- ಮೂಕ ಪ್ರಾಣಿ ಮೇಲಿನ ಅಭಿಮಾನಕ್ಕೆ ಮೆಚ್ಚುಗೆ
ವಿಕ ಸುದ್ದಿಲೋಕ ಸಂಕೇಶ್ವರ
ಸಮೀಪದ ಬುಗಟೆ ಆಲೂರು ಗ್ರಾಮದ ರೈತ ಕುಟುಂಬವೊಂದು ತಮ್ಮ ಮನೆಯ ಹಸುವಿಗೆ ಶಾಸ್ತೊ್ರೕಕ್ತವಾಗಿ ಸೀಮಂತ ನೆರವೇರಿಸಿದ್ದು ಎಲ್ಲರ ಗಮನ ಸೆಳೆದಿದೆ.
ಗ್ರಾಮದ ಪ್ರಗತಿಪರ ರೈತ ದಂಪತಿ ಸವಿತಾ ಮತ್ತು ರಾಜೇಂದ್ರ ಕಿಲ್ಲೇದಾರ ಅವರು ಈ ವಿಶಿಷ್ಟ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ. ತಮಗೆ ಹೆಣ್ಣು ಮಗಳಿಲ್ಲಎಂಬ ಕೊರತೆಯನ್ನು ಈ ಹಸು ನೀಗಿಸಿದೆ ಎಂಬುದು ಈ ದಂಪತಿ ನಂಬಿಕೆ. ಹೀಗಾಗಿಯೇ, ಸವಿತಾ ಕಿಲ್ಲೇದಾರ ಅವರ ಆಸೆಯಂತೆ ಗರ್ಭಿಣಿ ಹಸುವಿಗೆ ಸೀಮಂತ ಆಯೋಜಿಸಲಾಗಿತ್ತು.
ಹಬ್ಬದ ವಾತಾವರಣ: ಈ ವಿಶೇಷ ದಿನದಂದು ಕಿಲ್ಲೇದಾರ ಅವರ ಮನೆಯನ್ನು ಹೂವು ಹಾಗೂ ತೋರಣಗಳಿಂದ ಅಲಂಕರಿಸಲಾಗಿತ್ತು. ಬಂಧು-ಬಳಗದವರು ಹಾಗೂ ಗ್ರಾಮಸ್ಥರು ಈ ಸಂಭ್ರಮದಲ್ಲಿಪಾಲ್ಗೊಂಡಿದ್ದರು.ಗ್ರಾಮದ ಸುಮಂಗಲೆಯರು ಒಗ್ಗೂಡಿ ಹಸುವಿಗೆ ಅರಿಶಿನ-ಕುಂಕುಮ ಹಚ್ಚಿ, ಸಾಂಪ್ರದಾಯಿಕವಾಗಿ ಉಡಿ ತುಂಬಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳಿಗೆ ಕುಟುಂಬದ ವತಿಯಿಂದ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಮೂಕಪ್ರಾಣಿಯ ಮೇಲಿರುವ ಪ್ರೀತಿ ಮತ್ತು ಕಿಲ್ಲೇದಾರ ಕುಟುಂಬದ ಈ ಸಂಸ್ಕಾರಯುತ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
* ಕ್ವೋಟ್ಸ್
ನಮ್ಮ ಮನೆಯಲ್ಲಿಹುಟ್ಟಿದ ಹಸುವನ್ನು ನಾವು ಮೊದಲಿನಿಂದಲೂ ಮಗಳಂತೆಯೇ ಸಾಕಿದ್ದೇವೆ. ನಮ್ಮಲ್ಲಿಹೆಣ್ಣು ಮಗಳಿಲ್ಲಎಂಬ ಬೇಸರವಿತ್ತು. ಆದರೆ ಈ ಹಸು ಆ ಸ್ಥಾನವನ್ನು ತುಂಬಿದೆ.
- ಸವಿತಾ ಕಿಲ್ಲೇದಾರ
-15ಎಸ್ ಎನ್ ಕೆ2
ಬುಗಟೆ ಆಲೂರು ಗ್ರಾಮದಲ್ಲಿಕಿಲ್ಲೇದಾರ ಕುಟುಂಬವು ಹಸುವಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಿತು.

