.ಪ್ರಕಾಶ್ , ಬಿ.ನಾಗಭೂಷಣ್ , ಕೆರೆಕೊಂಡಾಪುರ ಪರಮೇಶ್ , ನಾಗರಾಜ ಕಟ್ಟೆ, ರಾಯಾಪುರ ನಾಗೇಂದ್ರಪ್ಪ, ಎಸ್ .ಖಾದರ್ , ಯರ್ಜೇನಹಳ್ಳಿ ನಾಗರಾಜ್ , ಜಿಯಾವುಲ್ಲಾ, ಎಸ್ .ಪರಮೇಶ್ , ಹಾಲೇಶ್ , ಗುರುಸಿದ್ದಪ್ಪ ಇದ್ದರು.
----
14 ಎಂಎಲ್ ಕೆ ಪಿ 1
ಮೊಳಕಾಲ್ಮುರು ತಾಲೂಕು ತಾಪಂ ಕಚೇರಿ ಆವರಣದಲ್ಲಿಮಂಗಳವಾರ ಏರ್ಪಡಿಸಿದ್ದ ಡಾ.ಬಿ.ಆರ್ .ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಮ್ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಎನ್ .ವೈ.ಗೋಪಾಲಕೃಷ್ಣ ಉದ್ಘಾಟಿಸಿದರು.

