ಡಾ. ಅಂಬೇಡ್ಕರ್ ಚಿಂತನೆ ಮೈಗೂಡಿಸಿಕೊಳ್ಳಿ((ಚೂರುಪಾರು...))

Contributed byhai.dhl562110@gmail.com|Vijaya Karnataka

ತೈಲಗೆರೆ ಗ್ರಾಮದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ 135ನೇ ಜನ್ಮದಿನ ಆಚರಿಸಲಾಯಿತು. ಡಾ. ಅಂಬೇಡ್ಕರ್‌ ಅವರ ಚಿಂತನೆಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಚಂದ್ರು ತಿಳಿಸಿದರು. ಅವರ ತತ್ವ, ಸಿದ್ಧಾಂತ ಇಂದಿಗೂ ಪ್ರಸ್ತುತವಾಗಿವೆ. ಶಿಕ್ಷಣದಿಂದ ಅಕ್ಷರ ಜ್ಞಾನ ನೀಡುವ ಕೆಲಸವನ್ನು ಸಮುದಾಯ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಹಲವು ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

discussion and inspiration from dr br ambedkars life

ಡಾ. ಅಂಬೇಡ್ಕರ್ ಚಿಂತನೆ ಮೈಗೂಡಿಸಿಕೊಳ್ಳಿ

ವಿಕ ಸುದ್ದಿಲೋಕ ಕುಂದಾಣ

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ಸಂಘಟನಾ ತಾಲೂಕು ಸಂಚಾಲಕ ಚಂದ್ರು ತಿಳಿಸಿದರು.

ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಪಂ ವ್ಯಾಪ್ತಿಯ ತೈಲಗೆರೆ ಗ್ರಾಮದಲ್ಲಿಸಂವಿಧಾನ ಶಿಲ್ಪಿ ಡಾ.ಬಿ.ಆರ್ .ಅಂಬೇಡ್ಕರ್ ಅವರ 135ನೇ ಜನ್ಮದಿನ ಅಂಗವಾಗಿ ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಡಾ.ಅಂಬೇಡ್ಕರ್ ರ ತತ್ವ, ಸಿದ್ಧಾಂತ ಇಂದಿಗೂ ಪ್ರಸ್ತುತವಾಗಿವೆ. ಅವರ ಚಿಂತನೆಗಳು ಮತ್ತು ಆಶಯಗಳ ಮೂಲಕ ನಮ್ಮೊಂದಿಗೆ ಇನ್ನು ಜೀವಂತವಾಗಿದ್ದಾರೆ ಎಂದು ಹೇಳಿದ ಅವರು, ಶಿಕ್ಷಣದಿಂದ ಅಕ್ಷರ ಜ್ಞಾನ ನೀಡುವ ಕೆಲಸವನ್ನು ಸಮುದಾಯ ಮಾಡಬೇಕು ಎಂದರು.

ಈ ಸಂದರ್ಭದಲ್ಲಿಮುಖಂಡರಾದ ಮಂಜುನಾಥ್ , ಮುನಿಯಪ್ಪ, ಅನಿಲ್ , ಗಂಗಾಧರ್ , ಪಟಾಲಪ್ಪ, ಮುರುಳಿ, ಭರತ್ , ಮುಕೇಶ್ , ಮುನೀಂದ್ರ, ಕಾರ್ತಿಕ್ , ಮುನಿರಾಜ್ , ಗ್ರಾಮಸ್ಥರು ಉಪಸ್ಥಿತರಿದ್ದರು.

ಚಿತ್ರ: 14 ಕುಂದಾಣ 2

ದೇವನಹಳ್ಳಿ ತಾಲೂಕಿನ ತೈಲಗೆರೆ ಗ್ರಾಮದಲ್ಲಿಡಾ.ಬಿ.ಆರ್ .ಅಂಬೇಡ್ಕರ್ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.