21ರಂದು ಸಿಎಂಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ತೀರ್ಮಾನ

Contributed bymaheshmadahalli.vk@gmail.com|Vijaya Karnataka

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏ.21ರಂದು ಗುಂಡ್ಲುಪೇಟೆಗೆ ಆಗಮಿಸುವಾಗ ರೈತ ಸಂಘ ಹಾಗೂ ಹಸಿರು ಸೇನೆ ವಾಸುದೇವ ಮೇಟಿ ಬಣದ ವತಿಯಿಂದ ಕಪ್ಪು ಪಟ್ಟಿ ಧರಿಸಿ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ. ಹಿಂದಿನ ಮನವಿಗಳಿಗೆ ಸ್ಪಂದನೆ ಸಿಗದ ಕಾರಣ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೆರೆಗಳಿಗೆ ನೀರು ತುಂಬಿಸದಿರುವುದು, ಹಣ ಮಾಡುವ ತಂತ್ರ, ವಲಸಿಗರಿಗೆ ಸುಲಭ ದಾಖಲಾತಿ, ರೈತರಿಗೆ ವಿಳಂಬ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಬಂಡೀಪುರದಲ್ಲಿ ಅನುದಾನ ದುರ್ಬಳಕೆ, ಕೇರಳಕ್ಕೆ ಖನಿಜ ಸಂಪತ್ತು ಸಾಗಾಟ ಮುಂತಾದ ಆರೋಪಗಳನ್ನು ಮಾಡಲಾಗಿದೆ.

decision to display black flag to cm district farmers union protest

ವಿಕ ಸುದ್ದಿಲೋಕ ಗುಂಡ್ಲುಪೇಟೆ

ಗುಂಡ್ಲುಪೇಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಏ.21 ರಂದು ಆಗಮಿಸುವಾಗ ಕಪ್ಪು ಪಟ್ಟಿ ಧರಿಸಿ ಧರಣಿ ಸತ್ಯಾಗ್ರಹ ನಡೆಸುವ ಜತೆಗೆ ಕಪ್ಪು ಬಾವುಟ ಪ್ರದರ್ಶಿಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ವಾಸುದೇವ ಮೇಟಿ ಬಣ)ದ ರಾಜ್ಯ ಕಾರ್ಯದರ್ಶಿ ಡಾ.ಗುರುಪ್ರಸಾದ್ ತಿಳಿಸಿದರು.

‘‘ಹಿಂದೆ ನಾವು ಕೊಟ್ಟ ಮನವಿ ಪತ್ರವನ್ನು ಕಸದ ಬುಟ್ಟಿಗೆ ಹಾಕಿದ್ದ ಕಾರಣ ನಾವು ಹೋರಾಟಕ್ಕೆ ಮುಂದಾಗಿದ್ದೇವೆ. ಕೆರೆಗಳಿಗೆ ನೀರು ತುಂಬಿಸಿಲ್ಲ. ನೂರೊಂದು ಕೆರೆಗಳ ಕಾಮಗಾರಿ ಹಣ ಮಾಡುವ ತಂತ್ರ ,’’ ಎಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿನಡೆದ ಪತ್ರಿಕಾಗೋಷ್ಠಿಯಲ್ಲಿಆರೋಪಿಸಿದರು.

‘‘ವಲಸಿಗರು ಸ್ಥಳೀಯರಾಗಲು ತಕ್ಷಣಕ್ಕೆ ದಾಖಲಾತಿಗಳು ಸಿಗುತ್ತವೆ. ಆದರೆ ರೈತರು ಇಟ್ಟಿಗೆ ಫ್ಯಾಕ್ಟರಿ ಗೆ ಅನುಮತಿ ಪಡೆಯಲು ವಷÜರ್ ಗಟ್ಟಲೆ ಕಾಯಬೇಕು. ಭಾಷೆ ಬಾರ ಮತ್ತು ಕಡತಗಳ ಅನುಮೋದನೆಗೆ ಎಐ ತಂತ್ರಜ್ಞಾನದ ಪರಿಶೀಲನೆ ಮೊರೆÜ ಹೋಗುವ ಉಪವಿಭಾಗಾಧಿಕಾರಿ ಇದ್ದೂ ಇಲ್ಲದಂತೆ ಎಂದು ಬೇಸರ ವ್ಯಕ್ತಪಡಿಸಿದರು. ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿಪ್ರಭಾವಿ ವ್ಯಕ್ತಿ ಶಿಫಾರಸಿನ ಮೂಲಕ ಚಿತ್ರೀಕರಣ ನಡೆಸಿದ ಕೇರಳಿಗರು ಪಾದರಕ್ಷೆ ಧರಿಸಿ, ಮಾಂಸದ ಅಡುಗೆ ತಯಾರಿಸಿ ಸೇವಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ,’’ ಎಂದು ಬೇಸರಿಸಿದರು. ವೈಯನಾಡಿನ ಎಂಪಿ ಮುಂದೆ ನಮ್ಮ ಅಧಿಕಾರಿ, ಜನಪ್ರತಿನಿಧಿಗಳು ಗುಲಾಮಗಿರಿ ಪ್ರದರ್ಶಿಸಿಸುತ್ತಿದ್ದಾರೆ ಎಂದು ಆರೋಪಿಸಿದರು.

‘‘ಲಂಟನಾ ಇತರೆ ಕಳೆ ತೆರವು, ಕೆರೆ, ಕಟ್ಟೆ ಅಭಿವೃದ್ಧಿ ನೆಪ ಹೇಳಿ ವಾರ್ಷಿಕ 30 ಕೋಟಿ ಅನುದಾನವನ್ನು ಬಂಡೀಪುರದಲ್ಲಿನುಂಗಿ ನೀರು ಕುಡಿಯಲಾಗುತ್ತಿದೆ. ಸರಕಾರಿ ವಾಹನಗಳಲ್ಲಿಅಧಿಕಾರಿಗಳ ಸಂಬಂಧಿಕರಿಗೆ ಬಂಡೀಪುರ ಟೂರ್ ಮಾಡಿಸಲಾಗುತ್ತಿದೆ. ಕೇರಳಕ್ಕೆ ತೆರಳುವ ರಸ್ತೆಯನ್ನು ರಾತ್ರಿ ಮುಕ್ತಗೊಳಿಸಲು ಸಂಚು ನಡೆಸಿ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗೂ ಬೇಲದ ಕುಪ್ಪೆ ಮಹದೇಶ್ವರ ದೇವಾಲಯಗಳಿಗೆ ಭಕ್ತರ ನಿಬಂರ್ ಧ ಎಷಟು ಸರಿ,’’ ಎಂದು ಪ್ರಶ್ನಿಸಿದರು.

‘‘ದಿಲ್ಲಿಯುವರಾಣಿ ಮೆಚ್ಚಿಸಲು ಕೋಟ್ಯಂತರ ಹಣವನ್ನು ವೈಯನಾಡಿಗೆ ನೀಡಲಾಗಿದೆ. ಮುಕ್ತ ಸಂಚಾರ ನಡೆಸಲು ಸುರಂಗದ ಯೋಜನೆಗೆ ನಕಾಶೆ ತಯಾರಿಸುವುದು ಹಾಗೂ ಯಥೇಚ್ಛವಾದ ಖನಿಜ ಸಂಪತ್ತನ್ನು ಕೇರಳಕ್ಕೆ ಒಯ್ಯಲು ಅನುಮತಿ ನೀಡಿದೆ,’’ ಎಂದು ಆರೋಪಿಸಿದರು.

ಜಿಲ್ಲಾಧ್ಯಕ್ಷ ಮಾಡ್ರಹಳ್ಳಿಮಹದೇವಪ್ಪ, ಪ್ರಧಾನ ಕಾರ್ಯದರ್ಶಿ, ಕುಂದಕೆರೆ ಸಂಪತ್ತು, ಜಿಲ್ಲಾಸಂಚಾಲಕ ಲೋಕೇಶ್ , ತಾಲೂಕು ಅಧ್ಯಕ್ಷ ಕೆ.ಎಸ್ .ಮಹೇಶ್ , ಹಸಿರು ಸೇನೆ ತಾಲೂಕು ಅಧ್ಯಕ್ಷ ಹಿರಿಕಾಟಿಚಿಕ್ಕಣ್ಣ, ಕಾರ್ಯದರ್ಶಿ ಬೆಟ್ಟಹಳ್ಳಿಗುರು, ಶಂಭುಲಿಂಗಪ್ಪ, ಮಣಿಕಂಠ, ನಂದೀಶ, ಮಹೇಶ, ದೊರೆಸ್ವಾಮಿ, ಕೋಡಹಳ್ಳಿರಘು, ಮಹೇಶ, ಸುರೇಶ ಹೊಸಳ್ಳಿಹುಂಡಿ ಹಾಜರಿದ್ದರು.