ವಿಕ ಸುದ್ದಿಲೋಕ ಬಂಟ್ವಾಳ
ಬಾಳ್ತಿಲ ಗ್ರಾಮದ ಕಂಟಿಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿಸಾಂಸ್ಕೃತಿಕ ಕಲರವ ಹಾಗೂ ಯಕ್ಷಗಾನ ಕಾರ್ಯಕ್ರಮ ನಡೆಯಿತು
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸೌಮ್ಯಶ್ರೀ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಪದ್ಮಾವತಿ ಭಟ್ ಕಾರ್ಯಕ್ರಮ ಉದ್ಘಾಟಿಸಿದರು.
ಶಿಕ್ಷಕರ ಸಂಘದ ಪದಾಧಿಕಾರಿ ಸಂದೇಶ್ ಎಂ. ಎಸ್ . ದಿಕ್ಸೂಚಿ ಭಾಷಣ ಮಾಡಿದರು. ಶಾಲಾ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿದ ಅಲೆತ್ತೂರು ನರಸಿಂಹ ಮಯ್ಯ ಅವರನ್ನು ಸನ್ಮಾನಿಸಲಾಯಿತು. ಕಲಿಕಾ ಹಾಗೂ ಆಟೋಟ ಸ್ಪರ್ಧೆಗಳಲ್ಲಿವಿಜೇತ ಮಕ್ಕಳು, ಮಕ್ಕಳ ಪೋಷಕರು, ಶಾಲಾ ಹಿರಿಯ ವಿದ್ಯಾರ್ಥಿಗಳಿಗೆ ನಡೆಸಿದ ಸ್ಪರ್ಧೆಯಲ್ಲಿವಿಜೇತರಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು. ಶಾಲೆಗೆ ವಿಶೇಷ ರೀತಿಯಲ್ಲಿಸಹಕರಿಸಿದವರನ್ನು ಗುರುತಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿವೇಕ ಜಾಗೃತ ಬಳಗ ನರಿಕೊಂಬು ಅಧ್ಯಕ್ಷೆ ಜಯಲಕ್ಷ್ಮಿ, ಊರಿನ ಹಿರಿಯರಾದ ಮೋಹನ ಸಫಲ್ಯ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಾಧವ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಾಧವ ಮತ್ತಿತರರು ಉಪಸ್ಥಿತರಿದ್ದರು .
ನಿರೀಕ್ಷಾ, ಅಮೃತ, ಪಾವನಿ ಪ್ರಾರ್ಥಿಸಿದರು. ಶಾಲಾ ಮುಖ್ಯಶಿಕ್ಷಕಿ ಚೇತನ ಕುಮಾರಿ ಸ್ವಾಗತಿಸಿದರು. ಶಿಕ್ಷಕಿ ಮೋನಿಷ ವಂದಿಸಿದರು. ಶಿಕ್ಷಕಿ ಜಯಂತಿ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಅಧ್ಯಕ್ಷ ರಾಜೇಶ್ , ಮಾಜಿ ಪಂಚಾಯಿತಿ ಸದಸ್ಯ ರಾಜೇಶ್ , ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಸಹಕರಿಸಿದರು. ನಂತರ ಮಕ್ಕಳಿಂದ ಶ್ರೀದೇವಿ ವೈಷ್ಣವಿ ಮಹಾತ್ಮೆ ಯಕ್ಷಗಾನ ಹಾಗೂ ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ, ಶಾಲಾ ಮಕ್ಕಳಿಂದ, ಹಿರಿಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡಿತು. ಸಭಾ ಕಾರ್ಯಕ್ರಮದ ಮೊದಲು ಶ್ರೀಉಲ್ಲಾಳ್ತಿ ಭಜನಾ ಮಂಡಳಿ ಕಾಂಪ್ರಬೈಲು ಅವರಿಂದ ಭಜನಾ ಸಂಕೀರ್ತನೆ ಜರುಗಿತು.
ಚಿತ್ರ: 15ಬಿಎಚ್ ಬಾಳ್ತಿಲ
ಬಾಳ್ತಿಲ ಶಾಲೆಯಲ್ಲಿಸಾಂಸ್ಕೃತಿಕ ಕಲರವ ಕಾರ್ಯಕ್ರಮ ನಡೆಯಿತು.

