ಸುತ್ತಮುತ್ತ-ಪರ್ಶಿಯನ್ ಕೊಲ್ಲಿ

Contributed byJaya shree|Vijaya Karnataka
Vijay Karnataka

ಪರ್ಶಿಯನ್ ಕೊಲ್ಲಿ

ಜಾಗತಿಕ ತೈಲ ಸಾಗಣೆಯ ಜೀವನಾಡಿ ಎಂದೇ ಹೆಸರಾಗಿರುವ ಪರ್ಷಿಯನ್ ಕೊಲ್ಲಿಯ ‘ಹರ್ಮುಜ್ ಜಲಸಂಧಿ’ ಸುತ್ತ ಬಿಕ್ಕಟ್ಟಿನ ಪರಿಸ್ಥಿತಿ ಜನಿರ್ಮಾಣವಾಗಿದೆ. 2026ರ ಆರಂಭದಿಂದಲೂ ಇರಾನ್ ಮತ್ತು ಅಮೆರಿಕದ ನಡುವಿನ ಯುದ್ಧವು ಈಗ ನೌಕಾ ಸಮರದ ಹಂತಕ್ಕೆ ತಲುಪಿದ್ದು, ಇಡೀ ವಿಶ್ವದ ಗಮನವನ್ನು ತನ್ನತ್ತ ಸೆಳೆದಿದೆ. ಕಿರಿದಾದ ಪ್ರದೇಶವಾದರೂ, ಭೌಗೋಳಿಕವಾಗಿ ಸಾಕಷ್ಟು ಮಹತ್ವವನ್ನು ಪಡೆದಿರುವ ಹಾಗೂ ಸದ್ಯ ಭಾರಿ ಸುದ್ದಿಯಲ್ಲಿರುವ ಪರ್ಶಿಯನ್ ಕೊಲ್ಲಿಎಲ್ಲಿದೆ? ಅದರ ವಿಶೇಷತೆಗಳೇನು? ಭೌಗೋಳಿಕವಾಗಿ ಯಾಕಿಷ್ಟು ಮಹತ್ವವನ್ನು ಹೊಂದಿದೆ? ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಭೌಗೋಳಿಕ ಹಿನ್ನೆಲೆ ಮತ್ತು ವ್ಯಾಪ್ತಿ:

ಪರ್ಷಿಯನ್ ಕೊಲ್ಲಿಯು ಅರಬ್ಬೀ ಸಮುದ್ರದ ಪರ್ಯಾಯ ದ್ವೀಪ ಮತ್ತು ನೈಋುತ್ಯ ಇರಾನ್ ನಡುವೆ ಇರುವ ಹಿಂದೂ ಮಹಾಸಾಗರದ ಒಳಸಮುದ್ರ (ಒಂದು ಕವಲಿನಂತೆ ಒಳಚಾಚಿಕೊಂಡಿರುವ)ವಾಗಿದೆ. ಇದು ಸುಮಾರು 2.5ಲಕ್ಷ ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದ್ದು, ಸುಮಾರು 989 ಕಿಲೋಮೀಟರ್ ಉದ್ದವಾಗಿದೆ. ಇದರ ಸರಾಸರಿ ಆಳ ಕೇವಲ 50 ಮೀಟರ್ ಗಳಷ್ಟಿದ್ದು, ಇದು ವಿಶ್ವದ ಅತ್ಯಂತ ಆಳವಿಲ್ಲದ ಸಮುದ್ರಗಳಲ್ಲಿಒಂದಾಗಿದೆ. ಇಲ್ಲಿನ ಭೌಗೋಳಿಕ ಲಕ್ಷಣವೇ ಇಲ್ಲಿಹಡಗುಗಳ ಸಂಚಾರಕ್ಕೆ ಸವಾಲೊಡ್ಡುತ್ತದೆ.

ಹರ್ಮುಜ್ ಜಲಸಂಧಿಯೊಂದಿಗೆ ನಂಟು: ಪರ್ಷಿಯನ್ ಕೊಲ್ಲಿಯು ಹೊರಜಗತ್ತಿಗೆ ಸಂಪರ್ಕ ಹೊಂದುವುದು ಕೇವಲ ಈ ಒಂದು ಕಿರಿದಾದ ಮಾರ್ಗದಿಂದ ಮಾತ್ರ. ಅದೇ ‘ಹರ್ಮುಜ್ ಜಲಸಂಧಿ’. ಇದು ಪರ್ಷಿಯನ್ ಕೊಲ್ಲಿಯನ್ನು ಓಮನ್ ಗಲ್ ್ಫ ಮತ್ತು ಅರಬ್ಬೀ ಸಮುದ್ರಕ್ಕೆ ಸಂಪರ್ಕಿಸುತ್ತದೆ. ವಿಶ್ವದ ಒಟ್ಟು ಕಚ್ಚಾ ತೈಲ ಸಾಗಣೆಯ ಸುಮಾರು ಶೇ.20-30ರಷ್ಟು ಭಾಗ ಈ ಕಿರಿದಾದ ಹಾದಿಯ ಮೂಲಕವೇ ಸಾಗುತ್ತದೆ. ಈ ಜಲಸಂಧಿಯ ಅತ್ಯಂತ ಕಿರಿದಾದ ಭಾಗ ಕೇವಲ 39 ಕಿಲೋಮೀಟರ್ ಅಗಲವಿದ್ದು, ಇಲ್ಲಿಯಾವುದೇ ಅಡ್ಡಿ ಉಂಟಾದರೂ ಜಾಗತಿಕ ಆರ್ಥಿಕತೆಯ ಮೇಲೆ ನೇರ ಹೊಡೆತ ಬೀಳುತ್ತದೆ.

ಜಾಗತಿಕ ಇಂಧನ ಭಂಡಾರ: ಈ ಪ್ರದೇಶವು ವಿಶ್ವದ ಅತಿದೊಡ್ಡ ತೈಲ ಮತ್ತು ನೈಸರ್ಗಿಕ ಅನಿಲದ ನಿಕ್ಷೇಪಗಳನ್ನು ಹೊಂದಿದೆ. ಜಗತ್ತಿನ ಒಟ್ಟು ತೈಲ ನಿಕ್ಷೇಪದ ಅರ್ಧಕ್ಕಿಂತ ಹೆಚ್ಚು ಭಾಗ ಮತ್ತು ಸುಮಾರು ಮೂರನೇ ಒಂದು ಭಾಗದಷ್ಟು ನೈಸರ್ಗಿಕ ಅನಿಲದ ನಿಕ್ಷೇಪಗಳು ಇಲ್ಲಿನ ಎಂಟು ಗಲ್ ್ಫ ರಾಷ್ಟ್ರಗಳಲ್ಲಿವೆ. ಈ ಕಾರಣದಿಂದಲೇ ಪರ್ಷಿಯನ್ ಕೊಲ್ಲಿಯನ್ನು ವಿಶ್ವದ ‘ಶಕ್ತಿ ಕೇಂದ್ರ’ ಎಂದು ಕರೆಯಲಾಗುತ್ತದೆ. ಭಾರತದ ಕಚ್ಚಾ ತೈಲ ಆಮದಿನ ಅರ್ಧಕ್ಕಿಂತ ಹೆಚ್ಚು ಪಾಲು ಇದೇ ಮಾರ್ಗವಾಗಿ ಬರುವುದರಿಂದ ಭಾರತಕ್ಕೆ ಇಲ್ಲಿನ ಶಾಂತಿ ಸ್ಥಿರತೆ ಬಹಳ ಮುಖ್ಯ.

ಭಾರತದ ದೃಷ್ಟಿಕೋನ ಮತ್ತು ಸವಾಲುಗಳು: ಭಾರತಕ್ಕೆ ಪರ್ಷಿಯನ್ ಕೊಲ್ಲಿಯು ಕೇವಲ ತೈಲ ಮೂಲವಲ್ಲ, ಬದಲಾಗಿ ಸುಮಾರು 80-90 ಲಕ್ಷ ಭಾರತೀಯರು ಈ ಗಲ್ ್ಫ ರಾಷ್ಟ್ರಗಳಲ್ಲಿಕೆಲಸ ಮಾಡುತ್ತಿದ್ದಾರೆ. ಇವರು ಕಳುಹಿಸುವ ಹಣ ಭಾರತದ ವಿದೇಶಿ ವಿನಿಮಯ ಮೀಸಲು ಹೆಚ್ಚಿಸಲು ದೊಡ್ಡ ನೆರವಾಗುತ್ತದೆ. ಪ್ರಸ್ತುತ ನಡೆಯುತ್ತಿರುವ ಯುದ್ಧದಂತಹ ಪರಿಸ್ಥಿತಿಯು ಈ ಅನಿವಾಸಿ ಭಾರತೀಯರ ಸುರಕ್ಷತೆ ಮತ್ತು ಭಾರತದ ಆರ್ಥಿಕತೆಯ ಮೇಲೆ ಸವಾಲೊಡ್ಡಿದೆ. ಆದ್ದರಿಂದಲೇ ಭಾರತವು ‘ಫ್ರೀಡಂ ಆಫ್ ನ್ಯಾವಿಗೇಷನ್ ’ (ಮುಕ್ತ ಸಂಚಾರ ಹಕ್ಕು) ಪರವಾಗಿ ನಿಂತಿದ್ದು, ಇರಾ ಮತ್ತು ಅರಬ್ ದೇಶಗಳೊಂದಿಗೆ ರಾಜತಾಂತ್ರಿಕ ಮಾತುಕತೆಗಳನ್ನು ಮುಂದುವರಿಸಿದೆ.

ಬಾಕ್ಸ್ :

ಗಡಿ ಹಂಚಿಕೊಂಡಿರುವ ದೇಶಗಳು:

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಪರ್ಷಿಯನ್ ಕೊಲ್ಲಿಯೊಂದಿಗೆ ಗಡಿ ಹಂಚಿಕೊಂಡಿರುವ ದೇಶಗಳ ಬಗ್ಗೆ ಪದೇಪದೆ ಪ್ರಶ್ನೆ ಕೇಳಲಾಗುತ್ತದೆ. ಈ ಕೊಲ್ಲಿಯ ಉತ್ತರಕ್ಕೆ ಇರಾನ್ ಇದ್ದರೆ, ಪಶ್ಚಿಮಕ್ಕೆ ಇರಾಕ್ ಮತ್ತು ಕುವೈತ್ ಇವೆ. ಪಶ್ಚಿಮ ಮತ್ತು ದಕ್ಷಿಣ ಭಾಗದಲ್ಲಿಸೌದಿ ಅರೇಬಿಯಾ, ಕತಾರ್ , ಬಹ್ರೇನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ದೇಶಗಳಿವೆ. ಪೂರ್ವದ ತುದಿಯಲ್ಲಿಓಮನ್ ದೇಶದ ಮುಸಂದಮ್ ಪ್ರಾಂತ್ಯವು ಹರ್ಮುಜ್ ಜಲಸಂಧಿಯ ಬಳಿ ಗಡಿಯನ್ನು ಹೊಂದಿದೆ. ಈ ಎಂಟು ದೇಶಗಳನ್ನು ಸಾಮಾನ್ಯವಾಗಿ ‘ಗಲ್ ್ಫ ರಾಷ್ಟ್ರಗಳು’ ಎಂದು ಕರೆಯಲಾಗುತ್ತದೆ.