ಬೇಸಿಗೆ ರಜೆಯ ಮೋಜಲ್ಲಿ ಟ್ರಾವೆಲ್ ಸ್ಕೂಲಿಂಗ್
ಇಂಟ್ರೊ: ಶಿಕ್ಷಣದ ಭಾಗವಾದ ಟ್ರಾವೆಲ್ ಸ್ಕೂಲಿಂಗ್ ಈ ಬೇಸಿಗೆ ರಜೆಯಲ್ಲಿಮಕ್ಕಳು ಮತ್ತು ಪೋಷಕರ ನಡುವಿನ ಬಂಧ ಬೆಸೆಯುವ ಸೇತುವೆಯೂ ಹೌದು.
ಲವಲವಿಕೆ ಸುದ್ದಿಲೋಕ
ಸ್ಲಗ್ ; ಪೆರೇಂಟಿಂಗ್ ಟ್ರೆಂಡ್
ಬೇಸಿಗೆ ರಜೆಯಲ್ಲಿಮಕ್ಕಳು ಹಾಗೂ ಪೋಷಕರ ಮಧುರ ಬಂಧ ಪ್ರವಾಸದಲ್ಲಿಅರಳುತ್ತದೆ. ನಾಲ್ಕು ಗೋಡೆಗಳ ನಡುವೆ ಇಲ್ಲದ ಅನ್ಯೋನತೆಯೊಂದು ಯಾನದಲ್ಲಿಹುಟ್ಟುತ್ತದೆ. ಅದೇ ಈಗ ಟ್ರಾವೆಲ್ ಸ್ಕೂಲಿಂಗ್ ಹೆಸರಿನಲ್ಲಿಗಮನ ಸೆಳೆಯುತ್ತಿದೆ. ಟ್ರಾವೆಲ್ ಸ್ಕೂಲಿಂಗ್ ಎನ್ನುವುದು ಶಿಕ್ಷಣದ ಒಂದು ಭಾಗವಾದರೂ ಆಧುನಿಕ ಪೆರೇಂಟಿಂಗ್ ನಲ್ಲಿಇದು ಗಮನ ಸೆಳೆಯುತ್ತಿದೆ. ಇದು ಕೇವಲ ಪ್ರವಾಸವಲ್ಲ, ಪ್ರಪಂಚವನ್ನೇ ತರಗತಿಯನ್ನಾಗಿ ಮಾಡಿಕೊಂಡು ಕಲಿಯುವ ಒಂದು ಜೀವನಶೈಲಿ. ಬೇಸಿಗೆ ರಜೆ ಈ ಕಲ್ಪನೆಗೆ ಇನ್ನಷ್ಟು ಉತ್ತೇಜನ ನೀಡುತ್ತದೆ.
ಒಟ್ಟಿಗೆ ಹೊಸತರ ಅನ್ವೇಷಣೆ
ನಿತ್ಯದ ಗಡಿಬಿಡಿಯ ಜೀವನದಲ್ಲಿಪೋಷಕರು ಮತ್ತು ಮಕ್ಕಳು ಗುಣಮಟ್ಟದ ಸಮಯವನ್ನು ಒಟ್ಟಿಗೆ ಕಳೆಯುವುದು ಕಷ್ಟ. ಆದರೆ ಟ್ರಾವೆಲ್ ಸ್ಕೂಲಿಂಗ್ ಮೂಲಕ ಹೊಸ ವಿಷಯಗಳನ್ನು ಅನ್ವೇಷಿಸಬಹುದು. ಇದು ಕುಟುಂಬದ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಪ್ರಯಾಣದ ಸಮಯದಲ್ಲಿಯಾವುದೇ ಗಡಿಬಿಡಿ ಇಲ್ಲದ ಕಾರಣ, ಪೋಷಕರು ಮತ್ತು ಮಕ್ಕಳು ಪರಸ್ಪರ ಹೆಚ್ಚು ಮಾತನಾಡಲು ಸಮಯ ಸಿಗುತ್ತದೆ. ಹೊಸ ಜಾಗಗಳನ್ನು ನೋಡಿದಾಗ ಉಂಟಾಗುವ ಕುತೂಹಲ, ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸುವಾಗ ಮಾಡುವ ಚರ್ಚೆಗಳು ಅವರ ನಡುವಿನ ಸಂವಹನವನ್ನು ಹೆಚ್ಚಿಸುತ್ತದೆ. ಪ್ರಯಾಣದ ಯೋಜನೆ ರೂಪಿಸುವಾಗ, ದಾರಿ ಹುಡುಕುವಾಗ ಅಥವಾ ಹೊಸ ರುಚಿಯ ಆಹಾರ ಪ್ರಯತ್ನಿಸುವಾಗ ಪೋಷಕರು ಮಕ್ಕಳ ಅಭಿಪ್ರಾಯಕ್ಕೂ ಬೆಲೆ ನೀಡುತ್ತಾರೆ. ಇದರಿಂದ ಮಕ್ಕಳಲ್ಲಿಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಪೋಷಕರಿಗೆ ಮಕ್ಕಳ ಸಾಮರ್ಥ್ಯದ ಅರಿವಾಗುತ್ತದೆ. ಪ್ರಯಾಣವೆಂದ ಮೇಲೆ ಅಲ್ಲಿಸವಾಲುಗಳು ಇದ್ದೇ ಇರುತ್ತವೆ. ಇಂತಹ ಸಂದರ್ಭಗಳನ್ನು ಒಟ್ಟಾಗಿ ಎದುರಿಸುವಾಗ ಪೋಷಕರು ಮತ್ತು ಮಕ್ಕಳು ಪರಸ್ಪರ ಹೇಗೆ ಬೆಂಬಲವಾಗಿ ನಿಲ್ಲಬೇಕು ಎಂಬುದನ್ನು ಕಲಿಯುತ್ತಾರೆ. ಇದು ಭಾವನಾತ್ಮಕ ಬಂಧವನ್ನು ಗಟ್ಟಿಗೊಳಿಸುತ್ತದೆ. ಒಟ್ಟಾರೆ ಟ್ರಾವೆಲ್ ಸ್ಕೂಲಿಂಗ್ ಎನ್ನುವುದು ಪೋಷಕರು ಮತ್ತು ಮಕ್ಕಳ ನಡುವಿನ ಕೃತಕ ಅಂತರವನ್ನು ಹೋಗಲಾಡಿಸಿ, ಪ್ರೀತಿ ಮತ್ತು ಪರಸ್ಪರ ತಿಳುವಳಿಕೆಯ ಸೇತುವೆಯನ್ನು ನಿರ್ಮಿಸುತ್ತದೆ.
ಬಾಕ್ಸ್
ಪ್ರಾಯೋಗಿಕ ಕಲಿಕೆಗೆ ಒತ್ತು
ಇದು ಕೇವಲ ಮಕ್ಕಳು ಹಾಗೂ ಪೋಷಕರ ನಡುವಿನ ಬಂಧ ಬೆಸೆಯುವುದಿಲ್ಲ. ಶಿಕ್ಷಣದ ಒಂದು ವಿಭಿನ್ನ ಶೈಲಿಯೂ ಹೌದು. ಇಲ್ಲಿಮಕ್ಕಳು ಕೇವಲ ಶಾಲೆಯ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಪುಸ್ತಕ ಓದುವ ಬದಲು, ಪ್ರಪಂಚದಾದ್ಯಂತ ಸಂಚರಿಸುತ್ತಾ, ಪ್ರತ್ಯಕ್ಷ ಅನುಭವಗಳ ಮೂಲಕ ಕಲಿಯುತ್ತಾರೆ. ಪರಿಸರ, ಸಂಸ್ಕೃತಿ ಮತ್ತು ಇತಿಹಾಸವನ್ನು ಅಲ್ಲಿಗೆ ಭೇಟಿ ನೀಡಿಯೇ ಅರ್ಥಮಾಡಿಕೊಳ್ಳುವುದು ಇದರ ಮುಖ್ಯ ಉದ್ದೇಶ. ಇತಿಹಾಸ, ಸಂಸ್ಕೃತಿ, ವಿಜ್ಞಾನ ಮತ್ತು ಭಾಷೆಗಳನ್ನು ಅವುಗಳ ಮೂಲ ಸ್ಥಳಕ್ಕೆ ಹೋಗಿ ಕಲಿಯುವುದು ಮೋಜಿನದ್ದಷ್ಟೇ ಅಲ್ಲ, ತರಗತಿಯ ಪಾಠವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಪೂರಕ. ನಕ್ಷೆಗಳನ್ನು ಓದುವುದು, ವಿಭಿನ್ನ ಜನರೊಂದಿಗೆ ಸಂವಹನ ಮಾಡುವುದು ಮಕ್ಕಳಲ್ಲಿಆತ್ಮವಿಶ್ವಾಸ ಮತ್ತು ಸಮಯ ಪ್ರಜ್ಞೆಯನ್ನು ಬೆಳೆಸುತ್ತದೆ.

