ಸಿರುಗುಪ್ಪ ಒಂದು ಪುಟ

Contributed byHeera Naik|Vijaya Karnataka
Vijay Karnataka

* ಹೆಣ್ಣುಮಕ್ಕಳ ಕಲಿಕೆಗೆ ಒತ್ತು ನೀಡಿದ ಶಿಕ್ಷಣ ಸಂಸ್ಥೆ

* ಮಹಿಳಾ ಸಬಲೀಕರಣವೇ ಸಂಸ್ಥೆಯ ಮುಖ್ಯಧ್ಯೇಯ

* ಶಿಕ್ಷಣ ಕ್ಷೇತ್ರಕ್ಕೆ ಸಿರುಗುಪ್ಪ ವಿದ್ಯಾ ಸಂಸ್ಥೆ ಸೇವೆ ಅನನ್ಯ

ಗುಣಾತ್ಮಕ ಶಿಕ್ಷಣಕ್ಕೆ ಎಸ್ ಇಎಸ್ ಸಂಸ್ಥೆ ಮುನ್ನಡಿ

ಹೆಣ್ಣುಮಕ್ಕಳ ಸಬಲೀಕರಣವೇ ಮುಖ್ಯ ಧ್ಯೇಯವಾಗಿಟ್ಟುಕೊಂಡಿರುವ ಸಿರುಗುಪ್ಪ ವಿದ್ಯಾ ಸಂಸ್ಥೆ (ಎಸ್ ಇಎಸ್ ) ಹೆಣ್ಣುಮಕ್ಕಳಿಗೆ ಅದರಲ್ಲೂಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶ ಹೊಂದಿದ್ದು, ಗುಣಾತ್ಮಕ ಶಿಕ್ಷಣಕ್ಕೆ ಎಸ್ ಇಎಸ್ ಬಾಲಕಿಯರ ಪದವಿಪೂರ್ವ ಕಾಲೇಜು ಮುನ್ನಡಿ ಬರೆದಿದೆ.

ಸಿರುಗುಪ್ಪ ವಿದ್ಯಾ ಸಂಸ್ಥೆಯು 1973ರಲ್ಲಿಕರ್ನಾಟಕ ರಾಜ್ಯದ ಮಾಜಿ ಸಚಿವರು ಹಾಗೂ ಸಿರುಗುಪ್ಪ ವಿದ್ಯಾ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ದಿ.ಬಿ.ಇ. ರಾಮಯ್ಯ ಅವರ ಅಧ್ಯಕ್ಷತೆಯಲ್ಲಿಪ್ರಾರಂಭವಾಯಿತು. ಸಿರುಗುಪ್ಪ ನಗರದಲ್ಲಿಪ್ರಾಥಮಿಕ ಹಂತದಿಂದ ಪದವಿ ಮಟ್ಟದವರೆಗೆ ಗುಣಾತ್ಮಕ ಶಿಕ್ಷಣ ನೀಡುತ್ತಾ ಮುಂದೆ ಸಾಗಿದೆ. ಪ್ರಸ್ತುತ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ.ಇ. ದೊಡ್ಡಯ್ಯ ಅವರು ಸಿರುಗುಪ್ಪ ನಗರದ ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿದ್ದಾರೆ. ಎಸ್ .ಇ.ಎಸ್ . ಬಾಲಕಿಯರ ಪದವಿ ಪೂರ್ವ ಕಾಲೇಜು ಹೆಣ್ಣುಮಕ್ಕಳಿಗೆ ಸುರಕ್ಷತೆಯ ವಾತಾವರಣ, ಮೂಲಭೂತ ಸೌಲಭ್ಯಗಳೊಂದಿಗೆ ಸುಸಜ್ಜಿತವಾದ ಕಟ್ಟಡವನ್ನು, ಅನುಭವಿ ಉಪನ್ಯಾಸಕರಗಳನ್ನೊಳಗೊಂಡ ಕಲಾ ಹಾಗೂ ವಾಣಿಜ್ಯ ವಿಭಾಗಗಳನ್ನು ಹೊಂದಿದೆ. ಅದರ ಸದುಪಯೋಗವನ್ನು ಎಲ್ಲವಿದ್ಯಾರ್ಥಿನಿಯರು ಪಡೆದುಕೊಳ್ಳಬೇಕಿದೆ.

* ಸಿರುಗುಪ್ಪ ವಿದ್ಯಾ ಸಂಸ್ಥೆ ನಡೆದು ಬಂದ ದಾರಿ

ಶ್ರೀ ಬಿ.ಇ. ರಾಮಯ್ಯ ಅವರು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬಾಗೇವಾಡಿ ಗ್ರಾಮದ ಶ್ರೀಪೊಂಪಯ್ಯ ಮತ್ತು ಶ್ರೀಮತಿ ಪಾರ್ವತಮ್ಮ ದಂಪತಿಯ ಮಗನಾಗಿ 1932 ಜೂನ್ 1 ರಂದು ಶ್ರೀಮಂತ ಆರ್ಯವೈಶ್ಯ ಕುಟುಂಬದಲ್ಲಿಜನಿಸಿದರು. ಬಿ.ಎ. ಪದವಿ ಪಡೆದ ಅವರು ವ್ಯವಸಾಯ, ವ್ಯಾಪಾರ ಮತ್ತು ಮಕ್ಕಳ ಶಿಕ್ಷಣಕ್ಕಾಗಿ ಸಿರುಗುಪ್ಪ ನಗರಕ್ಕೆ ಬಂದು ನೆಲೆಸಿದರು.

1955 ರಲ್ಲಿಮೈಸೂರು ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ಆಯ್ಕೆಯಾದರು. ಸಿರುಗುಪ್ಪ ತಾಲೂಕು ಕಾಂಗ್ರೆಸ್ ಸಮಿತಿ ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಪಕ್ಷದ ಏಳಿಗೆಗೆ ಶ್ರಮಿಸಿದರು. 1957, 1972 ಮತ್ತು 1978 ರಲ್ಲಿಸಿರುಗುಪ್ಪ ತಾಲೂಕು ಶಾಸಕರಾಗಿ ಆಯ್ಕೆಯಾದರು. ಮಂತ್ರಿಗಳಾಗಿ ಕೆಲಸ ಮಾಡಿದರು. ತಾಲೂಕು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜನ ಮೆಚ್ಚಿದ ನಾಯಕರಾಗಿ ಗುರುತಿಸಿಕೊಂಡರು. ಸಿರುಗುಪ್ಪ ತಾಲೂಕು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ, ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರ ಸಂಘಕ್ಕೆ ನಿರ್ದೇಶಕರಾಗಿ ಮತ್ತು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಸಿರುಗುಪ್ಪ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾಗಿ ಸಮಾಜ ಸೇವೆಯಲ್ಲಿತಮ್ಮನ್ನು ತಾವು ತೊಡಗಿಸಿಕೊಂಡರು. ಶಿಕ್ಷಣ ಕ್ಷೇತ್ರದಲ್ಲಿಯೂ ತುಂಬಾ ಮಹತ್ವದ ಸಾಧನೆ ಮಾಡಿದರು.

*ಶಿಕ್ಷಣ ಭೀಷ್ಮ ದಿ.ಬಿ.ಇ.ರಾಮಯ್ಯ

ಯಾವುದೇ ನಗರ ಅಥವಾ ಪ್ರದೇಶ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣ ಬೇಕೇ ಬೇಕು. ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ವಿದ್ಯೆಯೇ ಮುಖ್ಯ ಹಾಗಾಗಿ ಸಿರುಗುಪ್ಪ ನಗರದಲ್ಲಿಶಿಕ್ಷಣದ ಸಮಸ್ಯೆ ಬಹುದೊಡ್ಡ ಸಮಸ್ಯೆಯಾಗಿತ್ತು. ಸಿರುಗುಪ್ಪ ನಗರದ ಸುತ್ತ-ಮುತ್ತಲು ತುಂಬಾ ಹಳ್ಳಿಗಳಿವೆ. ಅಂತಹ ಹಳ್ಳಿಯಲ್ಲಿಪ್ರಾಥಮಿಕ ಶಾಲೆಯನ್ನು ಮುಗಿಸಿದ ಮೇಲೆ ಪ್ರೌಢ ಮತ್ತು ಪದವಿ ಶಿಕ್ಷಣವನ್ನು ಪಡೆಯಲು ಬಹುದೂರದ ನಗರಗಳಿಗೆ ಹೋಗಬೇಕಾಗಿತ್ತು. ಬಡ ವಿದ್ಯಾರ್ಥಿಗಳು ದೂರದ ನಗರಗಳಿಗೆ ಹೋಗಿ ಶಿಕ್ಷಣ ಪಡೆಯುವ ಸಾಮರ್ಥ್ಯವಿರಲಿಲ್ಲ. ಅಂತಹ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಖ್ಯಾತ ರಾಜಕೀಯ ಧುರೀಣರು, ಮಾಜಿ ಮಂತ್ರಿಗಳು ಮತ್ತು ‘ಶಿಕ್ಷಣ ಭೀಷ್ಮ’ ಎಂಬ ಅಭಿದಾನಕ್ಕೆ ಪಾತ್ರರಾದ ದಿ. ಶ್ರೀ ಬಿ.ಇ. ರಾಮಯ್ಯನವರು ಸಿರುಗುಪ್ಪ ನಗರದಲ್ಲಿಪ್ರಪ್ರಥಮ ಬಾರಿಗೆ ಸಿರುಗುಪ್ಪ ವಿದ್ಯಾ ಸಂಸ್ಥೆ, ಸಿರುಗುಪ್ಪ (ಎಸ್ ಇಎಸ್ ) ಎಂಬ ವಿದ್ಯಾ ಸಂಸ್ಥೆಯನ್ನು 1973-74 ರಲ್ಲಿಹುಟ್ಟು ಹಾಕಿದರು. ಈ ವಿದ್ಯಾ ಸಂಸ್ಥೆಯಡಿ ವಿ.ಕೆ.ಜೆ.ಜೆ. ಎಂಬ ಪದವಿ ಪೂರ್ವ ಕಾಲೇಜನ್ನು ಪ್ರಾರಂಭ ಮಾಡಿದರು. ಅಂದು ನೆಟ್ಟ ಈ ಶಿಕ್ಷಣದ ಗಿಡ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ.

ವಿ.ಕೆ.ಜೆ.ಜೆ. ಪದವಿ ಪೂರ್ವ ಕಾಲೇಜಿನಲ್ಲಿಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಿವೆ. ಈ ಕಾಲೇಜಿನಲ್ಲಿಓದಿದ ಸಾವಿರಾರು ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಈ ಎಲ್ಲಕೀರ್ತಿ ಸಂಸ್ಥಾಪಕ ಅಧ್ಯಕ್ಷ ದಿ. ಶ್ರೀ ಬಿ.ಇ. ರಾಮಯ್ಯನವರಿಗೆ ಸಲ್ಲುತ್ತದೆ.

* ಶಿಕ್ಷಣ ಕ್ಷೇತ್ರದಲ್ಲಿಕ್ರಾಂತಿ

1974-75ರಲ್ಲಿಸಿರುಗುಪ್ಪ ವಿದ್ಯಾ ಸಂಸ್ಥೆ ಅಡಿಯಲ್ಲಿಎಸ್ ಇಎಸ್ ಆಂಗ್ಲಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಬಿ.ಇ. ರಾಮಯ್ಯನವರು ಪ್ರಾರಂಭ ಮಾಡಿದರು. ಇಂಗ್ಲಿಷ್ ಭಾಷೆಯಲ್ಲಿಕಲಿಸುವ ಅನಿವಾರ್ಯತೆಯಿದೆ ಎಂಬ ಉದ್ದೇಶದಿಂದ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಅಧ್ಯಕ್ಷರು ಆಂಗ್ಲಮಾಧ್ಯಮ ಶಾಲೆಯನ್ನು ಪ್ರಾರಂಭಮಾಡಿದುದು ಈ ಭಾಗದ ಮಕ್ಕಳಿಗೆ ತುಂಬ ಅನುಕೂಲವಾಗಿದೆ.

1978-79 ರಲ್ಲಿದಿ. ಬಿ.ಇ. ರಾಮಯ್ಯ ಅವರು ಹೆಣ್ಣುಮಕ್ಕಳಿಗೆ ಶಿಕ್ಷಣ ದೊರೆಯದ ಹೊರತು ಸಮ-ಸಮಾಜ ನಿರ್ಮಾಣವಾಗದು ಎನ್ನುವ ಉದ್ದೇಶದಿಂದ ಎಸ್ ಇಎಸ್ ಬಾಲಕಿಯರ ಪ್ರೌಢಶಾಲೆಯನ್ನು ಪ್ರಾರಂಭಿಸಿದರು. 1984-85ರಲ್ಲಿಸಿರುಗುಪ್ಪ ತಾಲೂಕಿನ ಮಕ್ಕಳು ತಾಂತ್ರಿಕ ಶಿಕ್ಷಣದಿಂದ ವಂಚಿತರಾಗಬಾರದೆಂಬ ಧೈಯೋದ್ದೇಶದಿಂದ ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭಿಸಿದರು. 1989-90 ರಲ್ಲಿಎಸ್ ಇಎಸ್ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭಿಸಿ, ನಗರದ ಹೆಣ್ಣು ಮಕ್ಕಳಿಗೆ ಕನ್ನಡದಲ್ಲಿಯೂ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುತ್ತಾ ಬಂದಿರುವುದು ಗಮನಾರ್ಹ. 1986-87 ರಲ್ಲಿಔಷಧ ವಿಜ್ಞಾನ (ಫಾರ್ಮಸಿ) ಕಾಲೇಜು ಪ್ರಾರಂಭ ಮಾಡುವ ಮೂಲಕ ದೂರದ ನಗರಗಳಿಂದ ಮತ್ತು ಬೇರೆ ಬೇರೆ ರಾಜ್ಯಗಳಿಂದ ಬಂದು ಇಲ್ಲಿತರಬೇತಿ ಪಡೆದು ಸಾವಿರಾರು ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರದಲ್ಲಿಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ.

ಹೆಣ್ಣು ಮಕ್ಕಳು ಈ ಸಮಾಜದಲ್ಲಿತಲೆ ಎತ್ತಿ ಬದುಕಬೇಕು ಎಂದರೆ ಅವರೂ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಶಿಕ್ಷಣವೂ ವ್ಯಕ್ತಿತ್ವದ ಸರ್ವಾಂಗೀಣ ಅಭಿವೃದ್ಧಿಗೆ ಮೂಲ ಕಾರಣವಾಗಿದೆ. ಅದು ಹೆಣ್ಣಿರಲಿ ಗಂಡಿರಲಿ ಸ್ವಾವಲಂಬಿ ಬದುಕಿಗೆ ಶಿಕ್ಷಣ ಬೇಕೇ ಬೇಕು. ಶಿಕ್ಷಣದ ಕ್ರಾಂತಿಯಿಂದ ಇಂದಿನ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆದುಕೊಂಡು ಎಲ್ಲಕ್ಷೇತ್ರಗಳಲ್ಲಿಉದ್ಯೋಗ ಮಾಡುತ್ತಿದ್ದಾರೆ. ಎಲ್ಲಿಯೂ ಹಿಂದೆ ಬೀಳದೆ ಪುರುಷನಷ್ಟೇ ನಾನು ಸರಿಸಮಾನಳು ಎಂಬುದನ್ನು ತೋರಿಸಿ ಕೊಟ್ಟಿದ್ದಾಳೆ. ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿಶಿಕ್ಷಣ ಪಡೆದುಕೊಳ್ಳಲಿ ಎಂದು ಪ್ರತ್ಯೇಕ ಕಾಲೇಜು ಸ್ಥಾಪಿಸಿದ್ದಾರೆ. ಈ ಸಂಸ್ಥೆಯಲ್ಲಿಕಲಿತ ಸಾವಿರಾರು ಹೆಣ್ಣು ಮಕ್ಕಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರು ಸ್ವಾವಲಂಬಿ ಜೀವನ ನಡೆಸುತ್ತಿರುವುದು ಅಧ್ಯಕ್ಷ ದಿ. ಶ್ರೀ ಬಿ.ಇ. ರಾಮಯ್ಯ ಅವರ ಶ್ರಮದ ದ್ಯೋತಕವಾಗಿದೆ.

* ಕಾಲೇಜಿನ ವಿಶೇಷತೆಗಳು

* ಸುಸಜ್ಜಿತ ಕಟ್ಟಡ ಪಿಠೋಪಕರಣ ಸೌಲಭ್ಯ

* ಅತ್ಯುತ್ತಮ ಗ್ರಂಥಾಲಯ ಸೌಲಭ್ಯ

* 25 ವರ್ಷ ಮೇಲ್ಪಟ್ಟ ಅನುಭವಿ ಉಪನ್ಯಾಸಕರಿಂದ ಬೋಧನೆ

* ಪ್ರತಿ ಮೂರು ತಿಂಗಳಿಗೊಮ್ಮೆ ಪೋಷಕರಿಗೆ ವಿದ್ಯಾರ್ಥಿಗಳ ಪ್ರಗತಿ ಕುರಿತು ಸಂವಾದ

* ನಗರದ ಮಧ್ಯ ಭಾಗದಲ್ಲಿಕಾಲೇಜು ಸ್ಥಾಪನೆ

* ಬಾಲಕಿಯರ ಕ್ರೀಡಾ ಚಟುವಟಿಕೆಗಳಿಗೆ ಅದ್ಯತೆ

* ವಿದ್ಯಾರ್ಥಿನಿಯರ ಆರೋಗ್ಯ ಕುರಿತು ಕಾರ್ಯಾಗಾರ

ಸಿರುಗುಪ್ಪ ವಿದ್ಯಾ ಸಂಸ್ಥೆಯ ಶಾಲಾ ಕಾಲೇಜುಗಳು

*ವಿ.ಕೆ.ಜೆ.ಜೆ. ಪ.ಪೂ. ಕಾಲೇಜು, ಸಿರುಗುಪ್ಪ (ಅನುದಾನಿತ)- 1973-75

*ಎಸ್ ಇಎಸ್ ಆಂಗ್ಲಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ, ಸಿರುಗುಪ್ಪ- 1974-75

*ಎಸ್ ಇಎಸ್ ಬಾಲಕಿಯರ ಪ್ರೌಢಶಾಲೆ, ಸಿರುಗುಪ್ಪ (ಕನ್ನಡ ಮಾಧ್ಯಮ) (ಅನುದಾನಿತ) -1978-79

* ಎಸ್ ಇಎಸ್ ಪಾಲಿಟೆಕ್ನಿಕ್ ಕಾಲೇಜು, ಸಿರುಗುಪ್ಪ (ಅನುದಾನಿತ) - 1985-86

*ಎಸ್ ಇಎಸ್ ಔಷಧ ವಿಜ್ಞಾನ (ಫಾರ್ಮಸಿ) ಕಾಲೇಜು, ಸಿರುಗುಪ್ಪ - 1986-87

*ಎಸ್ ಇಎಸ್ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ, ಸಿರುಗುಪ್ಪ (ಕ.ಮಾಧ್ಯಮ) -1989-90

*ಎಸ್ ಇಎಸ್ ಬಾಲಕಿಯರ ಸಂಯುಕ್ತ ಪ.ಪೂ. ಕಾಲೇಜು, ಸಿರುಗುಪ್ಪ (ಅನುದಾನಿತ)-1992-93

* ಎಸ್ ಇಎಸ್ ಗ್ರಾಮೀಣ ಕೈಗಾರಿಕಾ ಸಂಸ್ಥೆ, ಸಿರುಗುಪ್ಪ (ಅನುದಾನಿತ) - 1997-98

* ಎಸ್ ಇಎಸ್ ಶಿಕ್ಷಕರ ತರಬೇತಿ ಸಂಸ್ಥೆ, ಸಿರುಗುಪ್ಪ (ಡಿ.ಎಡ್ ) - 2004-05

* ಶ್ರೀಮತಿ ಹನುಮಂತಮ್ಮ ವೆಮೋರಿಯಲ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಪದವಿ ಮಹಾವಿದ್ಯಾಲಯ, ಸಿರುಗುಪ್ಪ - 2009-10

* ಶ್ರೀ ಬಿ.ಇ.ರಾಮಯ್ಯ ಸ್ಮಾರಕ ಬಾಲಕಿಯರ ಪದವಿಪೂರ್ವ ಕಾಲೇಜು, ಸಿರುಗುಪ್ಪ 2014-15

*ಶ್ರೀ ಬಿ.ಇ. ರಾಮಯ್ಯ ಮಹಿಳಾ ಪದವಿ ಮಹಾವಿದ್ಯಾಲಯ, ಸಿರುಗುಪ್ಪ - 2014-15

* ಶ್ರೀಮತಿ ಹನುಮಂತಮ್ಮ ಪದವಿ ಪೂರ್ವ ಕಾಲೇಜು, ಸಿರುಗುಪ್ಪ

* ಎಸ್ ಇಎಸ್ ಬಾಲಕಿಯರ ವಸತಿನಿಲಯ, ಸಿರುಗುಪ್ಪ - 2001-02

*ಎಸ್ ಇಎಸ್ ಬಾಲಕರ ವಸತಿ ನಿಲಯ, ಸಿರುಗುಪ್ಪ - 2009-10

ಕೋಟ್

ಹಲವು ದಶಕಗಳಿಂದ ಸಿರುಗುಪ್ಪದಲ್ಲಿಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರುವ ಎಸ್ ಇಎಸ್ ವಿದ್ಯಾಸಂಸ್ಥೆ ಪ್ರಸಕ್ತ ವರ್ಷದ ಫಲಿತಾಂಶದಲ್ಲಿಉತ್ತಮ ಅಂಕಗಳೊಂದಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಸಂಸ್ಥೆಗೆ ಮತ್ತಷ್ಟು ಶೈಕ್ಷಣಿಕ ಅಭಿವೃದ್ಧಿಗೆ ಪ್ರೇರಣೆ ನೀಡಿದಂತಾಗಿದೆ. ಮುಂದಿನ ದಿನಗಳಲ್ಲಿಸಂಸ್ಥೆಯಿಂದ ಮತ್ತಷ್ಟು ಶೈಕ್ಷಣಿಕ ಪ್ರಗತಿಗೆ ಶ್ರಮಿಸಲಾಗುವುದು.

- ಬಿ.ಇ.ದೊಡ್ಡಯ್ಯ,ಅಧ್ಯಕ್ಷರು, ಸಿರುಗುಪ್ಪ ವಿದ್ಯಾ ಸಂಸ್ಥೆ, ಸಿರುಗುಪ್ಪ.

ಹೆಚ್ಚಿನ ಮಾಹಿತಿಗಾಗಿ: ಸಿರುಗುಪ್ಪ ವಿದ್ಯಾ ಸಂಸ್ಥೆ (ರಿ), ಸಿರುಗುಪ್ಪ- 583121, ಬಳ್ಳಾರಿ ಜಿಲ್ಲೆ, ಅಧ್ಯಕ್ಷರು,ಮೊ: 9742048759, 9739466669, 9113247884, 9113247884ಗೆ ಸಂಪರ್ಕಿಸಬಹುದು.