ವಿಕ ಸುದ್ದಿಲೋಕ ಮಂಗಳೂರು
ಕೆನರಾ ಕಾಲೇಜು (ಸ್ವಾಯತ್ತ) ಮಂಗಳೂರಿನಲ್ಲಿನಡೆದ ರಾಷ್ಟ್ರೀಯ ಮಟ್ಟದ ಮೂಲ ವಿಜ್ಞಾನ ಮತ್ತು ಗಣಕ ವಿಜ್ಞಾನ ಸಮ್ಮೇಳನದಲ್ಲಿರಾಜಕೀಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಗಣೇಶ್ ಶೆಟ್ಟಿ ಯು. ಬಂಬ್ರಾಣ ಬರೆದ *ಪೊಲಿಟಿಕ್ಸ್ , ಸೊಸೈಟಿ ಆಂಡ್ ಎಕಾನಮಿ* ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಮಂಗಳೂರು ಮತ್ತು ಕೊಡಗು ವಿಶ್ವವಿದ್ಯಾಲಯಗಳ 4ನೇ ಸೆಮಿಸ್ಟರ್ ಬಿಎ (ಎಸ್ .ಇ.ಪಿ ಪಠ್ಯಕ್ರಮ) ವಿದ್ಯಾರ್ಥಿಗಳಿಗಾಗಿ ಸಿದ್ಧಪಡಿಸಲಾದ ಈ ಕೃತಿಯನ್ನು ಡಿಪಾಟ್ಮೆಂರ್ ಟ್ ಆಫ್ ಕೋಲೇಜಿಯೇಟ್ ಎಜುಕೇಶನ್ ನ ಮಂಗಳೂರು ವಲಯ ಜಂಟಿ ನಿರ್ದೇಶಕಿ ಪ್ರೊ. ಡಾ. ಕೆ.ಆರ್ . ಕವಿತಾ ಬಿಡುಗಡೆಗೊಳಿಸಿದರು.
ಸಂಸ್ಥೆಯ ಸಂಚಾಲಕ ಸಿಎ ಎಂ. ಜಗನ್ನಾಥ ಕಾಮತ್ ಮಾತನಾಡಿ, ಇಂತಹ ಪುಸ್ತಕಗಳು ವಿದ್ಯಾರ್ಥಿಗಳಿಗೆ ವಿಷಯದ ಆಳವಾದ ಅರಿವು ಮೂಡಿಸಲು ಹಾಗೂ ಶೈಕ್ಷಣಿಕ ಗುಣಮಟ್ಟವನ್ನು ವೃದ್ಧಿಸಲು ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಕಾಲೇಜು ಪ್ರಿನ್ಸಿಪಾಲ್ ಡಾ. ಪ್ರೇಮಲತಾ ವಿ., ವ್ಯವಸ್ಥಾಪಕ ಕೆ. ಶಿವಾನಂದ ಶೆಣೈ, ಆಡಳಿತಾಧಿಕಾರಿ ಡಾ. ದೀಪ್ತಿ ನಾಯಕ್ , ಕೃತಿಕಾರ ಡಾ. ಗಣೇಶ್ ಶೆಟ್ಟಿ ಯು ಬಂಬ್ರಾಣ, ಐಕ್ಯೂಎಸಿ ಹಾಗೂ ಕಾರ್ಯಕ್ರಮ ಸಂಯೋಜಕರು ಉಪಸ್ಥಿತರಿದ್ದರು.
ಫೊಟೋ:
12ಎ-ಪುಸ್ತಕ
*ಪೊಲಿಟಿಕ್ಸ್ , ಸೊಸೈಟಿ ಆಂಡ್ ಎಕಾನಮಿ* ಪುಸ್ತಕ ಬಿಡುಗಡೆ ಮಾಡಲಾಯಿತು.

