ವಿಕ ಸುದ್ದಿಲೋಕ ಕಾರ್ಕಳ
ಶಿರ್ಲಾಲು ಪಡಿಬೆಟ್ಟು ಸ.ಕಿ.ಪ್ರಾ. ಶಾಲೆಯಲ್ಲಿಚಿಣ್ಣರ ಚಿಲಿಪಿಲಿ ಶಿರ್ಲಾಲು ಗ್ರಾಮಮಟ್ಟದ ಬೇಸಿಗೆ ಶಿಬಿರ ನಡೆಯಿತು.
ಅಜೆಕಾರು ಸಿ.ಎ. ಬ್ಯಾಂಕ್ ಮಾಜಿ ಅಧ್ಯಕ್ಷ ಅನಂತರಾಜ ಪೂವಣಿ ಉದ್ಘಾಟಿಸಿದರು.
ಶಾಂತಿರಾಜ ಜೈನ್ , ರಾಜ್ಯ ಸಂಪನ್ಮೂಲ ವ್ಯಕ್ತಿ ಸಂಜೀವ ದೇವಾಡಿಗ, ಶಿರ್ಲಾಲು ಸ.ಪ.ಪೂ. ಕಾಲೇಜಿನ ಪ್ರಿನ್ಸಿಪಾಲ್ ಬೇಬಿ ಕೆ. ಈಶ್ವರಮಂಗಲ, ಸತೀಶ್ ನಾಯಕ್ ದೇರೆಮಾರು, ಅರುಣ್ ಪ್ರಸಾದ್ ಪಡಿವಾಳ್ , ರೋಹನ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಸಿವಿಲ್ ಎಂಜಿನಿಯರ್ , ಕಂಟ್ರಾಕ್ಟರ್ ರೋಹನ್ ಆಚಾರ್ಯ ಅವರು ಶಾಲಾ ಗ್ರಂಥಾಲಯದ ಪುಸ್ತಕಗಳ ಜೋಡಣೆಗೆ ಅಗತ್ಯವಾಗಿದ್ದ ಅಲ್ಮೇರಾವನ್ನು ಕೊಡುಗೆಯಾಗಿ ನೀಡಿದರು. ರಾಜ್ಯಮಟ್ಟದ ಜ್ಯೋತಿ ಬಾಪುಲೆ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ನಿತ್ಯಾನಂದ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ಎಸ್ ಡಿಎಂಸಿ ಅಧ್ಯಕ್ಷ ಕೃಷ್ಣ ಆಚಾರ್ಯ ಸ್ವಾಗತಿಸಿದರು. ಸಹಶಿಕ್ಷಕಿ ಪ್ರಫುಲ್ಲಾಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಶಿಕ್ಷಕ ನಿತ್ಯಾನಂದ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ನಿಖಿತಾ ವಂದಿಸಿದರು.
ಫೊಟೋಕ್ಯಾಪ್ಶನ್ -ಚಿಣ್ಣರ ಚಿಲಿಪಿಲಿ ಕಾರ್ಯಕ್ರಮದಲ್ಲಿಜ್ಯೋತಿ ಬಾಪುಲೆ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ನಿತ್ಯಾನಂದ ನಾಯಕ್ ಅವರನ್ನು ಸನ್ಮಾನಿಸಲಾಯಿತು.ಫೊಟೋ:14ಕೆವಿ-ಎಸ್ ಆರ್ ಎಲ್

